
ನವದೆಹಲಿ: 73ನೇ ಗಣರಾಜೋತ್ಸವ ಹಿನ್ನಲೆ ಇಂದು ಪೊಲೀಸ್ ಪದಕಗಳನ್ನು ಕೇಂದ್ರ ಗೃಹ ಇಲಾಖೆ ಘೋಷಿಸಿದೆ. ದೇಶದ 939 ಪೊಲೀಸ್ ಸಿಬ್ಬಂದಿ ಈ ಬಾರಿ ವಿಶೇಷ ಗೌರವಕ್ಕೆ ಆಯ್ಕೆಯಾಗಿದ್ದಾರೆ.
939 ಪೊಲೀಸ್ ಸಿಬ್ಬಂದಿ ಪೈಕಿ 189 ಅಧಿಕಾರಿಗಳಿಗೆ ಶೌರ್ಯಕ್ಕಾಗಿ ಪದಕ ನೀಡಲಾಗುತ್ತಿದ್ದು, 88 ಅಧಿಕಾರಿಗಳಿಗೆ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕ ಘೋಷಿಸಲಾಗಿದೆ. ಗೌರವಾನ್ವಿತ ಸೇವೆಗಾಗಿ 662 ಮಂದಿಗೆ ಪೊಲೀಸ್ ಪದಕ ಘೋಷಿಸಿದೆ. ಇದನ್ನೂ ಓದಿ: ನನ್ನ ಜೊತೆ ಬಿಜೆಪಿ, ಜೆಡಿಎಸ್‍ನ ಕೆಲ ಶಾಸಕರು ಸಂಪರ್ಕದಲ್ಲಿದ್ದಾರೆ: ಸಿದ್ದರಾಮಯ್ಯ
Government of India has conferred 18 medals to ITBP personnel on Republic Day 2022-3 Police Medal for Gallantry, 3 President’s Police Medal for Distinguished Service and 12 Police Medal For Meritorious Service pic.twitter.com/awX3RQ4nh1
— ANI (@ANI) January 25, 2022
ಪಟ್ಟಿಯಲ್ಲಿ ರಾಜ್ಯದ ಗುಪ್ತಚರ ಇಲಾಖೆಯ ಎಡಿಜಿಪಿ ಬನ್ನಿಕಲ್ ದಯಾನಂದ್ ಮತ್ತು ಕ್ರೈಂ ಆ್ಯಂಡ್ ಟೆಕ್ನಿಕಲ್ ಸರ್ವಿಸ್ ವಿಭಾಗದ ಎಡಿಜಿಪಿ ಹಿತೇಂದ್ರ ಅವರಿಗೆ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕ ನೀಡಿ ಗೌರವಿಸಲಾಗಿದೆ. ಇದನ್ನೂ ಓದಿ: 2-3 ವಾರಗಳಲ್ಲಿ 3ನೇ ಅಲೆ ಕಡಿಮೆಯಾಗುತ್ತೆ: ಸುಧಾಕರ್
ಇನ್ನು ಗೌರವಾನ್ವಿತ ಸೇವೆಗಾಗಿ ರಾಜ್ಯದ 19 ಅಧಿಕಾರಿಗಳಿಗೆ ಪೊಲೀಸ್ ಪದಕ ನೀಡಲಾಗಿದ್ದು ರಾಜ್ಯದ ವಿವಿಧ ಜಿಲ್ಲೆಗಳಿಂದ ಇವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಗೆ ಆಯ್ಕೆಯಾದ ಎಲ್ಲ ಅಧಿಕಾರಿಗಳು ರಾಜ್ಯಪಾಲರಿಂದ ಗೌರವ ಪ್ರಶಸ್ತಿ ಸ್ವೀಕರಿಸಲಿದ್ದಾರೆ.