ಬೆಂಗಳೂರು: ವಿಧಾನಸೌಧ (Vidhana Soudha) ಮುಂಭಾಗದಲ್ಲೇ ನಾಲ್ವರು ಯುವಕರೊಂದಿಗೆ ಇಬ್ಬರು ಯುವತಿಯರು ಬಿಯರ್ ಕುಡಿದು, ಸಿಗರೇಟ್ ಸೇದಿ ಬಿಂದಾಸ್ ಪಾರ್ಟಿ (Party) ಮಾಡಿರುವ ಘಟನೆ ನಡೆದಿದೆ.
ವಿಧಾನಸೌಧ ಪೊಲೀಸ್ ಠಾಣೆ ಮುಂಭಾಗದಲ್ಲಿರುವ ಪಾರ್ಕ್‍ನಲ್ಲಿ ಇಂದು ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಬಂದ ನಾಲ್ವರು ಯುವಕರು, ಇಬ್ಬರು ಯುವತಿಯರ ಗ್ಯಾಂಗ್ ಕಾರಿನಿಂದ ಬಿಯರ್ ಬಾಟಲ್ ಓಪನ್ ಮಾಡಿ ಕುಡಿಯಲು ಮುಂದಾಗಿದ್ದಾರೆ. ಪಾರ್ಕ್ ನಲ್ಲಿದ್ದ ಹತ್ತಾರು ಜನರ ನಡುವೆಯೇ ಬಿಯರ್ ಬಾಟಲ್ ಓಪನ್ ಮಾಡಿದ ಈ ಗುಂಪು, ಸಾರ್ವಜನಿಕವಾಗಿಯೇ ಬಿಯರ್ ಕುಡಿದು ಸಿಗರೇಟು ಸೇದಿ ಸೆಲ್ಫಿ ಕ್ಲಿಕ್ಕಿಸಿಕೊಂಡ್ರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಅಪಾರ್ಟ್‍ಮೆಂಟ್‍ನ 19ನೇ ಮಹಡಿಯಿಂದ ಬಿದ್ದು ಮಹಿಳೆ ಸಾವು
ಆ ಗುಂಪಿನ ಪಾರ್ಟಿ ನೋಡಿದ ಸಾಕಷ್ಟು ಜನ ಅಲ್ಲಿಂದ ಮೆತ್ತಗೆ ಎಸ್ಕೇಪ್ ಆದ್ರು. ಬಳಿಕ ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು, ಆರು ಜನರನ್ನು ಬಿಯರ್ ಸಮೇತ ಹಿಡಿದು ಪೊಲೀಸ್ ಠಾಣೆಗೆ ಕರೆದೊಯ್ಯದರು. ಒಂದು ಕಡೆ ವಿಧಾನಸೌಧ, ಎದುರಿಗೆ ಪೊಲೀಸ್ ಠಾಣೆ, ಸುತ್ತಲೂ ಸರ್ಕಾರಿ ಕಚೇರಿಗಳು, ಕಾಲೇಜುಗಳು ಹೀಗಿದ್ರು ಹಾಡಹಗಲೇ ಈ ರೀತಿ ವರ್ತನೆ ತೋರಿಸಿದ ಯುವಕ-ಯುವತಿಯರ ವರ್ತನೆ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಕೇಳಿ ಬರುತ್ತಿದೆ. ಇದನ್ನೂ ಓದಿ: ಮದ್ಯವ್ಯಸನಿ ಅಧಿಕಾರಿಗಿಂತ ರಿಕ್ಷಾ ಎಳೆಯುವವನು ಉತ್ತಮ ವರನಾಗಬಹುದು: ಮಗನ ನೋವಿನ ಕಥೆ ವಿವರಿಸಿದ ಕೇಂದ್ರ ಸಚಿವ