998 ಪಾಸಿಟಿವ್‌, 11 ಬಲಿ – 1,601 ಡಿಸ್ಚಾರ್ಜ್‌

Public TV
1 Min Read
Corona 5

ಬೆಂಗಳೂರು: ಕರ್ನಾಟಕದಲ್ಲಿ ಇಂದು 998 ಮಂದಿಗೆ ಸೋಂಕು ಬಂದಿದ್ದು 11 ಮಂದಿ ಸಾವನ್ನಪ್ಪಿ 1,601 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 8,94,004 ಕ್ಕೆ ಏರಿಕೆಯಾಗಿದೆ. ಈ ಪೈಕಿ 24,767 ಸಕ್ರಿಯ ಪ್ರಕರಣಗಳಿದ್ದು, 8,57,351 ಮಂದಿ ಬಿಡುಗಡೆಯಾಗಿದ್ದಾರೆ.

dec 7 2

ಇಲ್ಲಿಯವರೆಗೆ ಒಟ್ಟು 11,867 ಮಂದಿ ಮೃತಪಟ್ಟಿದ್ದು, ಸದ್ಯ 279 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಒಟ್ಟು 6,472 ಆಂಟಿಜನ್‌ ಟೆಸ್ಟ್‌ ಮಾಡಿದ್ದು 69,999 ಆರ್‌ಟಿ ಪಿಸಿಆರ್‌ ಟೆಸ್ಟ್‌ ಮಾಡಿದ್ದು ಒಟ್ಟು 76,471 ಪರೀಕ್ಷೆ ಮಾಡಲಾಗಿದೆ.

dec 7 1

ಬೆಂಗಳೂರು ನಗರದಲ್ಲಿ 501 ಮಂದಿಗೆ ಸೋಂಕು ಬಂದಿದ್ದು,861 ಮಂದಿ ಬಿಡುಗಡೆಯಾಗಿ 7 ಮಂದಿ ಸಾವನ್ನಪ್ಪಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ 48, ಹಾಸನ 43, ಮೈಸೂರು 34 ಮಂದಿಗೆ ಸೋಂಕು ಬಂದಿದೆ.

ಐಸಿಯುನಲ್ಲಿ 279 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಬೆಂಗಳೂರು ನಗರದಲ್ಲಿ 133, ತುಮಕೂರು 23, ಚಾಮರಾಜನಗರದಲ್ಲಿ 16, ಹಾಸನ 15 ಮಂದಿ ದಾಖಲಾಗಿದ್ದಾರೆ.

dec 7 3

Share This Article
Leave a Comment

Leave a Reply

Your email address will not be published. Required fields are marked *