ಬಾಲಕಿಯನ್ನ ಮನೆಗೆ ಕರೆಸಿ ಊಟ ಹಾಕಿ, ಮಗನಿಂದಲೇ ರೇಪ್ ಮಾಡಿಸಿದ್ಳು

Public TV
1 Min Read
Food 2

ಕೋಲ್ಕತ್ತಾ: ಮಹಿಳೆಯೊಬ್ಬಳು (Women) ತನ್ನ ಬಳಿ ಬ್ಯೂಟಿಷಿಯನ್ ಕೋರ್ಸ್ (Beautician Course) ಕಲಿಯುತ್ತಿದ್ದ ಬಾಲಕಿಯನ್ನ ಮನೆಗೆ ಕರೆದು ಊಟ ಹಾಕಿ, ತನ್ನ ಮಗನಿಂದಲೇ ಅತ್ಯಾಚಾರ ಮಾಡಿಸಿರುವ ಅಮಾನವೀಯ ಘಟನೆ ಕೋಲ್ಕತ್ತಾದ (Kolkata) ಹರಿದೇವಪುರ ಪ್ರದೇಶದಲ್ಲಿ ನಡೆದಿದೆ.

default beauty parlours 1

ಎರಡು ತಿಂಗಳ ಹಿಂದೆ ನಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ತಾಯಿ ಹಾಗೂ ಕಾಮುಕ ಮಗ ಇಬ್ಬರನ್ನೂ ಕೋಲ್ಕತ್ತಾ ಪೊಲೀಸರು (Kolkata Police) ಬಂಧಿಸಿದ್ದು, ಪೋಕ್ಸೋ ಕೇಸ್ (POCSO Case) ದಾಖಲಿಸಿದ್ದಾರೆ. ಇದನ್ನೂ ಓದಿ: `ಹಿಂದೂ’ ಪದ ಅಶ್ಲೀಲ ಅನ್ನೋನು ಸನ್ನಿ ಲಿಯೋನ್ ಮಗನಾ? – ಧನಂಜಯ ಭಾಯ್ ವಿವಾದಿತ ಹೇಳಿಕೆ

food

ಸಂತ್ರಸ್ತ ಬಾಲಕಿ ಆರೋಪಿ ಮಹಿಳೆ ಬಳಿ ಬ್ಯೂಟಿಷಿಯನ್ ಕೋರ್ಸ್ ಕಲಿಯುತ್ತಿದ್ದಳು. ಹೀಗಿರುವಾಗ ಮಹಿಳೆ ಅಕ್ಟೋಬರ್‌ನಲ್ಲಿ ತನ್ನ ಮನಗೆ ಆಹ್ವಾನಿಸಿದ್ದಳು. ಈ ವೇಳೆ ಆಕೆಗೆ ಊಟ ಕೊಡುವಾಗ ಅದರಲ್ಲಿ ಮಾದಕವಸ್ತು ಮಿಶ್ರಣ ಮಾಡಿಕೊಟ್ಟಿದ್ದಾಳೆ. ಊಟ ಸೇವಿಸಿದ ಬಾಲಕಿ ಕೆಲ ಕ್ಷಣಗಳಲ್ಲೇ ಪ್ರಜ್ಞೆತಪ್ಪಿದ್ದಾಳೆ. ನಂತರ ಕಾಮುಕ ಮಗ ಎರಡು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಜಾತಿ ಆಧಾರದಲ್ಲಿ ಸಿಎಂ ಆಯ್ಕೆ ಮಾಡಲ್ಲ- ಜಿ.ಪರಮೇಶ್ವರ್

POCSO Special Court

ಸಂತ್ರಸ್ತೆ ಪೊಲೀಸರಿಗೆ ದೂರು ನೀಡಲು ಹೆದರುತ್ತಿದ್ದಳು. ನಂತರ ಆಕೆಯ ಸ್ನೇಹಿತರ ಸಹಕಾರದೊಂದಿಗೆ ದೂರು ನೀಡಿದ್ದು, ಕೇಸ್ ದಾಖಲಿಸಲಾಯಿತು. ಇದೀಗ ತಾಯಿ-ಮಗ ಇಬ್ಬರನ್ನೂ ಬಂಧಿಸಿದ್ದು, ತನಿಖೆ ಮುಂದುವರಿದಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *