– ರೋಡ್ ರೇಜ್, ಹಿಟ್ & ರನ್ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಪೊಲೀಸರು
ಬೆಂಗಳೂರು: ಸಿಲಿಕಾನ್ ಸಿಟಿಯ ಸಂಚಾರ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ದೋಷಪೂರಿತ ನೋಂದಣಿ ಫಲಕ (ಡಿಫೆಕ್ಟಿವ್ ನಂಬರ್ ಪ್ಲೇಟ್) ಹೊಂದಿರುವ 9,684 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Advertisement
ಈ ಕುರಿತು ಬೆಂಗಳೂರಿನ ಸಂಚಾರ ವಿಭಾಗದ ಜಂಟಿ ಆಯುಕ್ತ ಅಲೋಕ್ ಕುಮಾರ್ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದು, ಮತ್ತೊಂದು ಅಪಾಯ.. ದೋಷಪೂರಿತ/ಸಂಖ್ಯೆ ಫಲಕಗಳಿಲ್ಲದೆ ಸಂಚಾರ ನಿಯಮ ಉಲ್ಲಂಘನೆ ಮಾಡಲಾಗುತ್ತಿದೆ. ರಸ್ತೆ ಅಪಘಾತ ಪ್ರಕರಣಗಳಲ್ಲಿ ಅಧಿಕಾರಿಗಳ ಕಣ್ತಪ್ಪಿಸಿ ಅಪರಾಧ ಎಸಗಲು ಸಹ ಬಳಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ ದಸರಾ ಗಜಪಡೆಗಳ ತಾಲೀಮು ಆರಂಭ
Advertisement
Advertisement
ನಗರದ ರಸ್ತೆಗಳಲ್ಲಿ ಹೆಚ್ಚುತ್ತಿರುವ ಕಾನೂನುಬಾಹಿರ ಚಟುವಟಿಕೆ, ಸಂಚಾರ ನಿಯಮ ಉಲ್ಲಂಘನೆ ಪರಿಹರಿಸಲು ಸಂಚಾರ ಪೊಲೀಸರ ವ್ಯಾಪಕ ಕಾರ್ಯತಂತ್ರದ ಭಾಗವಾಗಿದೆ. ದೋಷಪೂರಿತ ನಂಬರ್ ಪ್ಲೇಟ್ ಇರುವ ವಾಹನಗಳನ್ನು ಗುರುತಿಸುವುದು ಮತ್ತು ಟ್ರ್ಯಾಕಿಂಗ್ ಮಾಡುವುದಕ್ಕೆ ಸವಾಲೆಸೆಯುತ್ತವೆ. ಅಷ್ಟೇ ಅಲ್ಲದೇ, ಸಂಚಾರ ನಿಯಮ ಉಲ್ಲಂಘನೆ, ಹಿಟ್ & ರನ್ ಪ್ರಕರಣಗಳು ಸೇರಿದಂತೆ ಅಪರಾಧ ಚಟುವಟಿಕೆಗಳಲ್ಲಿ ತೊಡಗುವವರಿಗೆ ರಕ್ಷಣೆಯನ್ನೂ ಒದಗಿಸುತ್ತವೆ.
Advertisement
ಕಾನೂನು ಗುರುತಿಸುವಿಕೆ, ಕಾನೂನು ಜಾರಿ, ರಸ್ತೆ ಸುರಕ್ಷತೆ ಮತ್ತು ಸಂಚಾರ ನಿರ್ವಹಣೆಗೆ ವಾಹನ ಸಂಖ್ಯೆಗಳು ನಿರ್ಣಾಯಕವಾಗಿವೆ. ಕಾನೂನು ಜಾರಿ ಸಂಸ್ಥೆಗಳು ಸಂಚಾರ ಉಲ್ಲಂಘನೆಗಳನ್ನು ಪತ್ತೆಹಚ್ಚಲು, ಅಪರಾಧಗಳನ್ನು ತಡೆಗಟ್ಟಲು, ಅಪಘಾತಗಳು ಅಥವಾ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ವಾಹನಗಳನ್ನು ಪತ್ತೆಹಚ್ಚಲು ಸಂಖ್ಯೆಗಳನ್ನು ಬಳಸುತ್ತವೆ. ಇದನ್ನೂ ಓದಿ: ದೆಹಲಿಯಿಂದ ವಾಪಸ್ಸಾದ ಪರಮೇಶ್ವರ್ – ಮುಡಾ ಹಗರಣ ಚರ್ಚೆ ಮಾಡಿದ್ದೇವೆ ಎಂದ ಗೃಹ ಸಚಿವ