ಬೆಂಗಳೂರು: ಇಂದು ಕರ್ನಾಟಕದಲ್ಲಿ 952 ಮಂದಿಗೆ ಕೊರೊನಾ ಬಂದಿದ್ದು, ಆಸ್ಪತ್ರೆಯಿಂದ 1,282 ಜನ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 9 ಮಂದಿ ಸಾವನ್ನಪ್ಪಿದ್ದಾರೆ.
ಬ್ರಿಟನ್‌ನಿಂದ ಬಂದವರ ಪೈಕಿ ಇಂದು 63 ಮಂದಿಗೆ ಪರೀಕ್ಷೆ ಮಾಡಿದ್ದು ಈ ಪೈಕಿ 2 ಮಂದಿಗೆ ಕೊರೊನಾ ಬಂದಿದೆ. 61 ಮಂದಿಯ ಫಲಿತಾಂಶ ಲಭ್ಯವಾಗಬೇಕಿದೆ. ಈ ಇಬ್ಬರಿಗೆ ರೂಪಾಂತರಿ ಕೊರೊನಾ ಬಂದಿದ್ಯಾ? ಇಲ್ಲವೋ ಎನ್ನುವ ವರದಿ ಐಸಿಎಂಆರ್‌ನಿಂದ ಬರಬೇಕಿಕಿದೆ. ಇಲ್ಲಿಯವರೆಗೆ ಒಟ್ಟು 2,028 ಮಂದಿಗೆ ಟೆಸ್ಟ್ ಮಾಡಿದ್ದು 33 ಮಂದಿಗೆ ಸೋಂಕು ಬಂದಿದೆ.
Advertisement
Advertisement
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9,19,496ಕ್ಕೆ ಏರಿಕೆ ಆಗಿದೆ. ಈ ಪೈಕಿ 8,96,116 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 11,271 ಸಕ್ರಿಯ ಪ್ರಕರಣಗಳಿವೆ.
Advertisement
ಒಟ್ಟು ಇಲ್ಲಿಯವರೆಗೆ 12,090 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ 217 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 9,888 ಆಂಟಿಜನ್ ಟೆಸ್ಟ್, 1,06,363 ಆರ್‌ಟಿ ಪಿಸಿಆರ್ ಸೇರಿದಂತೆ ಒಟ್ಟು 1,15,451 ಪರೀಕ್ಷೆ ಮಾಡಲಾಗಿದೆ.
Advertisement
ಎಂದಿನಂತೆ ಬೆಂಗಳೂರು ನಗರದಲ್ಲಿ 554 ಮಂದಿಗೆ ಸೋಂಕು ಬಂದಿದ್ದು 6 ಮಂದಿ ಮೃತಪಟ್ಟಿದ್ದಾರೆ. ಉಳಿದಂತೆ ಮೈಸೂರು 48, ದಕ್ಷಿಣ ಕನ್ನಡ 35, ತುಮಕೂರಿನಲ್ಲಿ 28 ಮಂದಿಗೆ ಸೋಂಕು ಬಂದಿದೆ.
ಐಸಿಯುನಲ್ಲಿಒಟ್ಟು 194 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಬೆಂಗಳೂರು ನಗರದಲ್ಲಿ 87, ತುಮಕೂರು 10, ಕಲಬುರಗಿಯಲ್ಲಿ 13 ಮಂದಿ ಇದ್ದಾರೆ.