ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ (Mangaluru University) ಪದವಿ ತರಗತಿಗಳ ಪ್ರಥಮ ಸೆಮಿಸ್ಟರ್ ಫಲಿತಾಂಶ ಇನ್ನು 10 ದಿನಗಳ ಒಳಗೆ ಪ್ರಕಟವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವಥ್ ನಾರಾಯಣ (CN Ashwath Narayan) ಹೇಳಿದರು.
ವಿಧಾನಸಭೆ ಅಧಿವೇಶನದ (Belagavi Session) ಶೂನ್ಯ ವೇಳೆಯಲ್ಲಿ ಶಾಸಕ ಯು.ಟಿ. ಖಾದರ್ (UT Khader) ಅವರು ಪ್ರಸ್ತಾಪಿಸಿದ ವಿಷಯಕ್ಕೆ ಸಚಿವರು ಉತ್ತರಿಸಿದರು. ಇದನ್ನೂ ಓದಿ: `ಮಹಾ’ ಕ್ಯಾತೆಗೆ ವಿಧಾನಸಭೆಯಲ್ಲಿ ಸರ್ವಾನುಮತದ ಖಂಡನಾ ನಿರ್ಣಯ ಅಂಗೀಕಾರ
ಮಂಗಳೂರು ವಿವಿಯ ಮೊದಲ ಸೆಮಿಸ್ಟರ್ ಫಲಿತಾಂಶ ಇದುವರೆಗೂ ಪ್ರಕಟವಾಗಿರುವುದಿಲ್ಲ. ವಿದ್ಯಾರ್ಥಿ ವೇತನ ಪಾವತಿಗೆ ಹಿಂದಿನ ವರ್ಷದ ಅಂಕಪಟ್ಟಿ ಕೇಳಲಾಗುತ್ತದೆ. ಹೀಗಾಗಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲೂ ಸಾಧ್ಯವಾಗುತ್ತಿಲ್ಲ ಎಂದು ಖಾದರ್ ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಹೊಸ ವರ್ಷ.. ಹಳೇ ವೈರಸ್; ಚೀನಾದಲ್ಲಿ ಮತ್ತೆ ಕೊರೊನಾ ಆರ್ಭಟ – ಭಾರತದ ಕಥೆ ಏನು?
ಈ ಹಿಂದೆ ಮಂಗಳೂರು ವಿವಿಯು ನ್ಯಾಕ್ `ಎ’ ಗ್ರೇಡ್‌ನಲ್ಲಿತ್ತು. ಈಗ `ಬಿ’ ಗ್ರೇಡ್‌ಗೆ ಬಂದಿದೆ. ವಿಶ್ವವಿದ್ಯಾಲಯದ ಗುಣಮಟ್ಟ ಪುನಃ ಉತ್ತಮಪಡಿಸಲು ಕ್ರಮವಹಿಸಬೇಕು ಎಂದು ಶಾಸಕ ಯು.ಟಿ.ಖಾದರ್ ಒತ್ತಾಯಿಸಿದರು.