ವಿಶಾಖಪಟ್ಟಣಂ: ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಮಯಾಂಕ್ ಅಗರ್ವಾಲ್ ಭಾರತದ ಪರ ಸಿಕ್ಸರ್ ದಾಖಲೆ ಬರೆದಿದ್ದಾರೆ.
ಮೊದಲ ಬಾರಿಗೆ ಕ್ರೀಸ್ ಹಂಚಿಕೊಂಡ ಈ ಜೋಡಿ ಒಟ್ಟು 9 ಸಿಕ್ಸ್ ಸಿಡಿಸಿದೆ. ಈ ಮೂಲಕ ಭಾರತದ ಪರ ಮೊದಲ ಬಾರಿಗೆ 9 ಸಿಕ್ಸ್ ಸಿಡಿಸಿದ ಆರಂಭಿಕ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ರೋಹಿತ್ ಶರ್ಮಾ 6 ಸಿಕ್ಸ್ ಹೊಡೆದಿದ್ದರೆ ಅಗರ್ವಾಲ್ 3 ಸಿಕ್ಸ್ ಹೊಡೆಯುವುದರೊಂದಿಗೆ ಈ ಸಾಧನೆ ನಿರ್ಮಾಣವಾಗಿದೆ.
Advertisement
ಬುಧವಾರ ಭಾರತ 59.1 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 202 ರನ್ ಹೊಡೆದಿದ್ದ ಸಂದರ್ಭದಲ್ಲಿ ಮಂದ ಬೆಳಕಿನ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಇಂದು ಈ ಜೋಡಿ 115 ರನ್ ಸೇರಿಸಿತು. ತಂಡದ ಮೊತ್ತ 317 ಆಗಿದ್ದಾಗ 176 ರನ್(244 ಎಸೆತ, 23 ಬೌಂಡರಿ, 6 ಸಿಕ್ಸರ್) ಹೊಡೆದಿದ್ದ ರೋಹಿತ್ ಶರ್ಮಾ ಸ್ಟಂಪ್ ಔಟ್ ಆದರು. ಏಕದಿನ ಶೈಲಿಯಲ್ಲೇ ರೋಹಿತ್ ಶರ್ಮಾ ಬ್ಯಾಟ್ ಬೀಸಿದ ಪರಿಣಾಮ ಬೌಂಡರಿ ಸಿಕ್ಸರ್ ನೆರವಿನಿಂದಲೇ 128 ರನ್ ಹೊಡೆದರು.
Advertisement
Advertisement
84 ಎಸೆತಗಳಲ್ಲಿ 50 ರನ್ ಪೂರ್ಣಗೊಳಿಸಿದ ರೋಹಿತ್ 154 ಎಸೆತಗಳಲ್ಲಿ ಶತಕ ಹೊಡೆದಿದ್ದರು. 114 ಎಸೆತಗಳಲ್ಲಿ 50 ರನ್ ಹೊಡೆದಿದ್ದ ಮಯಾಂಕ್ 204 ಎಸೆತ ಎದುರಿಸಿ ಚೊಚ್ಚಲ ಶತಕ ಬಾರಿಸಿದರು.
Advertisement
ರೋಹಿತ್ ಶರ್ಮಾ ಔಟಾದ ನಂತರ ಬಂದ ಚೇತೇಶ್ವರ ಪೂಜಾರ 6 ರನ್ ಗಳಿಸಿ ಔಟಾದರೆ ಕೊಹ್ಲಿ 20 ರನ್ ಹೊಡೆದರು. ಇತ್ತೀಚಿನ ವರದಿ ಬಂದಾಗ 105 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 386 ರನ್ ರನ್‍ಗಳಿಸಿದೆ. ಮಯಾಂಕ್ ಅಗರ್ವಾಲ್ 177 ರನ್(331 ಎಸೆತ, 20 ಬೌಂಡರಿ, 4 ಸಿಕ್ಸರ್) ರನ್ ಗಳಿಸಿದ್ದರೆ ಅಜಿಂಕ್ಯಾ ರಹಾನೆ 5 ರನ್ ಗಳಿಸಿ ಗಳಿಸಿ ಆಡುತ್ತಿದ್ದಾರೆ.
ರೋಹಿತ್ ಶರ್ಮಾ ಮಯಾಂಕ್ ಭಾರತದ ಪರ ಮೂರನೇ ಅತಿ ಹೆಚ್ಚಿನ ಜೊತೆಯಾಟವಾಡಿದ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1956 ರಲ್ಲಿ ಪಂಕಜ್ ರಾಯ್ ಮತ್ತು ವಿನೂ ಮಂಕಡ್ ನ್ಯೂಜಿಲೆಂಡ್ ವಿರುದ್ಧ 413 ರನ್ ಹೊಡೆದಿದ್ದರೆ 2006ರಲ್ಲಿ ಸೆಹ್ವಾಗ್ ಮತ್ತು ದ್ರಾವಿಡ್ ಪಾಕಿಸ್ತಾನದ ವಿರುದ್ಧ 410 ರನ್ ಹೊಡೆದಿದ್ದರು.