ದತ್ತಪೀಠ ಬಿಟ್ಟು ಮುಸ್ಲಿಮರು ನಾಗೇನಹಳ್ಳಿಯಲ್ಲಿ ನಮಾಜ್‌ ಮಾಡಿ: ಪ್ರಮೋದ್ ಮುತಾಲಿಕ್

Public TV
2 Min Read
PRAMODMUTHALIK 1 1

ಚಿಕ್ಕಮಗಳೂರು: ದತ್ತಪೀಠದ (Dattapeeta) ಗುಹೆಯೊಳಗಡೆ ಸೌಹಾರ್ದಯುತವಾಗಿ ಪಾದುಕೆಯ ಪೂಜೆ, ರುದ್ರಾಭಿಷೇಕವಾಗುತ್ತಿದೆ. ಆರತಿ, ಘಂಟೆ, ಶಂಖನಾದ ಎಲ್ಲವೂ ಇಸ್ಲಾಮಿಗೆ ವಿರುದ್ಧವಾಗಿದೆ. ಹಾಗಾಗಿ ಇದನ್ನು ಮುಸ್ಲಿಮರು ಬಿಟ್ಟುಕೊಟ್ಟು ನಾಗೇನಹಳ್ಳಿಯಲ್ಲಿ ನಮಾಜ್‌, ಪೂಜೆ ಪುನಸ್ಕಾರಗಳನ್ನು ಮಾಡಿಕೊಳ್ಳಬೇಕು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik)  ಮನವಿ ಮಾಡಿದ್ದಾರೆ.

Datta Peeta 1

ದತ್ತಪೀಠದಲ್ಲಿ ದತ್ತಾತ್ರೇಯರಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕವಾಗಿ ಪೂಜೆ, ರುದ್ರಾಭಿಷೇಕ, ಶಂಖನಾದ, ಆರತಿ ಎಲ್ಲವನ್ನೂ ನೋಡಿ-ಕೇಳಿ ಬದುಕು ಧನ್ಯವಾಯಿತು. 30 ವರ್ಷಗಳ ಸುದೀರ್ಘವಾದ ಹೋರಾಟಕ್ಕೆ ಬೆಲೆ ಸಿಕ್ಕಿದೆ. ಅದಕ್ಕಾಗಿ ರಾಜ್ಯ ಸರ್ಕಾರ, ಶಾಸಕ ಸಿ.ಟಿ. ರವಿಯವರಿಗೆ (CT Ravi) ಧನ್ಯವಾದ. ಕಾನೂನಾತ್ಮಕವಾಗಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ವಿನ ಕೆಲಸವಾಗಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆರ್‌ಎಸ್‍ಎಸ್ ಭಾರತೀಯ ಸಂಸ್ಕೃತಿ, ಮೌಲ್ಯಗಳನ್ನು ಶ್ರೀಮಂತಗೊಳಿಸುತ್ತಿದೆ: ರವೀಂದ್ರ ಜಡೇಜಾ

PRAMODMUTHALIK

25 ವರ್ಷಗಳ ಹಿಂದೆಯೂ ಕೂಡಾ ಇಲ್ಲಿನ ಹಿರಿಯರಾದ ನಾಣಯ್ಯ, ವಿಠ್ಠಲ್ ರಾಯ್, ದತ್ತಾತ್ರೆಯ ಶೆಟ್ಟಿ ಸೇರಿದಂತೆ ಅನೇಕರು ಪರಿಶ್ರಮಪಟ್ಟಿದ್ದಾರೆ. ಇಂದು ಅವರಿಗೂ ಕೂಡ ಹಿಂದೂ ಅರ್ಚಕರ ನೇಮಕ ಆನಂದವಾಗಿದೆ. ಗರ್ಭಗುಡಿಯ ಒಳಗೆ ಪೂಜೆ ನಡೆಯುತ್ತಿರುವುದರಿಂದ ನಾಸ್ತಿಕವಾದಿಗಳು, ಗೋ ಹಂತಕರು, ಗೋ ಭಕ್ಷಕರು, ಮೂರ್ತಿ ಪೂಜೆ ನಂಬಲಾರದವರು ದತ್ತಪಾದುಕೆಯ ಗರ್ಭಗುಡಿಯ ಒಳಗೆ ಹೋಗಬಾರದು. ಕುರಾನಿನ ಪ್ರಕಾರ ಅದು ನಿಷಿದ್ಧ. ದತ್ತಪೀಠದ ಆವರಣ ಪೂರ್ಣ ಪ್ರಮಾಣದಲ್ಲಿ ದತ್ತಪೀಠ ಹಿಂದೂ ಪೀಠವಾಗುವವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ. ದತ್ತಪೀಠದಲ್ಲಿ ನಮಾಜ್, ಉರುಸ್ ಮಾಡುತ್ತಾರೆ. ಅವುಗಳೆಲ್ಲವನ್ನು ಸ್ಥಳಾಂತರಗೊಳಿಸುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಸಲ್ಮಾನ್ ಖುರ್ಷಿದ್

PRAMODMUTHALIK 2

ಹಾಸನದಲ್ಲಿ ಕೊರಿಯರ್‌ನಲ್ಲಿ ಬಂದ ಮಿಕ್ಸಿ ಸ್ಫೋಟಗೊಂಡ ಕುರಿತಾಗಿ ಮಾತನಾಡಿ, ಕೊರಿಯರ್ ಮೂಲಕ ಬಂದ ಮಿಕ್ಸಿ ಓಪನ್ ಮಾಡಿದಾಗ ಬ್ಲಾಸ್ಟ್‌ ಆಗಿದೆ. ಇದೊಂದು ವ್ಯವಸ್ಥಿತವಾದ ಟೆರರಿಸಂನ ಭಾಗ. ಶಾರಿಕ್ ಮೂಲಕ ಕುಕ್ಕರ್‌ನಲ್ಲಿ ಸ್ಫೋಟಿಸಲು ಯತ್ನಿಸಿದ್ದು. ಈ ರೀತಿಯಾಗಿ ಅನೇಕ ವಿಧಾನಗಳ ಮೂಲಕ ಮಾಡುವ ಕೃತ್ಯಗಳನ್ನು ತಡೆಯುವ ಕೆಲಸ ಆಗಬೇಕು. ಕೇಂದ್ರದ ನರೇಂದ್ರ ಮೋದಿ (Narendra Modi) ನೇತೃತ್ವ ಸರ್ಕಾರ ಬಹಳ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದ ಬಾಂಬ್ ಬ್ಲಾಸ್ಟ್ ಪ್ರಕರಣಗಳನ್ನು ಹತ್ತಿಕ್ಕುವ ಕೆಲಸ ಮಾಡಿದೆ. ಅದನ್ನು ತಡೆದುಕೊಳ್ಳಲಾಗದೆ. ಅಲ್ಲಲ್ಲಿ ಬೇರೆ-ಬೇರೆ ರೀತಿಯಲ್ಲಿ ಬ್ಲಾಸ್ಟ್ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಕಡಿಮೆ ಪ್ರಮಾಣದಲ್ಲಿ ನಡೆಯುತ್ತಿದೆ ಅದನ್ನೂ ಹತ್ತಿಕ್ಕುವ ಕೆಲಸ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *