ನವದೆಹಲಿ: ಪ್ರಧಾನಿ ಮೋದಿ (Narendra Modi) ಯವರು ತಮ್ಮ ತಾಯಿ ಹೀರಾಬೆನ್ (Heeraben Modi) ಜೊತೆಗೆ ಅದ್ಭುತ ಬಾಂಧವ್ಯ ಹೊಂದಿದ್ದರು.
ಮೋದಿಯವರು ದೇಶಕ್ಕೆ ಪ್ರಧಾನಿ, ಆದರೆ ಅಮ್ಮನ ಪಾಲಿಗೆ ಸದಾ ಮೋದಿ ಮುದ್ದಿನ ಮಗನಾಗಿದ್ದರು. ತಾಯಿ ನೂರನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಮೋದಿ ಭಾವನಾತ್ಮಕ ಬ್ಲಾಗ್ ಬರೆದಿದ್ದರು. ಅದರಲ್ಲಿ ಅಮ್ಮನ ಬದುಕು ಹಾಗೂ ಅವರೊಂದಿಗಿನ ಭಾಂದವ್ಯವನ್ನು ಬಿಚ್ಚಿಟ್ಟಿದ್ದರು. ಅಮ್ಮನೊಂದಿಗೆ ಕಳೆದ ತಮ್ಮ ಬಾಲ್ಯದ ವಿಶೇಷ ಕ್ಷಣಗಳನ್ನು ಅಂದು ಮೆಲುಕು ಹಾಕಿಕೊಂಡಿದ್ದರು. ಇದನ್ನೂ ಓದಿ: ಇಂದೇ ಮೋದಿ ತಾಯಿ ಹೀರಾಬೆನ್ ಅಂತ್ಯಕ್ರಿಯೆ
ಭಾವನಾತ್ಮಕ ಪತ್ರ: ಇಂದು, ನನ್ನ ತಾಯಿ ಹೀರಾಬೆನ್ ಬಾಯಿ ಮೋದಿ ನೂರನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ ಎಂದು ಹಂಚಿಕೊಳ್ಳಲು ನಾನು ತುಂಬಾ ಸಂತೋಷವಾಗುತ್ತಿದೆ ಮತ್ತು ನನಗೆ ಅಂತಹ ಅದೃಷ್ಟ ಸಿಕ್ಕಿದೆ. ಇದು ಅವರ ಜನ್ಮ ಶತಮಾನೋತ್ಸವ ವರ್ಷವಾಗಲಿದೆ. ತಮ್ಮ ಬಾಲ್ಯದಲ್ಲಿ ತಮ್ಮ ತಾಯಿ ಎದುರಿಸಿದ ಕಷ್ಟಗಳನ್ನು ಸ್ಮರಿಸಿಕೊಂಡ ಮೋದಿ ಅವರು, ನನ್ನ ತಾಯಿ ಎಷ್ಟು ಅಸಾಮಾನ್ಯರೋ, ಇತರೆ ತಾಯಂದಿರಂತೆ ಅಷ್ಟೇ ಸರಳ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೀರಾಬೆನ್ ವಿಧಿವಶ- ತಾಯಿ ಮಾತುಗಳನ್ನು ಸ್ಮರಿಸಿಕೊಂಡು ಮೋದಿ ಭಾವುಕ ಟ್ವೀಟ್
ಬಾಲ್ಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಯಿ ತಮ್ಮ ತಾಯಿಯನ್ನು ಕಳೆದು ಕೊಂಡಿದ್ದರು. ಆಕೆಗೆ ನನ್ನ ಅಜ್ಜಿಯ ಮುಖವೂ ಕೂಡ ನೆನಪಿನಲ್ಲಿಲ್ಲ ಅಥವಾ ಆಕೆಯ ಮಡಿಲಲ್ಲಿ ಮಲಗಿದ್ದು ನೆನಪಿಲ್ಲ. ಆಕೆ ತನ್ನ ಇಡೀ ಬಾಲ್ಯವನ್ನು ತಾಯಿಯಿಲ್ಲದೆ ಕಳೆದರು. ವಡ್ನಗರದಲ್ಲಿ ಮಣ್ಣಿನ ಗೋಡೆಗಳು ಮತ್ತು ಮೇಲ್ಛಾವಣಿಗೆ ಮಣ್ಣಿನ ಹೆಂಚು ಹೊಂದಿದ್ದ ಪುಟ್ಟ ಮನೆಯಲ್ಲಿ ಪೋಷಕರು ಹಾಗೂ ಒಡಹುಟ್ಟಿದವರೊಂದಿಗೆ ಜೊತೆ ವಾಸಿಸುತ್ತಿದ್ದುದನ್ನು ಅವರು ಸ್ಮರಿಸಿದ್ದಾರೆ. ಪ್ರತಿ ದಿನ ತಮ್ಮ ತಾಯಿ ಎದುರಿಸುತ್ತಿದ್ದ ಹಲವು ಅಡೆತಡೆಗಳು ಮತ್ತು ಅದರಿಂದ ಅವರು ಯಶಸ್ವಿಯಾಗಿ ಹೊರಬರುತ್ತಿದ್ದ ಹಲವು ಘಟನೆಗಳನ್ನು ಉಲ್ಲೇಖಿಸಿದ್ದರು.
ತಮ್ಮ ತಾಯಿ ಮನೆಯ ಎಲ್ಲ ಕೆಲಸಗಳನ್ನು ತಾನೇ ಮಾಡುತ್ತಿದ್ದುದಲ್ಲದೆ, ಕುಟುಂಬದ ಅಲ್ಪ ಆದಾಯಕ್ಕೆ ಪೂರಕವಾಗಿಯೂ ಕೆಲಸ ಮಾಡುತ್ತಿದ್ದರು. ಆಕೆ ಕೆಲವು ಮನೆಗಳಲ್ಲಿ ಪಾತ್ರೆಗಳನ್ನು ತೊಳೆಯುತ್ತಿದ್ದರು ಮತ್ತು ಮನೆ ಖರ್ಚುಗಳನ್ನು ನಿಭಾಯಿಸಲು ಚರಕ ತಿರುಗಿಸಲು ಸಮಯ ಹೊಂದಿಸಿಕೊಳ್ಳುತ್ತಿದ್ದರು. ಮಳೆ ಬಂದಾಗ ನಮ್ಮ ಮನೆಯ ಛಾವಣಿ ಸೋರುತ್ತಿತ್ತು ಮತ್ತು ಮನೆಯಲ್ಲಿ ಪ್ರವಾಹ ಏರ್ಪಡುತ್ತಿತ್ತು. ನನ್ನ ತಾಯಿ ಮಳೆ ನೀರನ್ನು ಸಂಗ್ರಹಿಸಲು ನೀರು ಸೋರುತ್ತಿದ್ದ ಜಾಗದಲ್ಲಿ ಬಕೆಟ್ ಹಾಗೂ ಪಾತ್ರೆಗಳನ್ನು ಇಡುತ್ತಿದ್ದರು. ಇಂತಹ ಪ್ರತಿಕೂಲ ಸಂದರ್ಭಗಳಲ್ಲೂ ನನ್ನ ತಾಯಿ ಪುಟಿದೇಳುವ ಅಥವಾ ಸ್ಥೈರ್ಯದ ಸಂಕೇತವಾಗಿದ್ದಾರೆ ಎಂದು ನರೇಂದ್ರ ಮೋದಿ ಭಾವನಾತ್ಮಕವಾಗಿ ಬರೆದು ಕೊಂಡಿದ್ರು.