– 10,228 ಮಂದಿ ಜನ ಡಿಸ್ಚಾರ್ಜ್
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರಣಕೇಕೆ ಮುಂದುವರಿದಿದ್ದು, ಇಂದು 10,228 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 6,57,705ಕ್ಕೆ ಏರಿಕೆಯಾಗಿದೆ.
ಇಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಪ್ರಕಾರ, 9,993 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 91 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇಲ್ಲಿಯವರೆಗೆ 9,461 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
Advertisement
Advertisement
ಇಂದು ರಾಜ್ಯದಲ್ಲಿ 10,228 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 6,57,705 ಸೋಂಕಿತರ ಪೈಕಿ 1,15,151 ಸಕ್ರಿಯ ಪ್ರಕರಣಗಳಾಗಿದ್ದು, 5,33,074 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 848 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
ಇಂದು 48,035 ಮಂದಿಯ ರ್ಯಾಪಿಡ್ ಟೆಸ್ಟ್ ನಲ್ಲಿ, 44,456 ಆರ್ ಟಿ ಪಿಸಿಆರ್ ಮತ್ತು ಇತರೇ ಪರೀಕ್ಷೆ ಮಾಡಿದ್ದು, ಒಟ್ಟು 92,491 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಈ ವರೆಗೆ ಒಟ್ಟು 20,03,778 ಮಂದಿಗೆ ರ್ಯಾಪಿಡ್ ಟೆಸ್ಟ್, 34,16,176 ಮಂದಿಗೆ ಆರ್ ಟಿ ಪಿಸಿಆರ್ ಮತ್ತು ಇತರೆ ಪರೀಕ್ಷೆ ಮಾಡಿದ್ದು, ಒಟ್ಟು ಕರ್ನಾಟಕದಲ್ಲಿ 54,19,954 ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ.
Advertisement
ಬೆಂಗಳೂರಿನಲ್ಲಿ ಇಂದು 5,012 ಮಂದಿಗೆ ಸೋಂಕು ದೃಢವಾಗಿದ್ದು, 34 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,57,241ಕ್ಕೆ ಏರಿಕೆ ಆಗಿದೆ. 3,354 ಜನ ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಒಟ್ಟು ಡಿಸ್ಚಾರ್ಜ್ ಆದವರ ಸಂಖ್ಯೆ 1,98,369ಕ್ಕೆ ಏರಿಕೆಯಾಗಿದೆ. 55,736 ಸಕ್ರಿಯ ಪ್ರಕರಣಗಳಿವೆ.
ಬಾಗಲಕೋಟೆ 84, ಬಳ್ಳಾರಿ 253, ಬೆಳಗಾವಿ 153, ಬೆಂಗಳೂರು ಗ್ರಾಮಾಂತರ 212, ಬೀದರ್ 30, ಚಾಮರಾಜನಗರ 79, ಚಿಕ್ಕಬಳ್ಳಾಪುರ 152, ಚಿಕ್ಕಮಗಳೂರು 120, ಚಿತ್ರದುರ್ಗ 332, ದಕ್ಷಿಣ ಕನ್ನಡ 272, ದಾವಣಗೆರೆ 279, ಧಾರವಾಡ 126, ಗದಗ 93, ಹಾಸನ 235, ಹಾವೇರಿ 81, ಕಲಬುರಗಿ 103, ಕೊಡಗು 83, ಕೋಲಾರ 161, ಕೊಪ್ಪಳ 125, ಮಂಡ್ಯ 197, ಮೈಸೂರು 373, ರಾಯಚೂರು 107, ರಾಮನಗರ 111, ಶಿವಮೊಗ್ಗ 224, ತುಮಕೂರು 475, ಉಡುಪಿ 224, ಉತ್ತರ ಕನ್ನಡ 150, ವಿಜಯಪುರ 80 ಹಾಗೂ ಯಾದಗಿರಿಯಲ್ಲಿ 67 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.