ಬಾಲಿವುಡ್ ನಟ ರಣವೀರ್ ಸಿಂಗ್ ನಗ್ನ ಫೋಟೋಶೂಟ್ ಮಾಡಿಸಿಕೊಂಡು ಸಖತ್ ಸುದ್ದಿ ಆಗಿದ್ದರು. ಈ ಕಾರಣಕ್ಕಾಗಿ ಅವರು ಪೊಲೀಸ್ ಸ್ಟೇಶನ್ ಮೆಟ್ಟಿಲು ಕೂಡ ಹತ್ತಬೇಕಾಯಿತು. ನಗ್ನತೆಯ ಅಶ್ಲೀಲತೆಯನ್ನು ಸಮಾಜಕ್ಕೆ ತೋರಿಸುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ಅವರ ಮೇಲೆ ದೂರು ಕೂಡ ದಾಖಲಾಯಿತು. ಆದರೂ, ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾಗೆ ಸಮಾಧಾನ ಆದಂತೆ ತೋರುತ್ತಿಲ್ಲ. ಹಾಗಾಗಿ ರಣವೀರ್ ನಗ್ನ ಫೋಟೋ ಶೂಟ್ ಬಗ್ಗೆ ಅವರು ಕಾಮೆಂಟ್ ಮಾಡಿದ್ದಾರೆ.
ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಶೆರ್ಲಿನಾ, ಈ ನಗ್ನತೆಯ ಕುರಿತಾಗಿ ಹೆಣ್ಣು ಮತ್ತು ಗಂಡಸನ್ನು ಕಾಣುವ ಬಗೆಯ ಕುರಿತು ಅವರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಗಂಡಸು ನಗ್ನನಾದರೆ ಸಮಾಜ ಏನೂ ಅನ್ನುವುದಿಲ್ಲ. ಓಕೆ ಅಂದು ಮುಂದೆ ಸಾಗುತ್ತದೆ. ಅದೇ ಹೆಂಗಸು ಈ ರೀತಿ ಮಾಡಿದರೆ, ಅವಳನ್ನು ಕಾಣುವ ರೀತಿಯೇ ಬೇರೆ ಎಂದಿದ್ದಾರೆ. ನಗ್ನದ ವಿಷಯದಲ್ಲಿ ಗಂಡು, ಹೆಣ್ಣು ಸರಿಯಾದ ರೀತಿಯಲ್ಲೇ ಕಾಮೆಂಟ್ ಬರಬೇಕು ಅಲ್ಲವಾ? ಎಂದು ಪ್ರಶ್ನೆ ಮಾಡಿದ್ದಾರೆ.
ರಣವೀರ್ ಸಿಂಗ್ ನಗ್ನ ಫೋಟೋ ಶೂಟ್ ಮಾಡಿಸಿಕೊಂಡಾಗ ಸಾಕಷ್ಟು ಜನರು ಅವರ ಬೆಂಬಲಕ್ಕೆ ನಿಂತರು. ಕೆಲವರಂತೂ ಅದೇ ಹಾದಿಯಲ್ಲೇ ಹೋಗಿ ಅವರೂ ಹಾಗೆಯೇ ಫೋಟೋ ಶೂಟ್ ಮಾಡಿಸಿಕೊಂಡರು. ಆದರೆ, ಈ ಹಿಂದೆ ನನಗೆ ಯಾರೂ ಬೆಂಬಲ ನೀಡಲಿಲ್ಲ. ನಗ್ನ ಫೋಟೋ ಶೂಟ್ ನಲ್ಲಿ ಭಾಗಿಯಾದಾಗ ನನ್ನನ್ನು ಕ್ಯಾರೆಕ್ಟರ್ ಲೆಸ್ ಎಂದು ಜರಿದರು. ಯಾರಿಗೆಲ್ಲ ಹೋಲಿಸಿದರು ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: ಸಾನ್ಯ ಮನೆಯಿಂದ ಮದುವೆ ಪ್ರಪೋಸಲ್ ಬಂದರೆ ರೂಪೇಶ್ ಶೆಟ್ಟಿ ಹೇಳೋದೇನು?
ಶೆರ್ಲಿನಾ ಚೋಪ್ರಾರನ್ನು ಯಾರು ಕ್ಯಾರೆಕ್ಟರ್ ಲೆಸ್ ಎಂದು ಜರಿದಿದ್ದರೋ, ಅವರು ಕೂಡ ನನ್ನಂತೆಯೇ ಫೋಟೋ ಶೂಟ್ ನಲ್ಲಿ ಭಾಗಿಯಾಗಿದ್ದರು. ಆವಾಗ ಅವರು ಅದನ್ನು ಕರೆದುಕೊಂಡಿದ್ದು ಗ್ಲಾಮರ್ ಅಂತ. ಈ ಉದ್ಯಮದಲ್ಲಿ ತಮಗೆ ಬೇಕಾದಾಗ ಒಂದು ರೀತಿ, ಬೇಡವಾದಾಗ ಮತ್ತೊಂದು ರೀತಿ ಕಾಣುವ ಜನರಿದ್ದಾರೆ ಎಂದು ತಮ್ಮ ಅಳಲನ್ನು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ ಶೆರ್ಲಿನಾ.