ನವದೆಹಲಿ: ಹಜ್ (Hajj) ಯಾತ್ರೆಗಾಗಿ ಸೌದಿ ಅರೇಬಿಯಾಗೆ (Saudi Arabia) ತೆರಳಿದ್ದ 98 ಭಾರತೀಯರು (Indians) ಸಾವನ್ನಪ್ಪಿದ್ದಾರೆ. ಎಲ್ಲ ಸಾವುಗಳಿಗೆ ವಯೋ ಸಹಜ ಖಾಯಿಲೆ, ವೃದ್ಧಾಪ್ಯ ಕಾರಣ ಎಂದು ಕೇಂದ್ರ ವಿದೇಶಾಂಗ ಇಲಾಖೆ (MEA) ಹೇಳಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಇಲಾಖೆ, ನೈಸರ್ಗಿಕ ಕಾರಣಗಳಿಂದ ಭಾರತೀಯ ಮೂಲದ ಹಜ್ ಯಾತ್ರಿಗಳು ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.
Advertisement
#WATCH | Delhi: On the death of Hajj pilgrims from India, MEA Spokesperson Randhir Jaiswal says, “This year, 175,000 Indian pilgrims have visited Hajj so far… We have 98 Indian pilgrims who have died in Hajj…” pic.twitter.com/8vEVzOjQ8j
— ANI (@ANI) June 21, 2024
ಹಜ್ ಯಾತ್ರೆಯು ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ ಒಂದಾಗಿದೆ. ಎಲ್ಲಾ ಮುಸ್ಲಿಮರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಈ ಧಾರ್ಮಿಕ ಬಾಧ್ಯತೆಯನ್ನು ಪೂರೈಸಬೇಕು. ಈ ವರ್ಷ 1,75,000 ಭಾರತೀಯ ಯಾತ್ರಿಕರು ಹಜ್‌ಗಾಗಿ ಸೌದಿಗೆ ಭೇಟಿ ನೀಡಿದ್ದಾರೆ. ಜುಲೈ 9 ರಿಂದ 22 ರವರೆಗೆ ಕೋರ್ ಹಜ್ ಅವಧಿ ಆರಂಭವಾಗಲಿದೆ. ಈ ನಡುವೆ ಇದುವರೆಗೆ 98 ಭಾರತೀಯ ಯಾತ್ರಿಕರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಆಯುರ್ವೇದ ಮಸಾಜ್‌ಗೆ ಬಂದಾಗ ಬಲವಂತದ ಸೆಕ್ಸ್: ದೂರು ಸಲ್ಲಿಸಿದ ವಿದೇಶಿ ಯುವತಿ
Advertisement
ಈ ನಡುವೆ ಗರಿಷ್ಠ ತಾಪಮಾನ ಸುಡುವ ಬಿಸಿಲಿನ ಕಾರಣದಿಂದಾಗಿ 1000 ಕ್ಕೂ ಅಧಿಕ ಹಜ್ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. ಕಳೆದ ವರ್ಷ ಇಡೀ ಯಾತ್ರೆಯಲ್ಲಿ 180ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಸೌದಿಯ ಅಧ್ಯಯನವೊಂದು ಈ ಪವಿತ್ರ ಕ್ಷೇತ್ರದ ತಾಪಮಾನವು ಪ್ರತಿ ದಶಕದಲ್ಲಿ 0.4 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದೆ ಎಂದು ತಿಳಿಸಿದೆ.
Advertisement