ರಾಂಚಿ: ಮದ್ಯ (Alcohol) ಹಾಗೂ ದನದ ಮಾಂಸವನ್ನು (Beef) ಸೇವಿಸಲು ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬನಿಗೆ 5 ಜನರು ಸೇರಿ ದೊಣ್ಣೆ ಹಾಗೂ ಕಲ್ಲುಗಳಿಂದ ಥಳಿಸಿದ ಘಟನೆ ಜಾರ್ಖಂಡ್‍ನ (Jharkhand) ಸಾಹಿಬ್‍ಗಂಜ್‍ನ ರಾಧಾನಗರ ಗ್ರಾಮದಲ್ಲಿ ನಡೆದಿದೆ.
ಚಂದನ್ ರವಿದಾಸ್ ಹಲ್ಲೆಗೊಳಗಾದ ವ್ಯಕ್ತಿ. ದನದ ಮಾಂಸವನ್ನು ತಿನ್ನಲು ನಿರಾಕರಿಸಿದ್ದಕ್ಕಾಗಿ ಮಿಥುನ್ ಶೇಖ್ ಹಾಗೂ ಇತರ ನಾಲ್ವರು ಸೇರಿ ಥಳಿಸಿದ್ದಾರೆ ಎಂದು ಚಂದನ್ ರವಿದಾಸ್ ಆರೋಪಿಸಿದ್ದಾನೆ.
ಪಂಕಿಜ ಮೋರ್‌ನಲ್ಲಿರುವ ಅಂಗಡಿಯೊಂದಕ್ಕೆ ಚಂದನ್ ಹೋಗಿದ್ದ. ಆ ಅಂಗಡಿಯ ಹಿಂದೆ ಐವರು ಸೇರಿ ದನದ ಮಾಂಸವನ್ನು ಕುಡಿದು ಸೇವಿಸುತ್ತಿರುವುದು ಕಂಡು ಬಂದಿದೆ. ಇದೇ ವೇಳೆ ಚಂದನ್‍ಗೆ ಹಾಗೂ ಆ ಐವರಿಗೆ ತೀವ್ರ ವಾಗ್ವಾದ ನಡೆದಿದೆ. ಅದಾದ ಬಳಿಕ ಆ ಐವರು ಚಂದನ್‍ಗೆ ಬಲವಂತವಾಗಿ ಗೋಮಾಂಸ ತಿನ್ನಲು ಯತ್ನಿಸಿದ್ದಾರೆ. ಇದನ್ನೂ ಓದಿ: ಅನ್ಯ ಸಮುದಾಯದವರೊಂದಿಗೆ ಮಗ ಮಾತನಾಡಿದ್ದಕ್ಕೆ ನೆರೆಹೊರೆಯವರಿಂದ ತಂದೆಯ ಹತ್ಯೆ
ಇದಕ್ಕೆ ಚಂದನ್ ನಿರಾಕರಿಸಿದ್ದಕ್ಕೆ ಆತನ ಮೇಲೆ ಆರೋಪಿಗಳು ಕಲ್ಲು (Stone) ತೂರಿ ಮೊಬೈಲ್‍ನ್ನು ಕಿತ್ತುಕೊಂಡಿದ್ದಾರೆ. ನಂತರ ಚಂದನ್‍ನಿಂದ 8 ಸಾವಿರ ರೂ. ದೋಚಿದ್ದಾರೆ ಆರೋಪಿಸಿದರು. ಘಟನೆಗೆ ಸಂಬಂಧಿಸಿ ಚಂದನ್ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಿದ್ದೇಶ್ವರ ಶ್ರೀಗಳ ಅಂತ್ಯಸಂಸ್ಕಾರಕ್ಕೆ ಭರದ ಸಿದ್ಧತೆ- ಸಂಜೆ 5 ಗಂಟೆ ವೇಳೆಗೆ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ