ಪಂಚಮಸಾಲಿ ಸಮಾಜಕ್ಕೆ 2D ಮೀಸಲಾತಿ – ಸಂಪುಟ ಸಭೆಯಲ್ಲಿ ನಿರ್ಧಾರ

Public TV
2 Min Read
j.c.madhuswamy

ಬೆಳಗಾವಿ: ಪಂಚಮಸಾಲಿ (Panchamasali) ಸಮಾಜಕ್ಕೆ 2ಎ ಮೀಸಲಾತಿ (Reservation) ಕಲ್ಪಿಸಬೇಕು ಎಂದು ಆಗ್ರಹಿಸಿ ನಡೆಸುತ್ತಿರುವ ಹೋರಾಟಕ್ಕೆ ಕೊನೆಗೂ ಸರ್ಕಾರ ಮಣಿದಿದೆ. ಮೀಸಲಾತಿ ಕೆಟಗರಿಯಲ್ಲಿ ಹಲವು ಬದಲಾವಣೆಯೊಂದಿಗೆ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕಲ್ಪಿಸಲು ಸರ್ಕಾರ ಮುಂದಾಗಿದೆ.

2C ಮತ್ತು 2D ಎಂಬ ಎರಡು ಪ್ರತ್ಯೇಕ ಪ್ರವರ್ಗ ರಚನೆಗೆ ಸಂಪುಟದಲ್ಲಿ ನಿರ್ಧಾರಿಸಲಾಗಿದೆ. ಅದರಲ್ಲಿ 2D ಪ್ರವರ್ಗಕ್ಕೆ ಪಂಚಮಸಾಲಿ ಸಮುದಾಯವನ್ನು ಸೇರಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಮೀಸಲಾತಿ ಪ್ರಮಾಣ ಇನ್ನೂ ನಿಗದಿ ಮಾಡಿಲ್ಲ. ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿ – ಇನ್ನೂ ಸ್ಪಷ್ಟ ನಿಲುವು ಪ್ರಕಟಿಸದ ಕಾಂಗ್ರೆಸ್

Panchamasali Rally 3

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಜೆ.ಸಿ.ಮಾಧುಸ್ವಾಮಿ ಅವರು, 3 ಪ್ರವರ್ಗದಲ್ಲಿ ಇರುವವರನ್ನ 2 ಪ್ರವರ್ಗಕ್ಕೆ ತರಲು ಅನುಮೋದನೆ ಕೊಟ್ಟಿದ್ದೇವೆ. 3A ನಲ್ಲಿದ್ದ ಒಕ್ಕಲಿಗರು ಮತ್ತು ಇತರರನ್ನು ಇನ್ಮುಂದೆ 2C ಅಂತ ಮಾಡಿ ಅಲ್ಲಿಗೆ ಸೇರಿಸುತ್ತೇವೆ. ಹಾಗೆಯೇ 3B ನಲ್ಲಿದ್ದ ಲಿಂಗಾಯತ ಮತ್ತು ಇತರರನ್ನು 2Dಗೆ ಸೇರಿಸುತ್ತೇವೆ. ಇದರಿಂದ 2A ಮತ್ತು 2B ಪ್ರವರ್ಗದವರಿಗೆ ಯಾವುದೇ ಸಮಸ್ಯೆ ಆಗಲ್ಲ. ಅವರಿಗೆ ನಿಗದಿಪಡಿಸಿರುವ ಮೀಸಲಾತಿಗೆ ಇದರಿಂದ ತೊಂದೆರೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸದ್ಯ ಲಿಂಗಾಯತರಿಗೆ 3B, ಒಕ್ಕಲಿಗರಿಗೆ 3ಎ ಮೀಸಲಾತಿ ಇದೆ. 3ಎ ಮತ್ತು 3ಬಿಯಲ್ಲಿರುವ ಸಮುದಾಯಗಳನ್ನು 2C ಮತ್ತು 2Dಗೆ ಸೇರ್ಪಡೆ ಮಾಡಲಾಗಿದೆ. ಹೀಗಾಗಿ ಇನ್ಮುಂದೆ 3ಎ ಮತ್ತು 3ಬಿ ಪ್ರವರ್ಗಗಳು ಇರಲ್ಲ. 3A ಮತ್ತು 3Bನಲ್ಲಿ ಈವರೆಗೆ ನೀಡಲಾಗುತ್ತಿದ್ದ ಎಲ್ಲಾ ಸೌಲಭ್ಯ, ಸವಲತ್ತುಗಳನ್ನು, ಈಗ ಹೊಸದಾಗಿ ಸೃಷ್ಟಿಸಿರುವ 2C ಮತ್ತು 2D ಪ್ರವರ್ಗಕ್ಕೆ ಮುಂದುವರಿಸಿಕೊಂಡು ಹೋಗಲಾಗುವುದು. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಲಾಗುವುದು. ಆದರೆ ರಾಜಕೀಯ ಮೀಸಲಾತಿ ಇರಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಸರ್ಕಾರಕ್ಕೆ ಪಂಚಮಸಾಲಿ ಸವಾಲು – ಬೇಡಿಕೆ ಏನು? ವಸ್ತುಸ್ಥಿತಿ ಏನಿದೆ? ಯಾವ ಜಿಲ್ಲೆಗಳಲ್ಲಿಎಷ್ಟಿದೆ ಪ್ರಭಾವ?

Panchamasali Reservation

ಹೊಸ ಪ್ರವರ್ಗಗಳಿಗೆ ಮೀಸಲು ಪ್ರಮಾಣ ಇನ್ನೂ ನಿಗದಿ ಮಾಡಿಲ್ಲ. 10% ಆರ್ಥಿಕವಾಗಿ ಹಿಂದುಳಿದವರಿಗೆ ಇರೋ ಮೀಸಲಿನಲ್ಲಿ ಪರಿಶೀಲಿಸಿ ಹೊಸ ಪ್ರವರ್ಗಗಳಿಗೆ ಮೀಸಲು ಪ್ರಮಾಣ ನಿರ್ಣಯ ಮಾಡ್ತೇವೆ ಎಂದು ಮಾಹಿತಿ ನೀಡಿದ್ದಾರೆ.

ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಧರಣಿ ನಡೆಸಲಾಗಿತ್ತು. ಆದರೆ ಸರ್ಕಾರ ಸಮುದಾಯದ ಮನವೊಲಿಸಲು 2 ಹೊಸ ಪ್ರವರ್ಗವನ್ನೇ ಸೃಷ್ಟಿ ಮಾಡಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *