99 ವರ್ಷದ ವೃದ್ಧೆಯನ್ನೂ ಬಿಡದ ಪಾಪಿ – ಹಿಡನ್ ಕ್ಯಾಮೆರಾದಲ್ಲಿ ಕ್ರೌರ್ಯ ಸೆರೆ!

Public TV
2 Min Read
old women 1

ಲಂಡನ್: ಹೋಮ್ ಕೇರ್‌ನಲ್ಲಿ ಇದ್ದ 99 ವರ್ಷದ ವೃದ್ಧೆಯನ್ನು ಆರೈಕೆ ಮಾಡಬೇಕಿದ್ದ ವ್ಯಕ್ತಿಯೇ ಅತ್ಯಾಚಾರ ಮಾಡಿದ್ದಾನೆ. ವೃದ್ಧೆಯ ಮೇಲೆ ಆತನ ನಡೆಸಿದ ಕೌರ್ಯ ಹಿಡನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹೋಮ್ ಕೇರ್‌ನಲ್ಲಿ ವಾಸಿಸುತ್ತಿದ್ದ 99 ವರ್ಷದ ವೃದ್ಧೆಯ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿದ್ದು, ಇದರಿಂದ ಆತಂಕಗೊಂಡ ಕುಟುಂಬಸ್ಥರು ಯಾರಿಗೂ ತಿಳಿಯದಂತೆ ಆಕೆಯ ರೂಮ್‍ನಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಿದ್ದಾರೆ. ಬಳಿಕ ಮತ್ತೆ ಹೋಮ್ ಕೇರ್ ಗೆ ಬಂದು ಕ್ಯಾಮೆರಾ ಚೆಕ್ ಮಾಡಿದಾಗ ಕುಟುಂಬದವರಿಗೆ ಸತ್ಯ ತಿಳಿದುಬಂದಿದೆ. ಇದನ್ನೂ ಓದಿ: ತಂದೆ ಎನ್ನುವುದನ್ನು ನೋಡದೆ ಕೇವಲ 900 ರೂ. ಆಸೆಗೆ ಕೊಂದೇ ಬಿಟ್ಟ!

CCTV 1

ಮೊದಲು ಈ ವೀಡಿಯೋ ನೋಡಿದ ಕುಟುಂಬದವರು ಶಾಕ್ ಆಗಿದ್ದು, 99 ವರ್ಷದ ವೃದ್ಧೆ ಮೇಲೆ ಹೇಗೆ ಈ ರೀತಿ ಮಾಡಲು ಸಾಧ್ಯ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪೊಲೀಸರಿಗೆ ಮಾಹಿತಿ ಸಿಕ್ಕ ನಂತರ ಸಿಬ್ಬಂದಿಯನ್ನು ಬಂಧಿಸಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಪ್ರಸ್ತುತ ನ್ಯಾಯಾಲಯ ಆರೋಪಿಗೆ 10 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ.

crime

ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದ ವೃದ್ಧೆ!
ವೃದ್ಧೆಯು ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದ ಪರಿಣಾಮ ಚಿಕಿತ್ಸೆಗಾಗಿ ಆಕೆಯನ್ನು ಬ್ಲ್ಯಾಕ್‍ಪೂಲ್ ಕೇರ್ ಹೋಮ್‍ನಲ್ಲಿ ಬಿಟ್ಟಿದ್ದಾರೆ. ವಾರಕ್ಕೆ ಒಂದೆರೆಡು ಬಾರಿ ವೃದ್ಧೆಯನ್ನು ನೋಡಲು ಬರುತ್ತಿದ್ದರು. ಆದರೆ ಸ್ವಲ್ಪ ದಿನಗಳಿಂದ ಕುಟುಂಬದವರು ವೃದ್ಧೆಯನ್ನು ಮುಟ್ಟಲು ಹೋದಾಗಲೆಲ್ಲ ಆಕೆ ವಿಚಿತ್ರವಾಗಿ ವರ್ತಿಸುತ್ತಿರುವುದನ್ನು ನೋಡಿ ಆತಂಕಗೊಂಡಿದ್ದಾರೆ. ಅದಕ್ಕೆ ಸಿಬ್ಬಂದಿಗೆ ತಿಳಿಯದಂತೆ ವೃದ್ಧೆ ಕೊಠಡಿಯಲ್ಲಿ ಕುಟುಂಬದವರು ಕ್ಯಾಮೆರಾವನ್ನು ಫಿಕ್ಸ್ ಮಾಡಿದ್ದಾರೆ.

ಸ್ವಲ್ಪದಿನ ಬಿಟ್ಟು ವೃದ್ಧೆಯನ್ನು ನೋಡಲು ಬಂದ ಕುಟುಂಬದವರು ಕ್ಯಾಮೆರಾವನ್ನು ಚೆಕ್ ಮಾಡಿದ್ದು, ಆಗ ಸತ್ಯ ಬೆಳಕಿಗೆ ಬಂದಿದೆ. ಹೋಮ್ ಕೇರ್ ಸಿಬ್ಬಂದಿ 48 ವರ್ಷದ ಫಿಲಿಪ್ ಕ್ಯಾರಿ ತನ್ನ ಆಸೆಗಾಗಿ ವೃದ್ಧಿಗೆ ಕೊಡುತ್ತಿದ್ದ ಚಿತ್ರಹಿಂಸೆ ನೋಡಿ ಕುಟುಂಬದವರು ಆಫಾತಕ್ಕೆ ಒಳಗಾಗಿದ್ದಾರೆ.

Police Jeep

ನಾನು ಎಂದಿಗೂ ಯೋಚಿಸಿರಲಿಲ್ಲ!
ಮಹಿಳೆಯ ಸಂಬಂಧಿಯೊಬ್ಬರು, ಆಕೆಯ ವರ್ತನೆಯಲ್ಲಿನ ಹಠಾತ್ ಬದಲಾವಣೆಯಿಂದ ನಾವೆಲ್ಲರೂ ಕಳವಳಗೊಂಡಿದ್ದೆವು. ಇದಕ್ಕೆ ಕಾರಣ ಏನೆಂದು ತಿಳಿಯಬೇಕೆಂದು ಆಕೆಯ ಕೊಠಡಿಯಲ್ಲಿ ರಹಸ್ಯ ಕ್ಯಾಮೆರಾ ಹಾಕಿದೆವು. ನಂತರ ಕ್ಯಾಮೆರಾದಲ್ಲಿ ದೃಶ್ಯಾವಳಿಗಳನ್ನು ನೋಡಿದಾಗ ನಮಗೆ ಆಶ್ಚರ್ಯವಾಯಿತು. ವಯಸ್ಸಾದ ಮತ್ತು ಅನಾರೋಗ್ಯದ ಮಹಿಳೆಗೆ ಈ ರೀತಿಯಾಗಬಹುದು ಎಂದು ನಾವು ಎಂದಿಗೂ ಯೋಚಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ತಂಗಿ ಆರೋಗ್ಯ ಸರಿಯಿಲ್ಲವೆಂದು ಕ್ಯಾಬ್ ದರೋಡೆ ಮಾಡಿದ ಸಹೋದರರು..!

10 ವರ್ಷ ಕಾಲ ಜೈಲು!
ಫೂಟೇಜ್ ಮತ್ತು ಫೋರೆನ್ಸಿಕ್ ಸಾಕ್ಷ್ಯದ ಆಧಾರದ ಮೇಲೆ, ಫಿಲಿಪ್ ಕ್ಯಾರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯದ ತೀರ್ಪಿಗೆ ಸಂತಸ ವ್ಯಕ್ತಪಡಿಸಿರುವ ಸಂತ್ರಸ್ತೆಯ ಕುಟುಂಬ, ಈಗ ಬೇರೆಯವರ ಬದುಕನ್ನು ಆತ ಹಾಳು ಮಾಡಲು ಸಾಧ್ಯವಿಲ್ಲ. ಈ ರೀತಿಯ ಹೋಮ್ ಕೇರ್‍ಗಳಿಂದ ಜಾಗರೂಕರಾಗಿರಿ ಎಂದು ಮನವಿ ಮಾಡಿದ್ದಾರೆ.

Share This Article