ಮಂಡ್ಯ: ಜೀವಧಾರೆ ಕೆಆರ್‌ಎಸ್ ಜಲಾಶಯ 90 ವರ್ಷಗಳ ಇತಿಹಾಸದಲ್ಲೇ ಅಪರೂಪದ ಸಾಧನೆ ಮಾಡಿದೆ. ಸತತವಾಗಿ 53 ದಿನಗಳ ಕಾಲ ಸಂಪೂರ್ಣ ತುಂಬಿ ಹರಿಯುವ ಮೂಲಕ ಕೆಆರ್‌ಎಸ್ ದಾಖಲೆ ನಿರ್ಮಿಸಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆಆರ್‌ಎಸ್ ಜಲಾಶಯ ತುಂಬಿ ಹರಿಯುತ್ತಿದೆ. ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಸುರಿದ ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಕಾವೇರಿ ಉಕ್ಕಿ ಹರಿದಿದ್ದಾಳೆ. ಆದರೆ ಸತತವಾಗಿ 53 ದಿನಗಳ ಕಾಲ ಸಂಪೂರ್ಣವಾಗಿ ತುಂಬಿ ಹರಿದ ಇತಿಹಾಸ ಮರುಕಳಿಸಿರಲಿಲ್ಲ. 90 ವರ್ಷಗಳ ದಾಖಲೆಯನ್ನು ಕೆಆರ್‌ಎಸ್ ಈ ವರ್ಷ ಸರಿಗಟ್ಟಿದೆ.
ಅಕ್ಟೋಬರ್ 29ರಿಂದ ಡಿಸೆಂಬರ್ 23ರ ತನಕ ಕೆಆರ್‌ಎಸ್ ಜಲಾಶಯ ಸಂಪೂರ್ಣ ಭರ್ತಿಯಾಗಿತ್ತು. ಒಟ್ಟು 53 ದಿನಗಳ ವರೆಗೆ 124.80 ಅಡಿ ಎಂದರೆ ಗರಿಷ್ಠ ಮಟ್ಟ ಇತ್ತು. ಈ ದಾಖಲೆಯಿಂದ ಬೇಸಿಗೆ ಸಮಯದಲ್ಲಿ ಜಿಲ್ಲೆಯ ಹಾಗೂ ಕಾವೇರಿಯನ್ನು ಅವಲಂಬಿಸಿರುವ ಜನರು ಚಿಂತಿಸುವ ಅಗತ್ಯ ಇಲ್ಲ. ಈ ಕಾರಣ ಹಳೇ ಮೈಸೂರು ಭಾಗದ ರೈತರಲ್ಲಿ ಸಂತಸ ಮನೆ ಮಾಡಿದೆ. ಇದನ್ನೂ ಓದಿ: ಕ್ರಿಸ್‌ಮಸ್ ವಿಶೇಷ – ಸಮುದ್ರ ತೀರದ ಮರಳಿನಲ್ಲಿ 5,400 ಗುಲಾಬಿ ಹೂಗಳಿಂದ ಅರಳಿದ ಸಂತಾ ಕ್ಲಾಸ್ ಕಲಾಕೃತಿ
ಕೆಆರ್‌ಎಸ್ ಜಲಾಶಯದ ಗರಿಷ್ಠ ನೀರಿನ ಮಟ್ಟ 124.80 ಅಡಿ. ಇಂದು ಜಲಾಶಯದಲ್ಲಿ 124.28 ಅಡಿ ಇದೆ. 2,299 ಕ್ಯೂಸೆಕ್ ನೀರು ಇಂದಿನ ಜಲಾಶಯದ ಒಳ ಹರಿವಿನ ಪ್ರಮಾಣವಾಗಿದ್ದು, 4,467 ಕ್ಯೂಸೆಕ್ ಹೊರ ಹರಿವಿನ ಪ್ರಮಾಣವಾಗಿದೆ. ಹಾಗೆಯೇ ಜಲಾಶಯದ ಗರಿಷ್ಠ ನೀರಿನ ಸಂಗ್ರಹ 49.452 ಟಿಎಂಸಿ ಹಾಗೂ ಇಂದಿನ ಸಂಗ್ರಹ 48.728 ಟಿಎಂಸಿ ಇದೆ. ಇದನ್ನೂ ಓದಿ: ಭೂಕಂಪನ ಪೀಡಿತ ಪ್ರದೇಶಗಳಿಗೆ ಹಿರಿಯ ವಿಜ್ಞಾನಿಗಳ ಭೇಟಿ ಅಧ್ಯಯನ
ಕೆಆರ್‌ಎಸ್‌ನ ಇಂದಿನ ನೀರಿನ ಮಟ್ಟ
ಜಲಾಶಯದ ನೀರಿನ ಗರಿಷ್ಠ ಮಟ್ಟ 124.80 ಅಡಿಗಳು.
ಜಲಾಶಯದ ಇಂದಿನ ನೀರಿನ ಮಟ್ಟ 124.28 ಅಡಿಗಳು.
ಇಂದಿನ ಒಳಹರಿವಿನ ಪ್ರಮಾಣ 2,299 ಕ್ಯೂಸೆಕ್.
ಇಂದಿನ ಹೊರ ಹರಿವಿನ ಪ್ರಮಾಣ 4,467 ಕ್ಯೂಸೆಕ್.
ಜಲಾಶದ ಗರಿಷ್ಠ ನೀರಿನ ಸಂಗ್ರಹ – 49.452 ಟಿಎಂಸಿ.
ಇಂದಿನ ಸಂಗ್ರಹ- 48.726 ಟಿಎಂಸಿ.