ಶಿವಮೊಗ್ಗ: ಕೊರೊನಾ ಸೋಂಕಿಗೆ ಈಡಿ ದೇಶವೇ ತಲ್ಲಣಗೊಂಡಿದೆ. ಪ್ರತಿನಿತ್ಯ ಎಲ್ಲೆಡೆ ಸಾವು ನೋವುಗಳದ್ದೆ ಸುದ್ದಿ ಸದ್ದು ಮಾಡುತ್ತಿದೆ. ಇದರಿಂದಾಗಿ ಜನರು ಸಹ ಭಯಭೀತರಾಗಿದ್ದಾರೆ. ಆಕ್ಸಿಜನ್ ಸಿಗದೆ ನರಳಾಡಿ ಸಾವನ್ನಪ್ಪುತ್ತಿದ್ದಾರೆ. ಇಂತಹ ಪರಿಸ್ಥಿತಿ ನಡುವೆ ಒಂದೇ ಕುಟುಂಬದ 11 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿ ಜಯಿಸಿ ಬಂದಿದ್ದಾರೆ.
Advertisement
ಜಿಲ್ಲೆಯ ಶಿಕಾರಿಪುರ ತಾಲೂಕಿನ ಮಾರಗೊಂಡನಕೊಪ್ಪ ಗ್ರಾಮದ ಒಂದೇ ಕುಟುಂಬದ 92 ವರ್ಷದ ವೃದ್ದೆಯಿಂದ ಹಿಡಿದು 9 ವರ್ಷದ ಬಾಲಕಿ ಸೇರಿದಂತೆ 11 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಸೋಂಕಿಗೆ ಒಳಗಾದ ಎಲ್ಲರೂ ಚಿಕಿತ್ಸೆಗಾಗಿ ಶಿಕಾರಿಪುರ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಎಲ್ಲರೂ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
Advertisement
Advertisement
ಇದೇ ತಿಂಗಳ 4ರಂದು ಬೆಂಗಳೂರಿನಲ್ಲಿ ನಡೆದ ಸಂಬಂಧಿಕರ ಮನೆಯ ಮುಂಜಿ ಕಾರ್ಯಕ್ರಮವೊಂದರಲ್ಲಿ ಕುಟುಂಬದ 11 ಮಂದಿ ಸದಸ್ಯರಲ್ಲಿ ಕೆಲವರು ಭಾಗವಹಿಸಿದ್ದರು. ಅದೇ ದಿನ ದಾವಣಗೆರೆಯಲ್ಲಿ ನಡೆದ ಸಂಬಂಧಿಕರ ಸಮಾರಂಭದಲ್ಲಿ ಕೆಲವು ಮಂದಿ ಭಾಗವಹಿಸಿದ್ದರು. ಎಲ್ಲರೂ ಸಮಾರಂಭ ಮುಗಿಸಿಕೊಂಡು ಮನೆಗೆ ವಾಪಸ್ಸಾಗಿದ್ದರು. ಮನೆಗೆ ವಾಪಸ್ ಆದ ಬಳಿಕ ಕುಟುಂಬದಲ್ಲಿ ಮೊದಲು ಒಬ್ಬರಿಗೆ ಜ್ವರ ಕಾಣಿಸಿಕೊಂಡಿತ್ತು. ನಂತರ ಕೋವಿಡ್ ತಪಾಸಣೆಗೆ ಒಳಗಾದ ಬಳಿಕ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು. ನಂತರ ಮನೆಯವರಿಗೆ ಎಲ್ಲರಿಗೂ ಕೊರೊನಾ ಸೋಂಕು ಪತ್ತೆಯಾಗಿತ್ತು.
Advertisement
ಸೋಂಕು ಪತ್ತೆಯಾದ ಒಂದೇ ಕುಟುಂಬದ 11 ಮಂದಿಯನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಶಿಕಾರಿಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿತ್ತು. ಇದೀಗ ಎಲ್ಲ 11 ಮಂದಿ ಕುಟುಂಬದ ಸದಸ್ಯರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಎಲ್ಲರೂ ಹೋಮ್ ಐಸಲೋಷನ್ ಗೆ ಒಳಗಾಗಿದ್ದಾರೆ. ಇದೀಗ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಕುಟುಂಬ ಕೋವಿಡ್ ಗೆ ಯಾರು ಭಯಪಡಬೇಡಿ. ಆದರೆ ಕೋವಿಡ್ ನಿಯಂತ್ರಿಸಲು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿಕೊಂಡಿದೆ.