ರಾಯ್‍ಪುರ: ಯೂಟ್ಯೂಬರ್ (Youtuber) 22 ವರ್ಷದ ಲೀನಾ ನಾಗವಂಶಿ (Leena Nagwanshi) ಆತ್ಮಹತ್ಯೆಗೆ ಶರಣಾಗಿದ್ದಾರೆ.
ಛತ್ತೀಸ್‍ಗಢದ ರಾಯ್ಗಢದಲ್ಲಿರುವ ತಮ್ಮ ನಿವಾಸದಲ್ಲಿ ಲೀನಾ ಶವ ಪತ್ತೆಯಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಲೀನಾ ಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದು, ವರದಿ ಬಂದ ಬಳಿಕವೇ ಸಾವಿಗೆ ನಿಖರ ಕಾರಣ ಸಿಗಲಿದೆ.
ದ್ವಿತೀಯ ವರ್ಷದ ಬಿ.ಕಾಂ ಪದವೀಧರೆಯಾಗಿರುವ ಲೀನಾ ರಾಯ್‍ಗಢದ ವಿಹಾರ್ ಕಾಲೋನಿಯಲ್ಲಿ ವಾಸವಾಗಿದ್ದರು. ಲೀನಾ ಅವರು ಯೂಟ್ಯೂಬ್ ಸೇರಿ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತಿ ಗಳಿಸಿದ್ದಾರೆ. ಇದನ್ನೂ ಓದಿ: ಚಾರ್ಮಾಡಿ ಘಾಟ್‌ನಲ್ಲಿ ಕಾಡ್ಗಿಚ್ಚು- ನೂರಾರು ಎಕರೆ ಅರಣ್ಯ ಬೆಂಕಿಗಾಹುತಿ
ಇನ್‍ಸ್ಟಾದಲ್ಲಿ ಸುಮಾರು 10 ಸಾವಿರ ಫಾಲೋವರ್ ಗಳನ್ನು ಇವರು ಹೊಂದಿದ್ದಾರೆ. ಈಕೆ ಶಾರ್ಟ್ ವೀಡಿಯೋ ಹಾಗೂ ರೀಲ್ಸ್ ಗಳನ್ನು ಮಾಡುವ ಮೂಲಕ ಫೇಮ್ಸ ಆಗಿದ್ದರು. ಈ ಮೂಲಕ ಜನರಿಗೂ ಚಿರಪರಿಚಿತರಾಗಿದ್ದರು.
ಸದ್ಯ ಲೀನಾ ಸಾವಿಗೆ ಕಾರಣವೇನು ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.