ಬೆಂಗಳೂರು: ಮುಂದಿನ 24 ಗಂಟೆಯಲ್ಲಿ ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ(Heavy rainfall) ಎಂದು ಹವಾಮಾನ ಇಲಾಖೆ(Meteorological Department)ಎಚ್ಚರಿಕೆ ನೀಡಿದೆ.
ಕರಾವಳಿ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಚಳಿ ವಾತಾವರಣ ಇರಲಿದೆ.
ಬೆಂಗಳೂರು ನಗರದಲ್ಲಿ ಶನಿವಾರ ಮಧ್ಯಾಹ್ನ ತಾಪಮಾನ 17.6 ಡಿಗ್ರಿಗೆ ಕುಸಿದಿದ್ದು, ಕಳೆದ 12 ವರ್ಷದಲ್ಲಿ ದಾಖಲಾದ ಅತ್ಯಂತ ಕಡಿಮೆ ತಾಪಮಾನ ಆಗಿದೆ. ಇದನ್ನೂ ಓದಿ: 5 ವರ್ಷದ ಪ್ರೀತಿಗೆ ಉಂಗುರದ ಮುದ್ರೆ – ಅಭಿಷೇಕ್, ಅವಿವಾ ಲವ್ ಕಹಾನಿ ಶುರುವಾಗಿದ್ದು ಹೇಗೆ?
ವೀಕೆಂಡ್ ಆದರೂ ವಿಪರೀತ ಚಳಿಯಿಂದಾಗಿ ಜನ ಹೊರಗೆ ಹೆಜ್ಜೆ ಇಡಲು ಹಿಂದೇಟು ಹಾಕಿದ್ದಾರೆ. ಬೆಂಗಳೂರಿನ ಜನನಿಬಿಡ ಪ್ರದೇಶಗಳು ಎಂದಿನಂತೆ ಇರಲಿಲ್ಲ. ಬೆಂಗಳೂರಿನ ರಸ್ತೆಗಳು, ಹೋಟೆಲ್, ಪಾರ್ಕ್‍ಗಳು ಖಾಲಿಯಾಗಿದ್ದವು. ವಾತಾವರಣದಲ್ಲಿ ತುರ್ತು ಬದಲಾವಣೆಯಿಂದಾಗಿ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗುತ್ತಿದೆ.
ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಕೊಯ್ಲಿಗೆ ಬಂದಿದ್ದ ರಾಗಿ ಹೊಲಗಳಲ್ಲೇ ಮೊಳಕೆ ಬರುವ ಆತಂಕದಲ್ಲಿವೆ. ಜಿಟಿ ಜಿಟಿ ಮಳೆಯಿಂದಾಗಿ ರಾಗಿ, ಗುಲಾಬಿ, ದ್ರಾಕ್ಷಿ, ಚೆಂಡು ಹೂ ಬೆಳೆಗಳೆಲ್ಲವೂ ನೆಲಕಚ್ಚುತ್ತಿವೆ.