ಬೆಳಗಾವಿ ಗಡಿ ವಿವಾದ: ಅಮಿತ್ ಶಾ ಭೇಟಿಯಾದ ಮಹಾರಾಷ್ಟ್ರ ಸಂಸದರು – ರಾಜ್ಯ ಸಂಸದರ ದಿವ್ಯ ಮೌನ

Public TV
2 Min Read
Amit Shah

ನವದೆಹಲಿ: ಮಹಾರಾಷ್ಟ್ರ – ಕರ್ನಾಟಕ ಗಡಿ ಸಮಸ್ಯೆಗೆ ಸಂಬಂಧಿಸಿದಂತೆ (Karnataka-Maharashtra Border Issue) ಮಹಾರಾಷ್ಟ್ರ ಸಂಸದರ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನ (Amit Shah) ಭೇಟಿಯಾಗಿ ಚರ್ಚೆ ನಡೆಸಿದೆ. ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ (Supriya Sule) ನೇತೃತ್ವದಲ್ಲಿ ಸಂಸದರು ಭೇಟಿಯಾಗಿ ಗಡಿ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಸಂಸತ್‌ನಲ್ಲಿರುವ ಅಮಿತ್ ಶಾ ಕಚೇರಿಯಲ್ಲಿ ಭೇಟಿಯಾದ ಎನ್‌ಸಿಪಿ (NCP), ಕಾಂಗ್ರೆಸ್‌ (Congress), ಉದ್ದವ್ ಠಾಕ್ರೆ (Uddhav Thackeray) ಬಣದ ಶಿವಸೇನೆ ಸಂಸದರು ನಿಯೋಗದಲ್ಲಿ ಭಾಗಿಯಾಗಿದ್ದರು. ಸಭೆಯಲ್ಲಿ ಗಡಿ ವಿವಾದ ಬಗ್ಗೆ ಚರ್ಚಿಸಿದ್ದು, ಗಡಿಯಲ್ಲಿ ಮರಾಠಿಗರ ಮೇಲೆ ಕರ್ನಾಟಕದಲ್ಲಿ ಹಲ್ಲೆಯಾಗುತ್ತಿದೆ. ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುತ್ತಿದೆ. ಕೂಡಲೇ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಗಡಿ ಕನ್ನಡಿಗರಿಗೆ ಶಿಂಧೆ ಸರ್ಕಾರ ಬೆದರಿಕೆ- 11 ತಾಲೂಕಿನ ಗ್ರಾ.ಪಂಚಾಯ್ತಿ ವಿಸರ್ಜನೆ ಎಚ್ಚರಿಕೆ

Supriya sule

ಮಹಾರಾಷ್ಟ್ರ ಸಂಸದರು ಗೃಹ ಸಚಿವರನ್ನು ಭೇಟಿಯಾಗಿ ಚರ್ಚೆ ನಡೆಸುತ್ತಿದ್ದರು. ರಾಜ್ಯದ ಎಲ್ಲ ಸಂಸದರು ದಿವ್ಯ ಮೌನವಹಿಸಿದ್ದಾರೆ. ಈವರೆಗೂ ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಪ್ರಸ್ತಾಪಿಸುವ ಪ್ರಯತ್ನ ಮಾಡಿಲ್ಲ. ಈ ಹಿಂದೆ ವಿಷಯವನ್ನು ಲೋಕಸಭೆಯಲ್ಲಿ ಸುಪ್ರಿಯಾ ಸುಳೆ ಪ್ರಸ್ತಾಪಿಸಿದ ವೇಳೆ ಸಂಸದ ಶಿವಕುಮಾರ್ ಉದಾಸಿ ಪ್ರತಿಕ್ರಿಯಿಸಿದ್ದು ಹೊರತುಪಡಿಸಿದರೆ ರಾಜ್ಯದ ಹಿತ ಕಾಯುವ ದೃಷ್ಟಿಯಲ್ಲಿ ಯಾವ ಪ್ರಯತ್ನವನ್ನೂ ಸಂಸದರು ಮಾಡಿಲ್ಲ.

ಲೋಕಸಭೆಯಲ್ಲಿ ಬೆಳಗಾವಿ ಗಡಿ ವಿವಾದ ಪ್ರಸ್ತಾಪಿಸಿದ ಮಹಾರಾಷ್ಟ್ರ ಸಂಸದ ಧರೀಯಶೀಲ್ ಮಾನೆ, ದೇಶದಲ್ಲಿ ಎಲ್ಲರೂ ಒಂದೇ ಎಂದು ಭಾವಿಸಲಾಗಿದೆ. ಆದರೆ ಗಡಿ ಭಾಗಗಳಲ್ಲಿ ಶಾಂತಿ ಕದಡುವ ಸ್ಥಿತಿ ಇದೆ. ಗಡಿ ಭಾಗಗಳಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಕನ್ನಡ ಸಂಘಟನೆಗಳು ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿವೆ. ಮರಾಠಿಗರು ಆತಂಕದಿಂದ ಜೀವನ ನಡೆಸುವಂತಾಗಿದೆ. ಕರ್ನಾಟಕ ಮುಖ್ಯಮಂತ್ರಿಗಳು ಪ್ರಚೋದನಾಕಾರಿ ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು. ಆಗ ಮಾತ್ರ ಅಲ್ಲಿನ ಪರಿಸ್ಥಿತಿ ತಿಳಿಗೊಳಿಸಲು ಸಾಧ್ಯ. ಎರಡು ರಾಜ್ಯದ ಸಿಎಂಗಳನ್ನು ಒಟ್ಟುಗೂಡಿಸಿ ಸಮಸ್ಯೆ ಬಗೆಹರಿಸಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬೆಳಗಾವಿ – ಮಹಾರಾಷ್ಟ್ರ ಮಧ್ಯೆ ಬಸ್ ಸಂಚಾರ ಪುನರಾರಂಭ

ಅಮಿತ್ ಶಾ ಭೇಟಿ ಬಳಿಕ ಸಂಸದೆ ಸುಪ್ರಿಯಾ ಸುಳೆ ಮಾತನಾಡಿ, ಕರ್ನಾಟಕ ಸಿಎಂ ಹೇಳಿಕೆ‌ ಬಗ್ಗೆ ಪ್ರಸ್ತಾಪ ಮಾಡಿದ್ದೇವೆ. ಸಿಎಂಗಳ ಸಭೆ ಕರೆಯುವುದಾಗಿ ಗೃಹ ಸಚಿವರು ಹೇಳಿದ್ದಾರೆ. ಗಡಿ ಸಮಸ್ಯೆಗೆ ಕ್ರಮ ಕೈಗೊಳ್ಳಬೇಕು ಎನ್ನುವುದು ನಮ್ಮ ಒತ್ತಾಯ. ಕೂಡಲೆ ಸರ್ವ ಪಕ್ಷ ಸಭೆ ಕರೆಯುವಂತೆ ಮಹಾ ಸಿಎಂಗೆ ಒತ್ತಾಯಿಸುತ್ತೇವೆ ಎಂದು ತಿಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *