– ಹೆಲಿಕಾಪ್ಟರ್ ಮೂಲಕ ಕುಮಾರಸ್ವಾಮಿಗೆ ಹೂವಿನ ಸುರಿಮಳೆ
ತುಮಕೂರು: ಶಿರಾದ (Sira) ಕೆಂಚಗಾನಗಹಳ್ಳಿ ಗ್ರಾಮದ ಜನರು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರನ್ನು ಕೊತ್ತಂಬರಿ ಸೊಪ್ಪಿನ ಹಾರ ಹಾಕಿ ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.
ಜೆಡಿಎಸ್‍ನಿಂದ ನಡೆಯುತ್ತಿರುವ ಪಂಚರತ್ನ ರಥಯಾತ್ರೆಗೆ ತುಮಕೂರಿನಲ್ಲಿ (Tumkur) ಭರ್ಜರಿ ಪ್ರತಿಕ್ರಿಯೆ ಬರುತ್ತಿದೆ. ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ಈ ರಥಯಾತ್ರೆಯ ನೇತೃತ್ವವನ್ನು ವಹಿಸಿದ್ದು, ತುಮಕೂರು ಜಿಲ್ಲೆಯ ಪ್ರತಿ ಗ್ರಾಮದ ಜನರು ಅದ್ಧೂರಿಯಾಗಿ ಅವರನ್ನು ಬರಮಾಡಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ ಅವರಿಗೆ ಹೂವಿನ ಹಾರವೊಂದೇ ಅಲ್ಲದೇ ಅವರಿಗೆ ಕೆಜಿಗಟ್ಟಲೇ ತೂಕದ ಹಣ್ಣು, ತರಕಾರಿ ಹಾರವನ್ನು ಹಾಕಿ ಸನ್ಮಾನಿಸುತ್ತಿದ್ದಾರೆ.
ಶಿರಾ ವಿಧಾನಸಭೆ ಕ್ಷೇತ್ರದ ಕೆಂಚಗಾನಹಳ್ಳಿ ಗ್ರಾಮದಲ್ಲಿ ಕೊತ್ತಮಿರಿ ಹಾರ ಹಾಕಿ ನನ್ನನ್ನು ಬರಮಾಡಿಕೊಂಡ ಮಹಾಜನರು. 1/2#ಪಂಚರತ್ನ_ರಥಯಾತ್ರೆ #ಶಿರಾ #ತುಮಕೂರು pic.twitter.com/fH1PA0IfnO
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 6, 2022
ಸೋಮವಾರ ಶಿರಾ ಪಟ್ಟಣಕ್ಕೆ ಭೇಟಿ ನೀಡಿದ್ದ ವೇಳೆ ಹೆಚ್‍ಡಿಕೆಯನ್ನು ಕಂಡ ಕೆಂಚಗಾನಗಹಳ್ಳಿ ಗ್ರಾಮಸ್ಥರು ಕೊತ್ತಂಬರಿ ಹಾರವನ್ನು ಹಾಕಿ ಸನ್ಮಾನಿಸಿದ್ದು, ವಿಶೇಷವಾಗಿತ್ತು. ಜೊತೆಗೆ ಶಿರಾದ ಜನರು ಡೊಳ್ಳುಮೆಣಸಿನ ಹಾರವನ್ನು ಹಾಕಿ ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಹೆಚ್.ಡಿ ಕುಮಾರಸ್ವಾಮಿ ಅವರೇ ಫೋಟೋ ಹಾಗೂ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಗ್ರಾ.ಪಂಗೂ ಕಾಲಿಟ್ಟ ರೆಸಾರ್ಟ್ ಪಾಲಿಟಿಕ್ಸ್ – ಬೆಂಗಳೂರಿನ ರೆಸಾರ್ಟ್‍ನಲ್ಲಿ 40 ದಿನ ಇದ್ರು ಸದಸ್ಯರು
ಅಭಿಮಾನದ ಮಹಾಮಳೆ.
ಪ್ರವಾಹದಂತೆ ಹರಿದು ಬಂದಿದ್ದ ಮಹಾಜನತೆಯ ಮೇಲೆ ನೀಲಾಕಾಶದಿಂದ ಪುಷ್ಪ ಸಿಂಚನ. ಇದು ಆವಿಸ್ಮರಣೀಯ ನೆನಪು ಹಾಗೂ ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸದ ಪರಾಕಾಷ್ಠೆ.
ಗುಬ್ಬಿ ಕ್ಷೇತ್ರದ ಜನತೆಗೆ ಅನಂತ ಧನ್ಯವಾದಗಳು. ಕ್ಷೇತ್ರದ ಅಭ್ಯರ್ಥಿ ಶ್ರೀ ನಾಗರಾಜ್ ರಿಗೆ ಶುಭ ಹಾರೈಕೆಗಳು.#ಪಂಚರತ್ನ_ರಥಯಾತ್ರೆ#ಗುಬ್ಬಿ #ತುಮಕೂರು pic.twitter.com/ACq18e0xgO
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 6, 2022
ಇಂದು ಕೂಡ ಈ ರಥಯಾತ್ರೆ ಮುಂದುವರಿದಿದ್ದು, ಗುಬ್ಬಿ ಪಟ್ಟಣದತ್ತ ಸಾಗಿದೆ. ಅಲ್ಲಿಯೂ ಕೂಡ ಹೆಚ್‍ಡಿಕೆಗೆ ಹೆಲಿಕಾಪ್ಟರ್ ಮೂಲಕ ಹೂವಿನ ದಳವನ್ನು ಸುರಿಮಳೆಗೈಯುವ ಮೂಲಕ ವಿಭಿನ್ನವಾಗಿ ಸ್ವಾಗತಿಸಿದ್ದಾರೆ. ಮೂರು ರೌಂಡ್ ಹೆಲಿಕಾಪ್ಟರ್‌ನಲ್ಲಿ ಅಭಿಮಾನಿಗಳು ಹೆಚ್‍ಡಿಕೆಗೆ ಗುಲಾಬಿ ಹೂವಿನ ದಳವನ್ನು ಸುರಿದಿದ್ದಾರೆ. ಇದನ್ನೂ ಓದಿ: ಹಳ್ಳಿಹಕ್ಕಿ ಮರಳಿ ಗೂಡು ಸೇರುತ್ತಾ? ನಿನ್ನೆ ಖರ್ಗೆ, ಇವತ್ತು ಸಿದ್ದು ಭೇಟಿಯ ಗುಟ್ಟೇನು?
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]