ಹೆಲ್ಸಿಂಕಿ: ಫಿನ್‍ಲ್ಯಾಂಡ್‍ನಲ್ಲಿ ನಡೆಯುತ್ತಿರುವ ವಿಶ್ವ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ 2022ರಲ್ಲಿ ಭಾಗವಹಿಸಿ 100 ಮೀಟರ್ ಓಟದ ಸ್ಫರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ 94ರ ಹರೆಯದ ಭಗವಾನಿ ದೇವಿ ಚಿನ್ನದ ಪದಕ ಗೆದ್ದು ದಾಖಲೆ ಬರೆದಿದ್ದಾರೆ.
Advertisement
ಭಗವಾನಿ ದೇವಿ 94ರ ಹರೆಯದಲ್ಲಿ 100 ಮೀಟರ್ ಓಟವನ್ನು 24.74 ಸೆಕೆಂಡ್‍ಗಳಲ್ಲಿ ಗುರಿ ಮುಟ್ಟಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದಲ್ಲದೆ ಶಾಟ್‍ಪುಟ್‍ನಲ್ಲಿ ಕಂಚಿನ ಪದಕ ಪಡೆದ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: ವೈರಲ್ ಆಗುತ್ತಿದೆ SKY ಸಿಡಿಸಿದ ಬ್ಯಾಕ್‍ವರ್ಡ್ ಪಾಯಿಂಟ್ ಸಾಲಿಡ್ ಸಿಕ್ಸ್
Advertisement
ಈ ಹಿಂದೆ ಭಗವಾನಿ ದೇವಿ ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ 3 ಚಿನ್ನದ ಪದಕ ಪಡೆದು ಮಿಂಚಿದ್ದರು. ಬಳಿಕ 94ರ ಹರೆಯದಲ್ಲಿ ವಿಶ್ವ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದರು. ಇದೀಗ ಫಿನ್‍ಲ್ಯಾಂಡ್‍ನಲ್ಲಿ ಕೂಡ ಭಗವಾನಿ ದೇವಿ ಚಿನ್ನದ ಬೇಟೆ ಮುಂದುವರಿಸಿದ್ದಾರೆ.
Advertisement
India's 94-year-old #BhagwaniDevi Ji has yet again proved that age is no bar!
She won a GOLD medal at the #WorldMastersAthleticsChampionships in Tampere in the 100m sprint event with a timing of 24.74 seconds.????She also bagged a BRONZE in Shot put.
Truly commendable effort!???? pic.twitter.com/Qa1tI4a8zS
— Dept of Sports MYAS (@IndiaSports) July 11, 2022
Advertisement
ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ 100 ಮೀಟರ್ ಓಟ, ಜಾವಲಿನ್ ಥ್ರೋ, ಶಾಟ್‍ಪುಟ್‍ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಈ ಸಾಧನೆ ಇದೀಗ ಅದೆಷ್ಟೋ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದ್ದು ಭಗವಾನಿ ದೇವಿ ಸಾಧನೆಗೆ ಕೇಂದ್ರ ಕ್ರೀಡಾ ಸಚಿವಾಲಯ ಶುಭಕೋರಿದೆ. ಇದನ್ನೂ ಓದಿ: ವಿರಾಟ್ ಕೊಹ್ಲಿಯ ಜಾಹೀರಾತು ನಿಲ್ಲಿಸಿದ ವಿವೋ
Live Tv
[brid partner=56869869 player=32851 video=960834 autoplay=true]