ರೋಹಿತ್‍ಗೆ ಗೇಟ್‍ ಪಾಸ್ – ಪಾಂಡ್ಯ ಸೀಮಿತ ಓವರ್‌ಗಳ ನಾಯಕ?

Public TV
2 Min Read
Hardik Pandya And Rohit Sharma

ಮುಂಬೈ: ಟೀಂ ಇಂಡಿಯಾದ (Team India) ನಾಯಕರಾಗಿದ್ದ ರೋಹಿತ್ ಶರ್ಮಾರ (Rohit Sharma) ನಾಯಕತ್ವಕ್ಕೆ ಕುತ್ತು ಬಂದಿದೆ. ಮೂಲಗಳ ಪ್ರಕಾರ ಇದೀಗ ರೋಹಿತ್ ಶರ್ಮಾರನ್ನು ಏಕದಿನ ಮತ್ತು ಟಿ20 ಮಾದರಿ ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ (Hardik Pandya) ನಾಯಕತ್ವದ ಪಟ್ಟ ಕಟ್ಟಲು ಬಿಸಿಸಿಐ (BCCI) ಚಿಂತಿಸಿದೆ ಎಂದು ವರದಿಯಾಗಿದೆ.

Rohit Sharma 5

ರೋಹಿತ್ ಶರ್ಮಾ ನಾಯಕತ್ವದ ಜೊತೆಗೆ ಬ್ಯಾಟಿಂಗ್‍ನಲ್ಲೂ ಸತತ ವಿಫಲರಾಗುತ್ತಿದ್ದಾರೆ. ಹಾಗಾಗಿ ಟೆಸ್ಟ್ (Test) ತಂಡದ ನಾಯಕತ್ವದಲ್ಲಿ ರೋಹಿತ್‍ರನ್ನು ಮುಂದುವರಿಸಿ, ಸೀಮಿತ ಓವರ್‌ಗಳ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯಗೆ ನೀಡಲು ಬಿಸಿಸಿಐ ಸಿದ್ಧತೆಯಲ್ಲಿದೆ. ನಿನ್ನೆ ನಡೆದ ಬಿಸಿಸಿಐ ಉನ್ನತ ಮಟ್ಟದ ಅಧಿಕಾರಿಗಳ ಸಭೆಯ ಬಳಿಕ ಪಾಂಡ್ಯ ಜೊತೆ ಬಿಸಿಸಿಐನ ಹಿರಿಯ ಅಧಿಕಾರಿಗಳು ಚರ್ಚಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇದನ್ನೂ ಓದಿ: ಮೊದಲ ಪಂದ್ಯದ ಮ್ಯಾಚ್ ವಿನ್ನರ್‌ಗಿಲ್ಲ ಎರಡನೇ ಟೆಸ್ಟ್‌ನಲ್ಲಿ ಅವಕಾಶ – ಕುಲ್‍ದೀಪ್‍ಗೆ ಕೊಕ್, ಉನಾದ್ಕಟ್‍ಗೆ ಬುಲಾವ್

Hardik Pandya And Rohit Sharma 1

ಹಾರ್ದಿಕ್ ಪಾಂಡ್ಯ ಐಪಿಎಲ್‍ನಲ್ಲಿ (IPL) ಗುಜರಾತ್ ಟೈಟಾನ್ಸ್‌ನ್ನು (GT) ತಮ್ಮ ನಾಯಕತ್ವದಲ್ಲಿ ಚಾಂಪಿಯನ್ ಮಾಡಿದ ಬಳಿಕ ಬಿಸಿಸಿಐ ಕಣ್ಣಿಟ್ಟಿದೆ. ಈಗಾಗಲೇ ರೋಹಿತ್ ಶರ್ಮಾ ಏಷ್ಯಾಕಪ್ (Asia Cup) ಸೇರಿದಂತೆ ಟಿ20 ವಿಶ್ವಕಪ್‍ನಲ್ಲೂ (T20 World Cup) ತಂಡವನ್ನು ಫೈನಲ್‍ಗೇರಿಸುವಲ್ಲಿ ವಿಫಲರಾಗಿದ್ದರೂ ಹಾಗಾಗಿ ಬಿಸಿಸಿಐ ಭವಿಷ್ಯದ ದೃಷ್ಟಿಯಿಂದ ಪಾಂಡ್ಯಗೆ ಸೀಮಿತ ಓವರ್‌ಗಳ ನಾಯಕತ್ವ ನೀಡುವ ಕುರಿತು ಒಲವು ತೋರಿದೆ.

HARDIK PANDYA 1

ಪಾಂಡ್ಯ ಈ ಹಿಂದೆ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ದರು. ಈ ಸರಣಿಯನ್ನು ಭಾರತ 2-0 ಅಂತರದಲ್ಲಿ ವಶಪಡಿಸಿಕೊಂಡಿತ್ತು. ಬಳಿಕ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯನ್ನೂ ಪಾಂಡ್ಯ ನೇತೃತ್ವದಲ್ಲಿ ಟೀಂ ಇಂಡಿಯಾ 1-0 ಅಂತರದಲ್ಲಿ ಗೆದ್ದಿತ್ತು. ಬಳಿಕ ಪಾಂಡ್ಯ ನಾಯಕತ್ವದ ಮೇಲೆ ಬಿಸಿಸಿಐ ಭರವಸೆ ಇಟ್ಟಿದೆ. ಇದನ್ನೂ ಓದಿ: ಮೆಸ್ಸಿ ಕೈಯಲ್ಲಿ ಕಮಲ – ಬಿಜೆಪಿಗೆ ಹೋಲಿಸಿ ಟ್ವಿಟ್ಟರ್‌ನಲ್ಲಿ ಟ್ರೋಲ್

ಪಾಂಡ್ಯ 2022ರಲ್ಲಿ ಟೀಂ ಇಂಡಿಯಾ ಪರ ಒಟ್ಟು 27 ಪಂದ್ಯಗಳನ್ನು ಆಡಿದ್ದು, 25 ಇನ್ನಿಂಗ್ಸ್‌ಗಳಲ್ಲಿ 33.72ರ ಸರಾಸರಿಯಲ್ಲಿ 607 ರನ್ ಬಾರಿಸಿದ್ದಾರೆ. ಟಿ20 ಮಾದರಿಯಲ್ಲಿ ಮೂರು ಅರ್ಧ ಶತಕಗಳು ಸಹಿತ 20 ವಿಕೆಟ್‍ಗಳನ್ನು ಪಡೆದಿದ್ದಾರೆ. ಏಕದಿನ ಮಾದರಿಯಲ್ಲಿ 3 ಪಂದ್ಯಗಳಲ್ಲಿ 2 ಅರ್ಧಶತಕ ಸಹಿತ 100 ರನ್ ಗಳಿಸಿದ್ದಾರೆ. ಜೊತೆಗೆ 6 ವಿಕೆಟ್ ಪಡೆದು ಉತ್ತಮ ಪ್ರದರ್ಶನ ತಂಡಕ್ಕಾಗಿ ನೀಡಿದ್ದಾರೆ. ಹಾಗಾಗಿ ಬಿಸಿಸಿಐ ಪಾಂಡ್ಯರಿಗೆ ವೇತನ ಗ್ರೇಡ್‍ನಲ್ಲಿ, ಸಿ ಗ್ರೇಡ್‍ನಿಂದ ಎ ಗ್ರೇಡ್‍ಗೆ ಬಡ್ತಿ ನೀಡಿದೆ ಎಂದು ಮೂಲಗಳಿಂದ ವರದಿಯಾಗಿದೆ. ಈ ಎಲ್ಲದರ ಬಗ್ಗೆ ಬಿಸಿಸಿಐ ಯಾವುದೇ ಮಾಹಿತಿ ನೀಡಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *