ನವದೆಹಲಿ: ಲೀವ್ ಇನ್ ಗೆಳತಿ ಶ್ರದ್ಧಾ ವಾಲ್ಕರ್ (Shraddha Walkar) ಅನ್ನು ಭೀಕರವಾಗಿ ಹತ್ಯೆ ಮಾಡಿದ್ದ ಆರೋಪಿ ಅಫ್ತಾಬ್ ಪೂನಾವಾಲಾ (Aaftab Poonawala) ಇಂದು ತನ್ನ ವಕೀಲರೊಂದಿಗೆ ಜಾಮೀನು ಅರ್ಜಿಯನ್ನು ಹಿಂಪಡೆದಿದ್ದಾನೆ.
ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಅಫ್ತಾಬ್ ನ. 17ರಂದು ಜಾಮಿನು ಅರ್ಜಿ ಸಲ್ಲಿಸಿದ್ದ. ಆದರೆ ದೆಹಲಿ ನ್ಯಾಯಾಲಯ (Delhi Court) ವಿಚಾರಣೆಯನ್ನು ಮುಂದೂಡಿತ್ತು. ಈ ಮಧ್ಯೆ ಅಫ್ತಾಬ್ ಜಾಮೀನು ಅರ್ಜಿಯನ್ನು ಹಿಂದಕ್ಕೆ ತೆಗೆದುಕೊಂಡಿದ್ದಾನೆ. ತನ್ನ ಒಪ್ಪಿಗೆಯಿಲ್ಲದೇ ಜಾಮೀನು ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾನೆ.
ಅಫ್ತಾಬ್‍ನೊಂದಿಗೆ 50 ನಿಮಿಷಗಳ ಸುದೀರ್ಘ ಚರ್ಚೆಯ ನಂತರ ಜಾಮೀನು ಅರ್ಜಿಯನ್ನು ಹಿಂಪಡೆಯಲು ನಿರ್ಧರಿಸಿರುವುದಾಗಿ ಅಫ್ತಾಬ್ ಪರ ವಕೀಲ ಎಂ.ಎಸ್ ಖಾನ್ ನ್ಯಾಯಾಲಯಕ್ಕೆ ತಿಳಿಸಿದರು. ಇದನ್ನೂ ಓದಿ: ಮಗಳ ಹುಟ್ಟುಹಬ್ಬಕ್ಕೆ ಸುವರ್ಣಸೌಧ ಬಾಡಿಗೆ ಕೊಡಿ – ಸಭಾಪತಿ, ಡಿಸಿಗೆ ಪತ್ರ ಬರೆದ ತಂದೆ
ಪ್ರಕರಣದ ಪ್ರಾಥಮಿಕ ತನಿಖೆ ಪೂರ್ಣಗೊಂಡಿದ್ದು, ಚಾರ್ಜ್ ಶೀಟ್ ಸಲ್ಲಿಕೆಯಾಗದ ಕಾರಣ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿಡುವ ಉದ್ದೇಶವಿಲ್ಲ ಎಂದು ಜಾಮೀನು ಅರ್ಜಿಯನ್ನು ಸಲ್ಲಿಸುವ ಮೊದಲು ವಕೀಲರು ಆರೋಪಿಸಿದ್ದರು. ಅಫ್ತಾಬ್ ಪೂನಾವಾಲಾ ಆತನ ನ್ಯಾಯಾಂಗ ಬಂಧನವನ್ನು ಡಿ. 9ರಂದು 14 ದಿನಗಳವರೆಗೆ ವಿಸ್ತರಿಸಲಾಗಿತ್ತು. ಇದನ್ನೂ ಓದಿ: ಟೆಲಿಕಾಂ ಆಯ್ತು ಇನ್ನು FMCG – ಮುಕೇಶ್ ಅಂಬಾನಿಯಿಂದ ಈಗ ಮೆಟ್ರೋ ಕ್ಯಾಶ್ & ಕ್ಯಾರಿ ಶಾಪಿಂಗ್
ಘಟನೆಯೇನು?: ಅಫ್ತಾಬ್ ಅಮಿನ್ ಪೂನಾವಾಲಾ ತನ್ನ ಪ್ರೇಯಸಿ ಶ್ರದ್ಧಾವಾಕರ್ ಹತ್ಯೆ ಮಾಡಿ, ದೇಹವನ್ನು 35 ತುಂಡುಗಳಾಗಿ ಪೀಸ್ ಪೀಸ್ ಮಾಡಿ ದೆಹಲಿಯ ಕಾಡಿನಲ್ಲಿ ಎಸೆದಿದ್ದ, ಶ್ರದ್ಧಾ ಪೋಷಕರು ನೀಡಿದ ದೂರು ಆಧರಿಸಿ ತನಿಖೆ ನಡೆಸಿದ್ದ ಪೊಲೀಸರಿಗೆ ಅಫ್ತಾಬ್ ಭೀಕರವಾಗಿ ಹತ್ಯೆ ಮಾಡಿರುವುದು ತಿಳಿದುಬಂದಿತ್ತು.