ಬೆಂಗಳೂರು: ರಾಜ್ಯದಲ್ಲಿಂದು 911 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 11 ಜನ ಸಾವನ್ನಪ್ಪಿದ್ದಾರೆ. ಇಂದು 1,214 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
Advertisement
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 9,16,256ಕ್ಕೆ ಏರಿಕೆಯಾಗಿದ್ದು, 12,062 ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ರಾಜ್ಯದಲ್ಲಿ 13,080 ಸಕ್ರಿಯ ಪ್ರಕರಣಗಳಿದ್ದು, 209 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.0.96 ಮತ್ತು ಮರಣ ಪ್ರಮಾಣ ಶೇ.1.20ರಷ್ಟಿದೆ. ಇಂದು 94,795 ಸ್ಯಾಂಪಲ್ ಗಳನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.
Advertisement
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 4, ಬಳ್ಳಾರಿ 11, ಬೆಳಗಾವಿ 18, ಬೆಂಗಳೂರು ಗ್ರಾಮಾಂತರ 20, ಬೆಂಗಳೂರು ನಗರ 542, ಬೀದರ್ 7, ಚಾಮರಾಜನಗರ 11, ಚಿಕ್ಕಬಳ್ಳಾಪುರ 32, ಚಿಕ್ಕಮಗಳೂರು 9, ಚಿತ್ರದುರ್ಗ 21, ದಕ್ಷಿಣ ಕನ್ನಡ 18, ದಾವಣಗೆರೆ 15, ಧಾರವಾಡ 17, ಗದಗ 4, ಹಾಸನ 34, ಹಾವೇರಿ 3, ಕಲಬುರಗಿ 12, ಕೊಡಗು 7, ಕೋಲಾರ 9, ಕೊಪ್ಪಳ 3, ಮಂಡ್ಯ 19, ಮೈಸೂರು 40, ರಾಯಚೂರು 5, ರಾಮನಗರ 0, ಶಿವಮೊಗ್ಗ 12, ತುಮಕೂರು 20, ಉಡುಪಿ 1, ಉತ್ತರ ಕನ್ನಡ 11, ವಿಜಯಪುರ 5 ಹಾಗೂ ಯಾದಗಿರಿಯಲ್ಲಿ 1 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.