ಇಶಾನ್ ಕಿಶನ್ ಒಂದೇ ದ್ವಿಶತಕಕ್ಕೆ ಹಲವು ದಾಖಲೆಗಳು ಉಡೀಸ್ – ಕೊಹ್ಲಿಗೆ ಥ್ಯಾಂಕ್ಸ್

Public TV
2 Min Read
Ishan kishan Virat Kohli

ಢಾಕಾ: ಬಾಂಗ್ಲಾದೇಶ (Bangladesh) ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ 227 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಟೀಂ ಇಂಡಿಯಾ ಆಟಗಾರರಾದ ಇಶಾನ್ ಕಿಶನ್ (Ishan Kishan) ಹಾಗೂ ವಿರಾಟ್ ಕೊಹ್ಲಿ (Virat Kohli) ಅವರ ಸಿಡಿಲಬ್ಬರದ ಬ್ಯಾಟಿಂಗ್‌ಗೆ ಅನೇಕ ವಿಶ್ವದಾಖಲೆಗಳು ನುಚ್ಚುನೂರಾಗಿವೆ. ಆದ್ರೆ ಇಶಾನ್ ಕಿಶನ್ ತನ್ನ ದಾಖಲೆಯ ಕ್ರೆಡಿಟ್ ಕಿಂಗ್ ಕೊಹ್ಲಿಗೆ ಸಲ್ಲಬೇಕು ಎಂದಿದ್ದಾರೆ.

Ishan Kishan

ಚೊಚ್ಚಲ ಶತಕವೇ ದ್ವಿಶತಕ:
ಬಾಂಗ್ಲಾ ವಿರುದ್ಧ ಇಶಾನ್ 85 ಎಸೆತಗಳಲ್ಲಿ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರು. ಬಳಿಕ ತಮ್ಮ ಬ್ಯಾಟಿಂಗ್ ಅಬ್ಬರ ಮುಂದುವರಿಸಿದ ಕಿಶನ್ ಚೊಚ್ಚಲ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಈ ಮೊದಲು ಜಿಂಬಾಬ್ವೆ ಕ್ರಿಕೆಟಿಗ ಚಾರ್ಲ್ಸ್ ಕೊವೆಂಟ್ರಿ ಚೊಚ್ಚಲ ಶತಕದಲ್ಲೇ ಅಜೇಯ 194 ರನ್ ಬಾರಿಸಿದ್ದು ಇಲ್ಲಿಯವರೆಗಿನ ಗರಿಷ್ಠ ಸ್ಕೋರ್ ಆಗಿತ್ತು. ಇದನ್ನೂ ಓದಿ: ಸಿಕ್ಸರ್, ಬೌಂಡರಿಗಳ ಸುರಿಮಳೆ – ಇಶಾನ್ ಕಿಶನ್ ಸ್ಫೋಟಕ ದ್ವಿಶತಕ

Ishan Kishan 2

ಶರವೇಗದ ದ್ವಿಶತಕ:
ಇಶಾನ್ ಕಿಶನ್ ಕೇವಲ 126 ಎಸೆತಗಳಲ್ಲಿ ದ್ವಿಶತಕ ಬಾರಿಸುವ ಮೂಲಕ ಕ್ರಿಸ್ ಗೇಲ್ ಹೆಸರಿನಲ್ಲಿದ್ದ ಅತಿವೇಗದ ದ್ವಿಶತಕದ ದಾಖಲೆಯನ್ನು ಉಡೀಸ್ ಮಾಡಿದ್ದಾರೆ. ಈ ಮೊದಲು ಕ್ರಿಸ್ ಗೇಲ್ 2015ರ ಏಕದಿನ ವಿಶ್ವಕಪ್‌ನಲ್ಲಿ (ODI WorldCup) ಜಿಂಬಾಬ್ವೆ ಎದುರು 138 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ್ದರು. ಇದನ್ನೂ ಓದಿ: ರೋಹಿತ್ ಶರ್ಮಾ ಈಗ ಸಿಕ್ಸರ್ ವೀರ – ಟಾಪ್ 2 ಸ್ಥಾನದಲ್ಲಿ ಹಿಟ್‌ಮ್ಯಾನ್

ಅತ್ಯಂತ ಕಿರಿಯ ಕ್ರಿಕೆಟಿಗ:
24 ವರ್ಷದ ಇಶಾನ್ ಕಿಶನ್ ಏಕದಿನ ಕ್ರಿಕೆಟ್‌ನಲ್ಲಿ (Cricket) ದ್ವಿಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. ಈ ಮೊದಲು ರೋಹಿತ್ ಶರ್ಮಾ 26 ವರ್ಷ ಇದ್ದಾಗ 2013ರಲ್ಲಿ ಆಸ್ಟ್ರೇಲಿಯಾ ಎದುರು ಮೊದಲ ದ್ವಿಶತಕ ಬಾರಿಸಿದ ಕಿರಿಯ ಬ್ಯಾಟರ್ ಎನಿಸಿಕೊಂಡಿದ್ದರು. ಆ ದಾಖಲೆಯಲ್ಲು ಇಶಾನ್ ಶೈನ್ ಆಗಿದ್ದಾರೆ. ಇದನ್ನೂ ಓದಿ: ಗಾಯವನ್ನೂ ಲೆಕ್ಕಿಸದೇ ಆಡಿದ ಹಿಟ್‌ಮ್ಯಾನ್‌ ಹೋರಾಟ ವ್ಯರ್ಥ – ಬಾಂಗ್ಲಾದೇಶಕ್ಕೆ ಏಕದಿನ ಸರಣಿ

Ishan Kishan 1

ಒಂಭತ್ತೇ ಇನ್ನಿಂಗ್ಸ್‌ನಲ್ಲಿ ದಾಖಲೆ:
ಇಶಾನ್ ಕಿಶನ್ ಭಾರತ ಪರ ಅತಿ ಕಡಿಮೆ 09 ಇನ್ನಿಂಗ್ಸ್ಗಳನ್ನಾಡಿ ಚೊಚ್ಚಲ ದ್ವಿಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಈ ಮೊದಲು ರೋಹಿತ್ ಶರ್ಮಾ 103ನೇ ಇನಿಂಗ್ಸ್‌ನಲ್ಲಿ ಮೊದಲ ಏಕದಿನ ದ್ವಿಶತಕ ಸಿಡಿಸಿದ್ದರು. ಆದರೆ ಇದೀಗ ಇಶಾನ್ ಕಿಶನ್ ಕೇವಲ 9ನೇ ಇನ್ನಿಂಗ್ಸ್ನಲ್ಲಿ ಈ ಸಾಧನೆ ಮಾಡಿದ್ದಾರೆ.

Top Score

290 ರನ್‌ಗಳ ಜೊತೆಯಾಟದ ದಾಖಲೆ:
ಬಾಂಗ್ಲಾದೇಶ ವಿರುದ್ಧ ಅಂತಿಮ ಪಂದ್ಯದಲ್ಲಿ ಇಶಾನ್ ಕಿಶನ್ ಹಾಗೂ ವಿರಾಟ್ ಕೊಹ್ಲಿ ಜೋಡಿ 290 ರನ್‌ಗಳ ಜೊತೆಯಾಟವಾಡುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಬಾಂಗ್ಲಾ ವಿರುದ್ಧ ಗರಿಷ್ಠ ರನ್ ಜೊತೆಯಾಟವಾಡಿದ ವಿಶ್ವದ ಟಾಪ್-10 ಜೋಡಿಯಲ್ಲಿ ಒಂದಾಗಿದೆ. ಕ್ರಿಸ್‌ಗೇಲ್ ಹಾಗೂ ಎಂ.ಎನ್ ಸ್ಯಾಮುವೆಲ್ ಜಿಂಬಾಬ್ವೆ ವಿರುದ್ಧ 2015ರ ಪಂದ್ಯದಲ್ಲಿ ಆಡಿದ 372 ರನ್‌ಗಳ ಜೊತೆಯಾಟ ಈವರೆಗಿನ ವಿಶ್ವದಾಖಲೆಯಾಗಿದೆ. ಭಾರತೀಯ ಆಟಗಾರರ ಪೈಕಿ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ 331 ರನ್, ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ 318 ರನ್‌ಗಳ ಜೊತೆಯಾಟವಾಡಿದ್ದು ವಿಶ್ವದಾಖಲೆಯಾಗಿದೆ. ಇದೀಗ ಈ ಸಾಲಿನ ಟಾಪ್-10 ಜೋಡಿಯಲ್ಲಿ ವಿರಾಟ್‌ಕೊಹ್ಲಿ ಹಾಗೂ ಇಶಾನ್ ಕಿಶನ್ ಸ್ಥಾನ ಪಡೆದುಕೊಂಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *