ಫಲ ನೀಡಿತು ಚಾಣಕ್ಯ ಜೋಡಿಯ ತಂತ್ರ – ಗುಜರಾತ್‌ನಲ್ಲಿ ಬಿಜೆಪಿ ಗೆಲುವಿಗೆ ಕಾರಣಗಳೇನು?

Public TV
2 Min Read
amit shah narendra modi

ನವದೆಹಲಿ: ಸತತ 7ನೇ ಬಾರಿ ಅಧಿಕಾರಕ್ಕೆ ಏರುವ ಮೂಲಕ ಗುಜರಾತ್‌ನಲ್ಲಿ(Gujarat) ಬಿಜೆಪಿ ಐತಿಹಾಸಿಕ ಸಾಧನೆ ಮಾಡಿದೆ. ಈ ಫಲಿತಾಂಶ ಬರಲು ಮೋದಿ, ಶಾ ಜೋಡಿ ಬಹಳ ಶ್ರಮ ಪಟ್ಟಿತ್ತು.

2024ರ ಲೋಕಸಭಾ ಚುನಾವಣೆಯನ್ನು ಗೆಲ್ಲಬೇಕಾದರೆ ತವರು ರಾಜ್ಯವನ್ನು ಗೆಲ್ಲಲ್ಲೇಬೇಕಿತ್ತು. ಈ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ(Narendra Modi) ಮತ್ತು ಗೃಹ ಸಚಿವ ಅಮಿತ್‌ ಶಾ(Amit Shah) ಚುನಾವಣೆಗೂ ಒಂದು ವರ್ಷದ ಮೊದಲೇ ಪ್ಲಾನ್‌ ಮಾಡಿದ್ದರು.

narendra modi road show

ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯ ಮಾಹಿತಿ ತಿಳಿದ ಮೋದಿ, ಶಾ ಜೋಡಿ ಕಳೆದ ವರ್ಷವೇ ಸಂಪುಟ ಪುನರ್ ರಚನೆ ಮಾಡಿದ್ದರು. ಹಿರಿಯರಿಗೆ ಕೊಕ್‌ ನೀಡಿ ‘ಯಂಗ್ ಕ್ಯಾಬಿನೆಟ್’ ರಚನೆ ಮಾಡಿದ್ದರು.

ಹಿರಿಯ ನಾಯಕರಾದ ನಿತೀನ್ ಪಟೇಲ್, ವಿಜಯ್ ರೂಪಾನಿ ಸೇರಿದಂತೆ ಎಂಟು ಹಿರಿಯರನ್ನು ಕ್ಯಾಬಿನೆಟ್‌ನಿಂದ ತೆಗೆದು ಆದಿವಾಸಿ, ಒಬಿಸಿ, ಪಾಟಿದಾರ್ ಸಮುದಾಯದ ಶಾಸಕರಿಗೆ ಮಂತ್ರಿ ಸ್ಥಾನ ನೀಡಲಾಗಿತ್ತು. ಎರಡು ದಶಕಗಳ ಬಳಿಕ ಪಾಟಿದಾರ್ ಸಮುದಾಯಕ್ಕೆ‌ ಸಿಎಂ ಸ್ಥಾನ ಸಿಕ್ಕಿತ್ತು. ಉತ್ತರ ಪ್ರದೇಶದಲ್ಲೂ ಬಿಜೆಪಿ ಸಣ್ಣ ಸಣ್ಣ ಸಮುದಾಯದ ನಾಯಕರಿಗೆ ಮಂತ್ರಿ ಸ್ಥಾನ ಮತ್ತು ಚುನಾವಣೆಯಲ್ಲಿ ಟಿಕೆಟ್‌ ನೀಡಿತ್ತು.  ಈ ತಂತ್ರಗಾರಿಕೆ ಯಶ್ವಸಿಯಾದ ಬೆನ್ನಲ್ಲೇ ಅದನ್ನೂ ಗುಜರಾತ್‌ನಲ್ಲೂ ಅಳವಡಿಸಿದ್ದು ಯಶಸ್ವಿಯಾಗಿದೆ. ಇದನ್ನೂ ಓದಿ: ಆಪ್‌ ಗೆದ್ದರೂ ದೆಹಲಿ ಮೇಯರ್‌ ಹುದ್ದೆ ಬಿಜೆಪಿಗೆ ಸಿಗುತ್ತಾ?

MODI AND JP NADDA

ಪಾಟೀದಾರ್ ಸಮುದಾಯದ ಭೂಪೇಂದ್ರ ಪಟೇಲ್‌ ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಪಾಟೀದಾರ್ ಸಮುದಾಯದ ಅಸಮಾಧಾನವನ್ನು ಚಾಣಕ್ಯ ಜೋಡಿ ತಣ್ಣಗೆ ಮಾಡಿತ್ತು.

2017ರಲ್ಲಿ ಬಿಜೆಪಿಗೆ ಸಡ್ಡು ಹೊಡೆದಿದ್ದ ಪಾಟೀದಾರ್ ಚಳವಳಿ ನಾಯಕ ಹಾರ್ದಿಕ್ ಪಟೇಲ್ ಹಾಗೂ ಒಬಿಸಿ ಯುವ ನಾಯಕ ಅಲ್ಪೇಶ್ ಠಾಕೂರ್ ಅವರನ್ನು ಬಿಜೆಪಿಗೆ ಸೇರಿಸಲಾಯಿತು. ಹೋರಾಟ ಮಾಡುವ ನಾಯಕರೇ ಬಿಜೆಪಿ ಸೇರಿದ್ದರಿಂದ ಅವರ ಅಭಿಮಾನಿಗಳು ಸಹಜವಾಗಿಯೇ ಬಿಜೆಪಿ ಪರ ನಿಂತರು, ಹೋರಾಟದ ಕಿಚ್ಚು ಕಡಿಮೆಯಾಯಿತು.

ವಿರೋಧ ವ್ಯಕ್ತವಾದರೂ ಹಿರಿಯರನ್ನು ಕೈ ಬಿಟ್ಟು ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ನೀಡಲಾಯಿತು. ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ 27 ರ್‍ಯಾಲಿ ಮಾಡಿದ್ದರು. ಅಷ್ಟೇ ಅಲ್ಲದೇ ಎರಡು ಐತಿಹಾಸಿಕ ರೋಡ್ ಶೋ ಮೂಲಕ ಗುಜರಾತಿಗಳ ಮನಗೆದ್ದಿದ್ದರು.

Narendra Modi Amit Shah 2

ಬಹಳ ಮುಖ್ಯವಾಗಿ 2017ರ ಚುನಾವಣೆಯಲ್ಲಿ ಬಿಜೆಪಿ 20 ಕ್ಷೇತ್ರಗಳಲ್ಲಿ ಬಹಳ ಕಡಿಮೆ ಮತಗಳ ಅಂತರದಿಂದ ಸೋತಿತ್ತು. ಈ ಕ್ಷೇತ್ರಗಳಲ್ಲಿ ಈ ಬಾರಿ ಜಯ ಸಾಧಿಸಲೇಬೇಕೆಂದು ಪಕ್ಷ ಸಂಘಟನೆ ಮಾಡಿದ್ದು ಫಲ ನೀಡಿದೆ.

ಇಷ್ಟೇ ಅಲ್ಲದೇ ಅಭಿವೃದ್ಧಿ ಕೆಲಸಗಳನ್ನು ಪ್ರಚಾರ ಮಾಡಿತ್ತು. ಮೋದಿ ತಮ್ಮ ಭಾಷಣದಲ್ಲಿ ಕಾಂಗ್ರೆಸ್‌ ಅಭಿವೃದ್ಧಿ ಸಮಸ್ಯೆಯಾಗಿತ್ತು. ಸರ್ದಾರ್ ಸರೋವರ ಯೋಜನೆ ನೀರು ತಡವಾಗಿ ಗ್ರಾಮಗಳನ್ನು ತಲುಪಲು ಕಾಂಗ್ರೆಸ್‌ ಕಾರಣ ಎಂದು ಆರೋಪ ಮಾಡಿದ್ದರು.

27 ವರ್ಷಗಳ ಆಡಳಿತದ ಬಳಿಕವೂ ಗೆಲ್ಲವುದು ಬಹಳ ಸುಲಭದ ಮಾತಲ್ಲ. ಆದರೆ ಈಗ 7ನೇ ಬಾರಿ ಅಧಿಕಾರಕ್ಕೆ ಏರಿ ಕಾಂಗ್ರೆಸ್‌ ಪಕ್ಷವನ್ನೇ ಬಿಜೆಪಿ ಬಹುತೇಕ ಹೊಸಕಿ ಹಾಕಿದೆ. ಕಾಂಗ್ರೆಸ್‌ ಮತಗಳನ್ನು ಆಪ್‌ ವಿಭಜಿಸಿದ್ದರಿಂದ ಬಿಜೆಪಿಯ ಗೆಲುವು ಸುಗಮವಾಗಿದೆ.

ದೇಶ ಆಳಬೇಕಾದರೆ ನಾಯಕ ಮೊದಲು ತನ್ನ ರಾಜ್ಯವನ್ನು ಗೆಲ್ಲಬೇಕು. ಪ್ರಧಾನಿ ಮೋದಿ ರಾಜ್ಯವನ್ನು ಗೆದ್ದಿರುವುದು ಮಾತ್ರವಲ್ಲ ಕ್ಲೀನ್‌ ಸ್ವೀಪ್‌ನೊಂದಿಗೆ ಗೆಲ್ಲುವ ಮೂಲಕ 2024ರ ಚುನಾವಣೆಯ ಮೊದಲ ಪರೀಕ್ಷೆಯನ್ನೂ ರ‍್ಯಾಂಕ್‌ನೊಂದಿಗೆ ಗೆದ್ದಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *