ತುಮಕೂರು: ಲಾರಿ ಟೈರ್ (Lorry Tyre) ಪರಿಶೀಲನೆ ಮಾಡುವಾಗ ಸ್ಫೋಟಗೊಂಡು ಚಾಲಕ ಸಾವಿಗೀಡಾಗಿರುವ ಘಟನೆ ತುಮಕೂರು (Tumakuru) ಜಿಲ್ಲೆಯ ತಿಪಟೂರು ತಾಲೂಕಿನ ಕೆ.ಬಿ. ಕ್ರಾಸ್ ಬಳಿ ನಡೆದಿದೆ.
ಕೊರಟಗೆರೆ ತಾಲೂಕಿನ ಸೋಂಪುರ ಗ್ರಾಮದ ನಿವಾಸಿ ವೆಂಕಟೇಶ್ (43) ಮೃತ ದುರ್ದೈವಿ. ಇವರು ಲಾರಿ ಓಡಿಸಿಕೊಂಡು ಜೀವನೋಪಾಯ ಮಾಡುತ್ತಿದ್ದರು. ಇದನ್ನೂ ಓದಿ: ಒಡಿಶಾದಲ್ಲಿ ಮತ್ತೊಬ್ಬ ರಷ್ಯಾ ವ್ಯಕ್ತಿಯ ಶವ ಪತ್ತೆ – 15 ದಿನದಲ್ಲಿ 3ನೇ ಘಟನೆ
ಲಾರಿ ಟೈರ್ ಹೀಟ್ ಆಗಿತ್ತು. ಅದನ್ನು ಪರಿಶೀಲಿಸಲು ವೆಂಕಟೇಶ್ ಮುಂದಾಗಿದ್ದಾರೆ. ಈ ವೇಳೆ ಲಾರಿ ಟೈರ್ ಸ್ಫೋಟಗೊಂಡು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕಿಬ್ಬಹನಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವಿಜಯಪುರದ ಜೀವಂತ ದೇವರ ಅಗಲುವಿಕೆಯಿಂದ ನಾಡಿಗೇ ಆಘಾತ: ನಳಿನ್ ಕುಮಾರ್ ಕಟೀಲ್