ಇಸ್ಲಾಮಾಬಾದ್: ಪುಣೆಯಲ್ಲಿ ವಾಸ ಮಾಡುತ್ತಿರುವ 90 ವರ್ಷದ ರೀನಾ ವರ್ಮಾ ತಾನು ಹುಟ್ಟಿ ಬೆಳೆದ ಪಾಕಿಸ್ತಾನದ ಮನೆಯ ದರ್ಶನ ಮಾಡಿದ್ದಾರೆ. ರಾವಲ್ಪಿಂಡಿಯ ಜನತೆ ರೀನಾ ವರ್ಮಾರನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಗುಲಾಬಿ ಪಕಳೆಗಳ ಮಳೆ ಸುರಿಸಿ, ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ರೀನಾ ವರ್ಮಾ ತಾವು ಹುಟ್ಟಿ ಬೆಳೆದ ಮನೆಯನ್ನು ನೋಡಿ, ಆನಂದ ಭಾಷ್ಪ ಸುರಿಸಿದ್ದಾರೆ. ಈ ಮೂಲಕ ತಮ್ಮ 75 ವರ್ಷದ ಕನಸನ್ನು ನನಸು ಮಾಡಿಕೊಂಡಿದ್ದಾರೆ.
Advertisement
ಭಾರತ-ಪಾಕ್ ವಿಭಜನೆ ಸಂದರ್ಭದಲ್ಲಿ ರೀನಾ ವರ್ಮಾ ಕುಟುಂಬ ರಾವಲ್ಪಿಂಡಿಯಿಂದ ಭಾರತಕ್ಕೆ ಬಂದು ನೆಲೆಸಿತ್ತು. 1960-70ರ ದಶಕದಲ್ಲಿ ರೀನಾ ವರ್ಮಾ ಬೆಂಗಳೂರಿನ ಕಾವೇರಿ ಎಂಪೋರಿಯಂನಲ್ಲಿ ಕೆಲಸ ಮಾಡಿದ್ದರು. 2021ರಲ್ಲಿ ರೀನಾ ಮಾತನಾಡುತ್ತಾ, ತನ್ನ ಬಾಲ್ಯವನ್ನು ನೆನಪು ಮಾಡಿಕೊಂಡಿದ್ದರು. ರಾವಲ್ಪಿಂಡಿಯ ಮನೆ ಬಗ್ಗೆ ಪ್ರಸ್ತಾಪಿಸಿ, ತಾನು ಸಾಯೋದ್ರೊಳಗೆ ಒಮ್ಮೆ ಅದನ್ನು ನೋಡಬೇಕು ಎಂಬ ಬಯಕೆ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: 1,107 ಮಂದಿ ಡಿಸ್ಚಾರ್ಜ್ – 1,562 ಕೊರೊನಾ ಪತ್ತೆ
Advertisement
Advertisement
ಇದನ್ನು ಗಮನಿಸಿದ ರಾವಲ್ಪಿಂಡಿಯ ಎನ್‌ಜಿಒ ರೀನಾ ಮನೆಯನ್ನು ಹುಡುಕಿ ತೋರಿಸಿತ್ತು. ಪಾಕಿಸ್ತಾನಕ್ಕೆ ಹೋಗೋಣ ಎಂದರೆ, ರೀನಾಗೆ ವೀಸಾ ಸಿಕ್ಕಿರಲಿಲ್ಲ. ಕೊನೆಗೆ ರೀನಾ ಕತೆ ಪಾಕ್ ಸರ್ಕಾರದ ಮಂತ್ರಿಯೊಬ್ಬರ ಕಿವಿಗೂ ಬಿತ್ತು. ಅಂತಿಮವಾಗಿ ಜುಲೈ 16ಕ್ಕೆ ಹೊರಟು, ಬುಧವಾರ ರಾವಲ್ಪಿಂಡಿ ತಲುಪಿ ತಮ್ಮ ಮನೆಗೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ: ಭಾರತದಲ್ಲೇ ಮೊದಲು – ನಮ್ಮ ಮೆಟ್ರೋದಲ್ಲಿ 5ಜಿ ನೆಟ್‌ವರ್ಕ್ ಪರೀಕ್ಷೆ
Advertisement
ರೀನಾ ವರ್ಮಾರ ಮನೆ ಹಿಂದೆ ಇದ್ದಂತೆಯೇ ಇದೆ. ಸುಣ್ಣ ಬಣ್ಣ ಹೊಡೆಸಲಾಗಿದೆ ಅಷ್ಟೇ ಎಂದು ಅವರು ನುಡಿದಿದ್ದಾರೆ. ಸುತ್ತಮುತ್ತಲ ಜನ ಪ್ರೀತಿಯಿಂದ ಅವರನ್ನು ಆದರಿಸಿಕೊಂಡಿದ್ದಾರೆ. ಸೆಲ್ಫಿ ತೆಗೆದು, ಖುಷಿ ಹಂಚಿಕೊಂಡಿದ್ದಾರೆ.