ಬಳ್ಳಾರಿ: ತುಂಗಭದ್ರಾ ಜಲಾನಯನ (Tungabhadra Dam) ಪ್ರದೇಶದಲ್ಲಿ ಭಾರೀ (Rain) ಮಳೆಯಾಗುತ್ತಿದೆ. ಇದರಿಂದ ಹೊಸಪೇಟೆ ಹೊರವಲಯದಲ್ಲಿರುವ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಡ್ಯಾಂನಿಂದ ನದಿಗೆ 96 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.
ನೀರು ಬಿಡುಗಡೆ ಮಾಡಿದ್ದರಿಂದ ಹಂಪಿಯ (Hampi) ಕೆಲ ಸ್ಮಾರಕಗಳು ಮುಳುಗಡೆಯಾಗಿವೆ. ಈಗಾಗಲೇ ಪುರಂದರ ಮಂಟಪ ಸಂಪೂರ್ಣ ಮುಳುಗಡೆಯಾಗಿದೆ. ಧಾರ್ಮಿಕ ವಿಧಿವಿಧಾನ ಮಂಟಪದ ಅರ್ಧಕ್ಕೆ ನೀರು ಬಂದಿದೆ. ಮತ್ತೊಂದೆಡೆ ಕೋದಂಡರಾಮ ದೇವಸ್ಥಾನಕ್ಕೆ ಹೋಗುವ ಕಂಪಭೂಪ ಮಾರ್ಗ ಸಂಪೂರ್ಣ ಬಂದ್ ಆಗಿದೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮಳೆಯಾರ್ಭಟ – ಕೃಷ್ಣಾ ನದಿಗೆ ಹೆಚ್ಚಿದ ಒಳಹರಿವು, 8 ಸೇತುವೆಗಳು ಜಲಾವೃತ
ಒಳಹರಿವು ಹೆಚ್ಚಾಗಿರುವುದರಿಂದ ಇನ್ನಷ್ಟು ಪ್ರಮಾಣದ ನೀರು ನದಿಗೆ ರಿಲೀಸ್ ಮಾಡುವ ಸಾಧ್ಯತೆ ಇದೆ. ಹೀಗಾಗಿ ಹಂಪಿಯ ಮತ್ತಷ್ಟು ಸ್ಮಾರಕಗಳು ಮುಳುಗಡೆಯಾಗುವ ಭೀತಿ ಇದೆ. ಇದನ್ನೂ ಓದಿ: ಮುಂಗಾರು ಅಬ್ಬರ – ಕಾವೇರಿ ನದಿಯಲ್ಲಿ ಪಿಂಡ ಪ್ರದಾನ ನಿಷೇಧ