ಕರ್ನಾಟಕ ಪಾಲಿಟಿಕ್ಸ್ ಜಿದ್ದಾ ಜಿದ್ದಿ – ಬಿಜೆಪಿಗೆ ವಲಸೆ ಹೋಗಲು ಕಾಯ್ತಿವೆ ಹಕ್ಕಿಗಳು?

Public TV
2 Min Read
BJP Congress

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ತವರಿನಲ್ಲಿ ಬಿಜೆಪಿ (BJP) ಐತಿಹಾಸಿಕ ಗೆಲುವು ದಾಖಲಿಸಿದ ನಂತರ ಕರ್ನಾಟಕದತ್ತ ಎಲ್ಲರ ಚಿತ್ತ ಹರಿದಿದೆ. ಪ್ರತಿಷ್ಟೆಯ ಕಣವಾಗಿರುವ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು (Karnataka Election 2023) ಶತಾಯಗತಾಯ ಗೆಲ್ಲಲೇಬೇಕೆಂದು ರಾಷ್ಟ್ರೀಯ ಪಕ್ಷಗಳು ಜಿದ್ದಾಜಿದ್ದಿಗೆ ಬಿದ್ದಿವೆ.

BJP 1

ಎರಡೂ ಪಕ್ಷಗಳೂ ಆಪರೇಷನ್ ಶುರು ಮಾಡಿವೆ. ಗುಜರಾತ್ ಚುನಾವಣೆಯ (Gujarat Election) ನಂತರ ಕರ್ನಾಟಕ ಚುನಾವಣಾ ಅಖಾಡ ತೀವ್ರ ಕುತೂಹಲ ಕೆರಳಿಸಿದೆ. ಬಿಜೆಪಿ ಭರ್ಜರಿ ಗೆಲುವಿನ ನಂತರ ಕಾಂಗ್ರೆಸ್ (Congress), ಜೆಡಿಎಸ್‌ನ (JDS) ಹಲವು ಮುಖಂಡರು ಪಕ್ಷ ಸೇರಲು ಅರ್ಜಿ ಸಲ್ಲಿಸಿದ್ದಾರೆ ಎಂದು ಬಿಜೆಪಿ ಹೇಳಿಕೊಂಡಿದೆ. ಆದ್ರೆ ಕೈ-ತೆನೆ ಪಕ್ಷಗಳ ಹಾಲಿ ಶಾಸಕರೂ ಕಮಲ ಬಾವುಟ ಹಿಡೀತಾರಾ? ಜನವರಿ ಬಳಿಕ ರಾಜ್ಯದಲ್ಲಿ ಮತ್ತೊಂದು ಸುತ್ತಿನ ಪಕ್ಷಾಂತರ ಪರ್ವ ನಡೆಯುತ್ತಾ ಅನ್ನೋದು ಕುತೂಹಲ ಮೂಡಿಸಿದೆ.

BSY

ಕಾಂಗ್ರೆಸ್, ಜೆಡಿಎಸ್‌ನಿಂದ ಹಲವು ಮುಖಂಡರು ಬಿಜೆಪಿ ಸೇರಲು ತಯಾರಿ ಮಾಡಿಕೊಳ್ತಿದ್ದಾರೆ. ಬಿಜೆಪಿಯ ಪ್ರಮುಖ ನಾಯಕರ ಮೂಲಕ ಅರ್ಜಿ ಹಾಕಲು ಕಸರತ್ತು ನಡೆಸಿದ್ದಾರೆ. ಮೋದಿ ಹಾಗೂ ಅಮಿತ್ ಶಾ ವರ್ಚಸ್ಸಿನಿಂದ ಬಿಜೆಪಿ ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿ ಹಲವರು ಇದ್ದು, ಬಿಜೆಪಿ ಸೇರಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಚಹಾದೊಂದಿಗೆ ಸವಿಯಿರಿ ಕುರುಕಲು ಟೊಮೆಟೊ ಸೇವ್

Dk Shivakumar 1

ಡಿಕೆಶಿ ಹೊಸ ಬಾಂಬ್: ಇನ್ನೂ ಕೈಪಾಳದಲ್ಲಿ ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಹೊಸ ಬಾಂಬ್ ಸಿಡಿಸಿದ್ದಾರೆ. ಕೈ-ತೆನೆ ಹಲವು ಮುಖಂಡರು ಬಿಜೆಪಿ ಸೇರುವುದಾಗಿ ಘೋಷಿಸಿದ ಬೆನ್ನಲ್ಲೇ ಜೆಡಿಎಸ್‌ನಿಂದ 15 ರಿಂದ 20 ಮಂದಿ ಕಾಂಗ್ರೆಸ್ ಸೇರಲು ಸಿದ್ಧವಾಗಿದ್ದಾರೆ. ಬಿಜೆಪಿಯಿಂದಲೂ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಹುಡುಗಿಯರ ಮದುವೆ ವಯಸ್ಸು ಹೆಚ್ಚಿಸುವಂತೆ ಮಹಿಳಾ ಆಯೋಗ ಮನವಿ

JDS

ವಲಸಿಗರೂ ಸೇರಿದಂತೆ 15-20 ಮಂದಿ ನಮ್ಮ ಸಂಪರ್ಕದಲ್ಲೇ ಇದ್ದಾರೆ ಎಂದಿದ್ದಾರೆ. ಇದೀಗ ಶಾಸಕ ಎಚ್. ವಿಶ್ವನಾಥ್ ಅವರು ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಬಳಿಕ ಡಿ.ಕೆ ಶಿವಕುಮಾರ್ ಅವರನ್ನ ಭೇಟಿ ಮಾಡಿರೋದು ಮತ್ತೆ ವಲಸೆ ಹೋಗ್ತಾರಾ ಅನ್ನೋ ಅನುಮಾನಕ್ಕೆ ಕಾರಣವಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *