ಹೈದರಾಬಾದ್: ನಾನು ಇಗಷ್ಟೇ ಬೆಳೆಯುತ್ತಿದ್ದರೆ ಹೈದರಾಬಾದ್ (Hyderabad) ಬಿಟ್ಟು ಎಂದಿಗೂ ಅಮೆರಿಕಕ್ಕೆ ಹೋಗುತ್ತಿರಲಿಲ್ಲ ಎಂದು ಹೇಳುವ ಮೂಲಕ ಜಾಗತಿಕ ಸಾಫ್ಟ್‌ವೇರ್ ಕಂಪನಿ ಅಡೋಬ್‌ನ (Adobe) ಮುಖ್ಯ ಕಾರ್ಯ ನಿರ್ವಾಹಕ ಶಾಂತನು ನಾರಾಯಣ್ (Shantanu Narayan) ಹೈದರಾಬಾದ್ ಅನ್ನು ಹಾಡಿ ಹೊಗಳಿದ್ದಾರೆ.
ಹೈದರಾಬಾದ್‌ನಲ್ಲಿ ಜನಿಸಿದ ಶಾಂತನು ನಗರದಲ್ಲಿನ ಪ್ರಸ್ತುತ ದೇಶದಲ್ಲಿನ ವ್ಯಾಪಾರದ ವಾತಾವರಣ, ತೆಲಂಗಾಣದ ಕೈಗಾರಿಕೆಗಳು, ಐಟಿ ಸಚಿವ ಕೆಟಿ ರಾಮರಾವ್ ಹಾಗೂ ಕಾರ್ಯದರ್ಶಿ ಜಯೇಶ್ ರಂಜನ್ ಅವರ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೈದರಾಬಾದ್‌ನಲ್ಲಿ ನಂಬಲಾಗದ ಹಾಗೂ ರೋಮಾಂಚನಗೊಳಿಸುವ ವಾತಾವರಣ ಸೃಷ್ಟಿಯಾಗಿದೆ ಎಂದು ಶಾಂತನು ನಾರಾಯಣ್ ಶ್ಲಾಘಿಸಿದ್ದಾರೆ.
ಹೈದರಾಬಾದ್‌ನಲ್ಲಿ ಟೈ ಗ್ಲೋಬಲ್ ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ನಾರಾಯಣ್, ನಾನು ಈಗ ಬೆಳೆಯುತ್ತಿದ್ದರೆ, ಹೈದರಾಬಾದ್‌ನಿಂದ ಹೊರಬರಲು ನನಗೆ ಯಾವುದೇ ಅಗತ್ಯವಿರುತ್ತಿರಲಿಲ್ಲ. ಹೈದರಾಬಾದ್ ಮಾತ್ರವಲ್ಲದೇ ಇಡೀ ಭಾರತದಲ್ಲಿ ಸಾಕಷ್ಟು ಅವಕಾಶಗಳಿವೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರು ನಗರದ ಸಂಬಳದಾರರ ಮನೆ ಬಾಡಿಗೆ ಭತ್ಯೆ ಶೇ.50 ಹೆಚ್ಚಳಕ್ಕೆ ತೇಜಸ್ವಿ ಸೂರ್ಯ ಮನವಿ
ನಾನು ಉದ್ಯಮಿಗಳಿಗೆ ಯಾವಾಗಲೂ ಹೇಳಬಯಸುವುದೇನೆಂದರೆ, ಬಿಕ್ಕಟ್ಟಿನ ಸಮಯವನ್ನು ವ್ಯರ್ಥ ಮಾಡುವುದು ತಪ್ಪು. ನೀವು ತಾಳ್ಮೆಯಿಲ್ಲದ ಉದ್ಯಮಿಗಳಾಗಿದ್ದರೆ ಇದು ಪ್ರಶಂಸೆಗೆ ಕಾರಣವಾಗುವ ಗುಣವಾಗಿದೆ. ವಾಣಿಜ್ಯೋದ್ಯಮ ಎಂದಿಗೂ ಉತ್ತರ ನೀಡಲು ಇಲ್ಲ ಎನ್ನುವುದಿಲ್ಲ ಎಂದು ಶಾಂತನು ಯುವ ಉದ್ಯಮಿಗಳಿಗೆ ಸ್ಪೂರ್ತಿದಾಯಕ ಮಾತುಗಳನ್ನು ನುಡಿದರು. ಇದನ್ನೂ ಓದಿ: ಭಾರತ, ಚೀನಾ ಸಂಘರ್ಷಕ್ಕೆ ಕಾರಣ ಏನು? ಅರುಣಾಚಲದ ಗಡಿಯಲ್ಲಿ ನಿಜವಾಗಿ ಏನಾಯ್ತು?