ರಾಮನಗರ: ಬಂಡೆಮಠದ ಸ್ವಾಮೀಜಿ (Basavalinga Shree) ಸಾವಿಗೆ ಸಂಬಂಧಿಸಿದಂತೆ ತನಿಖೆ ಮುಗಿಸಿರುವ ಪೊಲೀಸರು ದೋಷಾರೋಪ ಪಟ್ಟಿಯನ್ನು ಕೋರ್ಟಿಗೆ (Court) ಸಲ್ಲಿಸುತ್ತಿದ್ದಾರೆ. ನೂರಾರು ಪುಟಗಳ ದೋಷಾರೋಪ ಪಟ್ಟಿಯಲ್ಲಿ (Police Charge Sheet) ಇಂಚಿಂಚೂ ಮಾಹಿತಿ ಬಹಿರಂಗವಾಗಿದೆ.
ಆರೋಪಿ ಯುವತಿ ನೀಲಾಂಬಿಕೆ (Neelambike), ತಾನು ಸೇಡು ತೀರಿಸಿಕೊಳ್ಳೋದಕ್ಕಾಗಿಯೇ ಈ ಕೃತ್ಯವನ್ನು ಮಾಡಿದ್ದಳು ಅನ್ನೋ ಸತ್ಯ ಬಯಲಾಗಿದೆ. ಸ್ವಾಮೀಜಿ ಮಾಡಿದ್ದ ಒಂದು ಅವಮಾನವನ್ನು ಮನಸ್ಸಿನಲ್ಲಿಟ್ಟುಕೊಂಡು ಪ್ರತೀಕಾರ ತೀರಿಸಿಕೊಳ್ಳಲು ಹೀಗೆ ಮಾಡಿದ್ದಾರೆ ಅನ್ನೊ ಬಗ್ಗೆ ಚಾರ್ಜ್‌ಶೀಟ್‌ನಲ್ಲಿ (Police Charge Sheet) ಉಲ್ಲೇಖವಾಗಿದೆ. ಇದನ್ನೂ ಓದಿ: ಬಂಡೆಮಠದ ಸ್ವಾಮೀಜಿಗೆ ಮಹಿಳೆಯಿಂದ ಬರುತ್ತಿತ್ತು ದೂರವಾಣಿ ಕರೆ- ಡೆತ್‍ನೋಟ್‍ನಲ್ಲಿ ರಹಸ್ಯ ಬಯಲು
ಪೊಲೀಸರ ಚಾರ್ಜ್‌ಶೀಟ್‌ನಲ್ಲಿ ಏನಿದೆ?
ನೀಲಾಂಬಿಕೆಗೆ ಬಂಡೆಮಠದ ಸ್ವಾಮಿಯ ಮೇಲೆ ಸೇಡು ಇತ್ತು. ಸ್ವಾಮೀಜಿ ಮಾಡಿದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಆಕೆ ಕಾಯುತ್ತಿದ್ದಳು. ಅದಕ್ಕಾಗಿ ಈ ಹಿಂದೆ ಸ್ವಾಮೀಜಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಳು. ಸ್ವಾಮೀಜಿ ಒಬ್ಬ ಹೆಣ್ಣುಬಾಕ, ಹೆಣ್ಣಿನ ಮೋಹ ಇದೆ ಅಂತಾ ಹೇಳಿದ್ದಳು. ಈ ವಿಚಾರ ಗೊತ್ತಾಗಿ ಬಂಡೆಮಠದ ಸ್ವಾಮಿ ಆಡಿಯೋ ರೆಕಾರ್ಡ್ ಮಾಡಿಕೊಂಡಿದ್ದಂತೆ. ಆ ಆಡಿಯೋದ ಮೂಲಕ ನೀಲಾಂಬಿಕೆಗೆ ಸ್ವಾಮೀಜಿ ಅವಮಾನ ಮಾಡಿದ್ದರು. ಇದನ್ನೂ ಓದಿ: ಬಂಡೆಮಠದ ಶ್ರೀ ಆತ್ಮಹತ್ಯೆ ಕೇಸ್ – ನಗ್ನವಾಗಿರುವ ಮೂರನೇ ವೀಡಿಯೋ ಬಹಿರಂಗ
ಅವಮಾನದಿಂದ ಕುಪಿತಗೊಂಡಿದ್ದ ನೀಲಾಂಬಿಕೆ ಸೇಡು ತೀರಿಸಿಕೊಳ್ಳೋ ಪ್ಲಾನ್ ಮಾಡಿದ್ದಳು. ಈ ವಿಚಾರ ತಿಳಿದು ಕಣ್ಣೂರು ಮಠದ ಸ್ವಾಮೀಜಿ ನೀಲಾಂಬಿಕೆಯನ್ನು ಬಳಸಿಕೊಂಡಿದ್ದಾರೆ. ನೀಲಾಂಬಿಕೆಗೆ ಹಣದ ಸಹಾಯ ಮಾಡಿ ವೀಡಿಯೋ ಕಾಲ್‌ಗೆ ಪ್ರೇರಣೆ ನೀಡಿದ್ದಾರೆ ಅನ್ನೋ ಸತ್ಯ ಚಾರ್ಜ್‌ಶೀಟ್‌ನಲ್ಲಿ ಬಯಲಾಗಿದೆ.