ಜೈಪುರ್: ಮೃತಪಟ್ಟಿದ್ದಾರೆಂದುಕೊಂಡಿದ್ದ 95 ವರ್ಷದ ವೃದ್ಧರೊಬ್ಬರು ಅಂತ್ಯಸಂಸ್ಕಾರದ ವೇಳೆ ಎದ್ದು ಕುಳಿತು ಎಲ್ಲರಿಗೂ ಅಚ್ಚರಿ ಮೂಡಿಸಿದ ಘಟನೆ ರಾಜಸ್ಥಾನದ ಝನ್‍ಝನು ಜಿಲ್ಲೆಯಲ್ಲಿ ನಡೆದಿದೆ.
ಶನಿವಾರ 95 ವರ್ಷದ ಬುಧ್‍ರಾಮ್ ಗುಜ್ಜರ್ ಮನೆಯಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದರು. ಕೂಡಲೇ ಕುಟುಂಬಸ್ಥರು ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ಆದರೆ ವೈದ್ಯರು ಗುಜ್ಜರ್ ಮೃತಪಟ್ಟಿದ್ದಾರೆಂದು ದೃಢಪಡಿಸಿದ್ದರು. ಹೀಗಾಗಿ ಕುಟುಂಬಸ್ಥರು ಮೃತದೇಹವನ್ನು ಗ್ರಾಮಕ್ಕೆ ವಾಪಾಸ್ಸು ತಂದು, ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದರು.
Advertisement
Advertisement
ಅಂತ್ಯಸಂಸ್ಕಾರದ ಸಿದ್ಧತೆ ವೇಳೆ ಎಲ್ಲಾ ಕುಟುಂಬಸ್ಥರು ತಮ್ಮ ತಲೆ ಬೋಳಿಸಿಕೊಂಡು ವಿಧಿ-ವಿಧಾನದ ಪ್ರಕಾರ ಕಾರ್ಯವನ್ನು ನಡೆಸುತ್ತಿದ್ದರು. ಈ ವೇಳೆ ಮೃತದೇಹಕ್ಕೆ ಸ್ನಾನ ಮಾಡಿಸುವ ಶಾಸ್ತ್ರವನ್ನು ನಡೆಸಲು ಸಿದ್ಧರಾಗಿದ್ದರು. ಈ ವೇಳೆ ಗುಜ್ಜರ್ ದೇಹಕ್ಕೆ ನೀರು ಹಾಕುತ್ತಿರುವಾಗ ಏಕಾಏಕಿ ಅವರ ದೇಹ ನಡುಗಲು ಶುರುಮಾಡಿದೆ. ಬಳಿಕ ಜೋರಾಗಿ ಉಸಿರಾಡುತ್ತಾ ಗುಜ್ಜರ್ ಎದ್ದು ಕುಳಿತ್ತಿದ್ದಾರೆ. ಇದನ್ನ ಕಂಡ ಗ್ರಾಮಸ್ಥರು ಹಾಗೂ ಕುಟುಂಬದವರು ಕ್ಷಣಕಾಲ ಬೆಚ್ಚಿಬಿದ್ದಿದ್ದಾರೆ.
Advertisement
ನಂತರ ಕುಟುಂಬಸ್ಥರು ಗುಜ್ಜರ್ ಅವರನ್ನು ಮಾತನಾಡಿಸಿದಾಗ, ನನಗೆ ಎದೆನೋವು ಕಾಣಿಸಿಕೊಂಡಿತ್ತು. ಹೀಗಾಗಿ ನಿದ್ದೆ ಮಾಡುತ್ತಿದ್ದೆ ಎಂದು ಹೇಳಿದ್ದಾರೆ. ಗುಜ್ಜರ್ ಪವಾಡ ಸದೃಶ ಮತ್ತೊಮ್ಮೆ ಬದುಕಿದ್ದಾರೆಂದು ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಜಿಲ್ಲೆಯಿಡೀ ಮೃತ ಗುಜ್ಜರ್ ದಿಢೀರನೇ ಹೇಗೆ ಎದ್ದು ಕುಳಿತರು ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews