ಜಗ್ಗೇಶ್ ನಟನೆ `ರಾಘವೇಂದ್ರ ಸ್ಟೋರ್ಸ್’ ರಿಲೀಸ್ ಬಗ್ಗೆ ಸ್ಪಷ್ಟನೆ ನೀಡಿದ ಸಂತೋಷ್‌ ಆನಂದ್‌ರಾಮ್

Public TV
2 Min Read
RAGHAVENDERA STORS JAGGESH

ನವರಸನಾಯಕ ಜಗ್ಗೇಶ್ (Navarasnayaka Jaggesh) ಚಿತ್ರರಂಗ ಮತ್ತು ರಾಜಕೀಯ ಎರಡು ಕ್ಷೇತ್ರಗಳಲ್ಲೂ ಆಕ್ಟೀವ್ ಆಗಿದ್ದಾರೆ. ಜಗ್ಗೇಶ್ ನಟನೆ `ರಾಘವೇಂದ್ರ ಸ್ಟೋರ್ಸ್’ ರಿಲೀಸ್ ಯಾವಾಗ ಎಂಬ ಅಭಿಮಾನಿಗಳ ಗೊಂದಲಕ್ಕೆ ನಿರ್ದೇಶಕ ಸಂತೋಷ್ ಆನಂದ್‌ರಾಮ್ (Santhosh Anandram) ಸ್ಪಷ್ಟನೆ ನೀಡಿದ್ದಾರೆ.

jaggesh

ಜಗ್ಗೇಶ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಸಿನಿಮಾ ಹೊಂಬಾಳೆ ಸಂಸ್ಥೆ ನಿರ್ಮಾಣದ `ರಾಘವೇಂದ್ರ ಸ್ಟೋರ್ಸ್’ (Raghavendra Stores) ವರಲಕ್ಷ್ಮಿ ಹಬ್ಬದ ಸಮಯದಲ್ಲಿ ʻರಾಘವೇಂದ್ರ ಸ್ಟೋರ್ಸ್ʼ ರಿಲೀಸ್ ಆಗಬೇಕಿತ್ತು. ಪ್ರೇಕ್ಷಕರು ಕಾದು ಕಾದು ಸುಸ್ತಾಗಿದ್ದರು. ಟ್ವಿಟ್ಟಿರ್‌ನಲ್ಲಿ ಇದೇ ಪ್ರಶ್ನೆಯನ್ನು ನೆಟ್ಟಿಗರೊಬ್ಬರು ನಿರ್ದೇಶಕ ಸಂತೋಷ್ ಆನಂದ್‌ರಾಮ್ ಮುಂದೆ ಇಟ್ಟಿದ್ದಾರೆ. ಅದಕ್ಕೆ `ರಾಜಕುಮಾರ’ ಸಿನಿಮಾ ನಿರ್ದೇಶಕರು ಪ್ರತಿಕ್ರಿಯಿಸಿದ್ದಾರೆ. ಸಿನಿಮಾ ರಿಲೀಸ್ ಬಗ್ಗೆ ಉತ್ತರ ನೀಡಿದ್ದಾರೆ. ಇದನ್ನೂ ಓದಿ: ಪರಪುರುಷನನ್ನು ಮನೆಗೆ ಕರೆತರುತ್ತಿದ್ದರು, ಚಿತ್ರಹಿಂಸೆ ನೀಡುತ್ತಿದ್ದರು: ಖ್ಯಾತನಟಿ ಅಭಿನಯ ಅತ್ತಿಗೆ ಕಣ್ಣೀರು

`ರಾಘವೇಂದ್ರ ಸ್ಟೋರ್ಸ್’ ಸಿನಿಮಾ ಮುಂದಿನ ವರ್ಷ ಬಿಡುಗಡೆ ಆಗುತ್ತದೆ. ಬಹಳ ತುಂಟತನ, ಮಜಾ ಇರುವಂತಹ ಈ ಸಿನಿಮಾ ಒಂದಷ್ಟು ಮೌಲ್ಯಗಳನ್ನು ಹೊತ್ತು ಬರಲಿದೆ ಎಂದು ಸಂತೋಷ್ ಆನಂದ್‌ರಾಮ್ ಟ್ವೀಟ್ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ಇನ್ನೂ ಈ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಅಡುಗೆ ಭಟ್ಟನ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಟೀಸರ್ ಕೂಡ ನೆಟ್ಟಿಗರ ಗಮನ ಸೆಳೆದಿದೆ. ಶ್ವೇತಾ ಶ್ರೀವಾಸ್ತವ್ ಚಿತ್ರದಲ್ಲಿ ನವರಸ ನಾಯಕನಿಗೆ ಜೋಡಿಯಾಗಿ ಮಿಂಚಿದ್ದಾರೆ.

Jaggesh 1

ಹೋಟೆಲ್‌ನಲ್ಲಿ ಅಡುಗೆ ಭಟ್ಟನ ಕೆಲಸ ಮಾಡಿಕೊಂಡಿರುವ ನಾಯಕನಿಗೆ ವಯಸ್ಸು 40 ದಾಟಿದರೂ ಮದುವೆ ಆಗಿರಲ್ಲ. ಮದುವೆ ಆಗಲು ಆತ ಏನೆಲ್ಲಾ ಪಾಡು ಪಟ್ಟುತ್ತಾನೆ ಎನ್ನುವುದನ್ನು ತಮಾಷೆಯಾಗಿ ಸಂತೋಷ್ ಆನಂದ್‌ರಾಮ್ ಕಟ್ಟಿಕೊಟ್ಟಿದ್ದಾರೆ. ಜಗ್ಗಣ್ಣ ತಮ್ಮ ಅದ್ಭುತ ಅಭಿನಯದಿಂದ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *