9,785 ಹೊಸ ಕೊರೊನಾ ಪ್ರಕರಣ, 21,614 ಜನ ಡಿಸ್ಚಾರ್ಜ್

Public TV
1 Min Read
Corona 2 1

ಬೆಂಗಳೂರು: ಇಂದು 9,785 ಜನಕ್ಕೆ ಕೊರೊನಾ ಸೋಂಕು ತಗುಲಿದ್ದು, 21,614 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಕೊರೊನಾಗೆ 144 ಸೋಂಕಿತರು ಮರಣ ಹೊಂದಿದ್ದಾರೆ.

3 5 medium

ಸದ್ಯ ರಾಜ್ಯದಲ್ಲಿ ಕೋವಿಡ್-19 ಸೋಂಕು ಹರಡುವಿಕೆ ಪ್ರಮಾಣ ಶೇ.6.61 ಮತ್ತು ಮರಣ ಪ್ರಮಾಣ ಶೇ.1.47ರಷ್ಟು ದಾಖಲಾಗಿದೆ. ಇದುವರೆಗೂ ರಾಜ್ಯದಲ್ಲಿ ಕೊರೊನಾದಿಂದ 32,788 ಜನ ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ 1,91,796 ಸಕ್ರಿಯ ಪ್ರಕರಣಗಳಿವೆ. ಒಟ್ಟು 1,48,027 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.

2 7 medium

ನಿನ್ನೆಗಿಂತ ಇವತ್ತು ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕೊಂಚ ಏರಿಕೆಯಾಗಿದೆ. ಇಂದು 2,454 ಜನಕ್ಕೆ ಸೋಂಕು ತಗುಲಿದ್ದು, 21 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ಬೆಂಗಳೂರು ನಗರದಲ್ಲಿ 88,795 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರು ಹೊರತುಪಡಿಸಿ ಇನ್ನುಳಿದ ಎಲ್ಲ ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳು ಸಾವಿರಕ್ಕಿಂತ ಕಡಿಮೆ ವರದಿಯಾಗಿವೆ.

1 10 medium

ಯಾವ ಜಿಲ್ಲೆಯಲ್ಲಿ ಎಷ್ಟು?:
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 70, ಬಳ್ಳಾರಿ 337, ಬೆಳಗಾವಿ 443, ಬೆಂಗಳೂರು ಗ್ರಾಮಾಂತರ 424, ಬೆಂಗಳೂರು ನಗರ 2,454, ಬೀದರ್ 30, ಚಾಮರಾಜನಗರ 176, ಚಿಕ್ಕಬಳ್ಳಾಪುರ 273, ಚಿಕ್ಕಮಗಳೂರು 342, ಚಿತ್ರದುರ್ಗ 156, ದಕ್ಷಿಣ ಕನ್ನಡ 618, ದಾವಣಗೆರೆ 372, ಧಾರವಾಡ 212, ಗದಗ 60, ಹಾಸನ 624, ಹಾವೇರಿ 65, ಕಲಬುರಗಿ 60, ಕೊಡಗು 194, ಕೋಲಾರ 193, ಕೊಪ್ಪಳ 127, ಮಂಡ್ಯ 320, ಮೈಸೂರು 482, ರಾಯಚೂರು 59, ರಾಮನಗರ 32, ಶಿವಮೊಗ್ಗ 715, ತುಮಕೂರು 440, ಉಡುಪಿ 263, ಉತ್ತರ ಕನ್ನಡ 229, ವಿಜಯಪುರ 188 ಮತ್ತು ಯಾದಗಿರಿಯಲ್ಲಿ 9 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Share This Article