ಮುಂಬೈ: 90ರ ವಯಸ್ಸಿನ ಅಜ್ಜಿ ತಾನು ಮಾಡಿರುವ ಒಂದು ಕೆಲಸದಿಂದ ಎಲ್ಲರ ಮನೆಮಾತಾಗಿದ್ದಾರೆ. ತನ್ನ ವೃದ್ಧಾಪ್ಯದ ವಯಸ್ಸಿನಲ್ಲಿಯೂ ಕಾರು ಓಡಿಸುವ ಮೂಲಕವಾಗಿ ಸುದ್ದಿಯಲ್ಲಿದ್ದಾರೆ.
ಗಂಗಾಬಾಯ್ ಮಿರ್ಕುಟೆ (90)ರ ಅಜ್ಜಿ ಕಾರು ಚಾಯಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನೆಟ್ಟಿಗರು ಅವರ ಧೈರ್ಯ ಮತ್ತು ಈ ವಯಸ್ಸಿನಲ್ಲಿ ಅವರಿಗೆ ಇರುವ ಉತ್ಸಾಹವನ್ನು ಕಂಡು ಮೆಚ್ಚುಗೆ ಮತ್ತು ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
Advertisement
Advertisement
ಇಳಿಯವಸ್ಸಿನಲ್ಲಿ ಅವರಿಗೆ ಚಾಲನೆ ಪರವಾನಿಗೆ ದೊರೆಯುವುದು ಅನುಮಾನವಾಗಿದೆ. ಹಾಗಾಗಿ ಅವರ ಕುಟುಂಬ ಅವರಿಗೆ ಕಲಿಕಾ ಚಾಲನ ಪರವಾನಿಗೆ ಕೊಡಿಸುವ ನಿಟ್ಟಿನಲ್ಲಿನಲ್ಲಿದೆ. ಕುಟುಂಬಸ್ಥರು ಗಂಗಾಬಾಯ್ ಅಲ್ಲಿಯವರಿಗೆ ಪ್ರೋತ್ಸಾಹ ಕೆಲಸವನ್ನು ಮಾಡುತ್ತಿದ್ದಾರೆ.
Advertisement
ಜೀವನದಲ್ಲಿ ಛಲ, ದೃಢವಿಶ್ವಾಸ ಮುಖ್ಯವಾಗಿದೆ ವಯಸ್ಸು ಅಲ್ಲ. ನನಗೆ ಕಾರು ಚಾಲನೆ ಕಲಿಯಬೇಕೆಂದಿತ್ತು. ಕೆಲ ವರ್ಷಗಳ ಹಿಂದೆ ನನ್ನ ಮೊಮ್ಮಗ ನನಗೆ ಕಾರು ಚಾಲನೆ ಕಲಿಸಿದನು. ಈಗಲೂ ವಿಶ್ವಾಸವಿದೆ ಕಾರು ಚಲಾಯಿಸಬಲ್ಲೆ. ನಾನು 1931 ರಲ್ಲಿ ಜನಿಸಿದ್ದೇನೆ ಮುಂದಿನ ಜೂನ್ಗೆ 90 ವರ್ಷ ಪೂರ್ಣಗೊಳ್ಳುತ್ತದೆ ಎಂದು ಗಂಗಾಬಾಯ್ ಹೇಳಿದ್ದಾರೆ.
Advertisement
View this post on Instagram
ಗಂಗಾಬಾಯ್ ಮೊಮ್ಮಗ ವಿಕಾಸ್ ಬೋಯೊರ್ ಇತ್ತೀಚೆಗೆ ಹೊಸ ಕಾರನ್ನು ಖರೀದಿಸಿದ್ದರು. ಆಗ ಆಶೀರ್ವಾದ ಪಡೆಯಲು ಹೋಗಿದ್ದಾಗ ಅಜ್ಜಿ ನನ್ನ ಕಾರನ್ನು ಸ್ಪಲ್ಪ ದೂರದವರೆಗೆ ಚಲಾಯಿಸಿದ್ದರು. ಆ ವೀಡಿಯೋವನ್ನು ನಾನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೆ. ಎಲ್ಲರೂ ನೋಡಿ ಅಜ್ಜಿಯ ಧೈರ್ಯವನ್ನು ಮೆಚ್ಚಿದ್ದಾರೆ ಎಂದು ಹೇಳಿದ್ದಾರೆ.