ಬೆಂಗಳೂರು: ಮುಂಗಾರು ಪೂರ್ವ ಮಳೆಯ ಅಬ್ಬರ ಜೋರಾಗಿದೆ. ಸೋಮವಾರ ರಾತ್ರಿ ಸುರಿದ ಭಾರೀ ಮಳೆಯಿಂದ ರಾಜಧಾನಿ ಬೆಂಗಳೂರಿನ ರಸ್ತೆಗಳು ಸಂಪೂರ್ಣ ಹೊಳೆಗಳಂತಾಗಿದ್ದವು. ನಗರದಲ್ಲಿ ಸೋಮವಾರ ಗರಿಷ್ಠ 94 ಮಿ.ಮೀ ಮಳೆಯಾಗಿದೆ.
Advertisement
ರಾತ್ರಿ ಬಿರುಗಾಳಿ ಸಹಿತ ಸುರಿದ ಮಳೆಗೆ ನಗರದ ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಅದ್ರಲ್ಲೂ ಪ್ರಮುಖ, ಪ್ರತಿಷ್ಠಿತ ಏರಿಯಾಗಳಾದ ಮಲ್ಲೇಶ್ವರಂ, ಸದಾಶಿವನಗರ, ಗುಟ್ಟಹಳ್ಳಿ, ಯಶವಂತಪುರ ಮತ್ತು ನಾಗವಾರ ಜಲಾವೃತವಾಗಿದ್ದವು. ಮರಗಳು ಬುಡಮೇಲಾಗಿ ಬಿದ್ದಿದ್ದು, ಟ್ರಾಫಿಕ್ ಜಾಮ್ ಆಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
Advertisement
Advertisement
ಮಳೆ ಹಾಗೂ ಗಾಳಿಯಿಂದಾಗಿ ಬೆಂಗಳೂರಿನ ಬಹುತೇಕ ಪ್ರದೇಶಗಳು ಕಗ್ಗತ್ತಲೆಯಲ್ಲಿದ್ದವು. ಈ ಮಧ್ಯೆ ಮೂರು ದಿನಗಳ ಹಿಂದೆ ರಾಜಕಾಲುವೆಯಲ್ಲಿ ಕೊಚ್ಚಿಹೋಗಿರುವ ಶಾಂತಕುಮಾರ್ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ. ಇಂದು 9 ಗಂಟೆಗೆ ಮತ್ತೆ ಕಾರ್ಯಾಚರಣೆ ಶುರುವಾಗಲಿದೆ.
Advertisement
ಎಲ್ಲೆಲ್ಲಿ ಎಷ್ಟೆಷ್ಟು ಮಳೆಯಾಗಿದೆ?
* ಹೊರಮಾವು, ಮಹದೇವಪುರ ಸುತ್ತಮುತ್ತ – 50 ಮಿಮೀ.
* ದೊಡ್ಡಬನಹಳ್ಳಿ ಸುತ್ತಮುತ್ತ – 54 ಮಿಮೀ.
* ಆವಲಹಳ್ಳಿ ಸುತ್ತಮುತ್ತ – 56 ಮಿಮೀ.
* ಬೊಮ್ಮನಹಳ್ಳಿ ಸುತ್ತಮುತ್ತ – 64 ಮಿಮೀ.
* ಸಿಂಗಸಂದ್ರ-64 ಮಿಮೀ.
* ಹಂಪಿನಗರ ಸುತ್ತಮುತ್ತ – 64 ಮಿಮೀ.
* ಹಾಲನಾಯಕನಹಳ್ಳಿ ಸುತ್ತಮುತ್ತ – 66 ಮಿಮೀ.
* ನಾಗಪುರ ಸುತ್ತಮುತ್ತ – 78 ಮಿಮೀ.
* ಮನೋರಯ್ಯನ ಪಾಳ್ಯ ಸುತ್ತಮುತ್ತ – 94 ಮಿಮೀ.