ಲಕ್ನೋ: ಇಳಿ ವಯಸ್ಸಿನಲ್ಲೂ ಸ್ವಾವಲಂಬನೆ ಜೀವನ ಮಾಡುತ್ತಿರುವ 98ರ ವೃದ್ಧರೊಬ್ಬರಿಗೆ ಉತ್ತರ ಪ್ರದೇಶದ ರಾಯ್ಬರೇಲಿ ಜಿಲ್ಲಾಡಳಿತ ಸನ್ಮಾನ ಮಾಡಿದೆ.
ವಿಜಯ್ ಪಾಲ್ ಸಿಂಗ್ ಅವರಿಗೆ ಈಗ 98 ವರ್ಷ. ದೇಹಕ್ಕೆ ವಯಸ್ಸದರೂ ಕೆಲಸ ಮತ್ತು ಉತ್ಸಾಹಕ್ಕೆ ಮುಪ್ಪು ಇಲ್ಲ ಎಂಬಂತೆ ಲಕ್ನೋದಿಂದ 79ಕಿ.ಮೀ ದೂರವಿರುವ ರಾಯ್ಬರೇಲಿ ರಸ್ತೆ ಬದಿ ಬೇಯಿಸಿದ ಬಟಾಣಿಯನ್ನು ಮಾರುವ ಮೂಲಕ ಇವರು ಸ್ವತಂತ್ರವಾಗಿ ಜೀವನ ನಡೆಸುತ್ತಿದ್ದಾರೆ.
Advertisement
Advertisement
ಜಿಲ್ಲಾಧಿಕಾರಿ ವೈಭವ್ ಶ್ರೀವಾಸ್ತವ ಅವರು, ವಿಜಯ್ ಪಾಲ್ ಸಿಂಗ್ ಅವರನ್ನು ಗುರುವಾರ ಕಚೇರಿಗೆ ಆಹ್ವಾನಿಸಿ ಶಾಲು ಹೊದಿಸಿ, ವಾಕಿಂಗ್ ಸ್ಟಿಕ್ ಜೊತೆಗೆ 11 ಸಾವಿರ ರೂ. ನಗದು ಮತ್ತು ಪ್ರಮಾಣ ಪತ್ರವನ್ನು ನೀಡಿ ಗೌರವಿಸಿದರು.
Advertisement
ಪ್ರಶಸ್ತಿ ಸಮಾರಂಭದ ನಂತರ ವೃದ್ಧ ವಾಕಿಂಗ್ ಸ್ಟಿಕ್ ಮತ್ತು ಅಧಿಕಾರಿಯ ಸಹಾಯ ಪಡೆದು ಕಚೇರಿಯಿಂದ ಹೊರಟರು. 98 ವರ್ಷದ ವಿಜಯ್ ಪಾಲ್ ಸಿಂಗ್ರವರ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವೀಡಿಯೋ ಜಿಲ್ಲಾಧಿಕಾರಿಯವರ ಗಮನ ಸೆಳೆದಿತ್ತು.