ವೆಲ್ಲಿಂಗ್ಟನ್: ನ್ಯೂಜಿಲೆಂಡ್ (New Zealand) ತಂಡದ ನಾಯಕ ಕೇನ್ ವಿಲಿಯಮ್ಸನ್ (Kane Williamson) ಟೆಸ್ಟ್ ತಂಡದ ನಾಯಕತ್ವಕ್ಕೆ ಹಠಾತ್ ಗುಡ್‌ಬೈ ಹೇಳಿದ್ದಾರೆ.
ಇದರಿಂದ ನ್ಯೂಜಿಲೆಂಡ್ (NewZealand) ಟೆಸ್ಟ್ ತಂಡದ (Test Cricket) ನಾಯಕತ್ವಕ್ಕೆ ಹಿರಿಯ ವೇಗಿ ಟಿಮ್ ಸೌಥಿ (Tim Southee) ಅವರನ್ನು ನೇಮಿಸಿದೆ. ಟಾಮ್ ಲ್ಯಾಥಮ್ (Tom Latham) ಅವರನ್ನ ಟೆಸ್ಟ್ ಉಪನಾಯಕನನ್ನಾಗಿ ಮಾಡಿದೆ. ಇದನ್ನೂ ಓದಿ: ತಂದೆಯ ಸಾಧನೆ ಸರಿಗಟ್ಟಿದ ಮಗ – ಮೊದಲ ರಣಜಿ ಪಂದ್ಯದಲ್ಲೇ ಅರ್ಜುನ್ ತೆಂಡೂಲ್ಕರ್ ಶತಕ
ಕೇನ್ ವಿಲಿಯಮ್ಸನ್ (Kane Williamson) ಈವರೆಗೆ ಮುನ್ನಡೆಸಿದ ಅಂತಾರಾಷ್ಟ್ರೀಯ 38 ಟೆಸ್ಟ್ ಪಂದ್ಯಗಳ ಪೈಕಿ 22 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 10ರಲ್ಲಿ ಸೋಲು ಕಂಡಿದೆ. ಇನ್ನುಳಿದ 8 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ. 2021ರಲ್ಲಿ ಕೇನ್ ವಿಲಿಯಮ್ಸನ್ ನಾಯಕತ್ವದಲ್ಲಿ ನ್ಯೂಜಿಲೆಂಡ್ ತಂಡ, ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (Test Worldcup) ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು (Team India) ಮಣಿಸಿ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಶೇ.44 ರಷ್ಟು ಯಶಸ್ವಿಯಾಗಿರುವ ಕೇನ್ ವಿಲಿಯಮ್ಸನ್ ಟೆಸ್ಟ್ ಯಶಸ್ವಿನಾಯಕ ಎನ್ನಿಸಿಕೊಂಡಿದ್ದಾರೆ. 216ರಲ್ಲಿ ಬ್ರೆಂಡನ್ ಮೆಕಲಮ್ (Brendon McCullum) ಟೆಸ್ಟ್ ತಂಡದ ನಾಯಕರಾಗಿದ್ದರು. ಇದನ್ನೂ ಓದಿ: ನಾವು ಬಾಬರ್ ಅಜಮ್‍ಗಿಂತ ಹೆಚ್ಚಾಗಿ ನಿಮ್ಮನ್ನು ಪ್ರೀತಿಸುತ್ತೇವೆ – ಪಾಕ್ ಅಭಿಮಾನಿಗಳಿಂದ ಕೊಹ್ಲಿಗೆ ಸಂದೇಶ
ಈ ಕುರಿತು ಮಾತನಾಡಿರುವ ಕೇನ್, `ಇದು ನನ್ನ ವೃತ್ತಿ ಜೀವನದ ಅತ್ಯಂತ ಮಹತ್ವದ ಹಂತವಾಗಿದೆ. ಇನ್ನುಮುಂದೆ ಮೈದಾನದ ಹೊರಗೂ ನನ್ನ ಕಾರ್ಯಭಾರ ಜವಾಬ್ದಾರಿ ಹೆಚ್ಚಾಗಲಿದೆ. ಹಾಗಾಗಿ ಈ ನಿರ್ಧಾರ ಸೂಕ್ತವೆನ್ನಿಸಿದೆ. ಇನ್ನು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಜೊತೆ ಚರ್ಚೆ ನಡೆಸಿದ ಬಳಿಕ, ವೈಟ್ ಬಾಲ್ ತಂಡಗಳ ನಾಯಕತ್ವದಲ್ಲಿ ಮುಂದುವರಿಯುತ್ತೇನೆ ಹಾಗೂ ಮುಂದಿನ ಎರಡು ವಿಶ್ವಕಪ್ ಟೂರ್ನಿಗಳಲ್ಲಿ ತಂಡವನ್ನು ಮುನ್ನಡೆಸುತ್ತೇನೆ’ ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ.