ಸ್ನೇಹಿತರನ್ನು ಮೆಚ್ಚಿಸಲು ಪಾರ್ಟಿಗೆ ಗನ್ ತೆಗೆದುಕೊಂಡು ಹೋದ ವ್ಯಕ್ತಿ ಪೊಲೀಸರಿಗೆ ಅತಿಥಿಯಾದ

Public TV
1 Min Read
new year party

ನವದೆಹಲಿ: ಸ್ನೇಹಿತರನ್ನು (Friends) ಮೆಚ್ಚಿಸಲು ವ್ಯಕ್ತಿಯೊಬ್ಬ ತನ್ನ ತಂದೆಯ (Father) ಲೋಡ್ ಮಾಡಿದ್ದ ಗನ್ ಅನ್ನು ಪಾರ್ಟಿಗೆ (Party) ತೆಗೆದುಕೊಂಡು ಹೋಗಿ ಪೊಲೀಸರಿಗೆ ಅತಿಥಿಯಾದ ಘಟನೆ ಉತ್ತರ ದೆಹಲಿಯ ರೂಪ್ ನಗರ ಪ್ರದೇಶದಲ್ಲಿ ನಡೆದಿದೆ.

ಆರೋಪಿಯನ್ನು ಮೌಜ್‍ಪುರ ನಿವಾಸಿ ಹರ್ಷ (22) ಎಂದು ಗುರುತಿಸಲಾಗಿದೆ. ಹರ್ಷ ತನ್ನ ತಂದೆಯ ಬಳಿ ಇದ್ದ ಗನ್ ಅನ್ನು ಕದ್ದು ತನ್ನ ಸ್ನೇಹಿತರನ್ನು ಮೆಚ್ಚಿಸಲು ಅದರೊಂದಿಗೆ ಪಾರ್ಟಿಗೆ ಹೋಗಿದ್ದ. ಈ ವೇಳೆ ಹರ್ಷ ಗನ್ ಅನ್ನು ಹಿಡಿದುಕೊಂಡು ಓಡಾಡುತ್ತಿರುವುದನ್ನು ಕೆಲವರು ಗಮನಿಸಿ, ಪೊಲೀಸರಿಗೆ ತಿಳಿಸಿದ್ದಾರೆ.

police jeep 1

ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹರ್ಷನನ್ನು ಬಂಧಿಸಿದ್ದಾರೆ. ಆತನ ಬಳಿಯಿದ್ದ ಗನ್ ಅನ್ನು ವಶಪಡಿಸಿಕೊಂಡಿದ್ದಾರೆ. ಹರ್ಷ ತನ್ನ ಮನೆಯಲ್ಲಿದ್ದ ಗನ್ ಕದ್ದು ತನ್ನ ಸ್ನೇಹಿತರೊಂದಿಗೆ ಶಕ್ತಿ ನಗರದಲ್ಲಿ ಪಾರ್ಟಿಗೆ ಬಂದಿದ್ದ. ಅದಾದ ಬಳಿಕ ಅವರು ಮನೆಗೆ ತೆರಳುತ್ತಿದ್ದಾಗ ಕೆಲವರು ಗಮನಿಸಿ ತಿಳಿಸಿದ್ದಾರೆ ಎಂದು ಎಂದು ಡಿಸಿಪಿ ಹೇಳಿದರು. ಇದನ್ನೂ ಓದಿ: ಇನ್ಮುಂದೆ ಅಫ್ಘಾನ್‌ ವಿದ್ಯಾರ್ಥಿನಿಯರಿಗೆ ವಿಶ್ವವಿದ್ಯಾನಿಲಯ ಶಿಕ್ಷಣಕ್ಕೂ ಅವಕಾಶವಿಲ್ಲ

ARREST

ಹರ್ಷನ ತಂದೆ ಸಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಆತ ಗನ್ ಅನ್ನು ಇಟ್ಟುಕೊಂಡಿದ್ದ. ಘಟನೆಗೆ ಸಂಬಂಧಿಸಿ ಹರ್ಷನ ವಿರುದ್ಧ ಜಾಫ್ರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. (Arrest) ಇದನ್ನೂ ಓದಿ: ಆಸ್ಪತ್ರೆಗೆ ಹೋಗೋ ದಾರಿಯಲ್ಲಿ ಗಾಯಾಳುಗೆ ಮದ್ಯ ನೀಡಿ, ತಾನೂ ಕುಡಿದ ಅಂಬುಲೆನ್ಸ್ ಚಾಲಕ

Live Tv
[brid partner=56869869 player=32851 video=960834 autoplay=true]

Share This Article