ಹಲವು ಭಾಷೆಗಳಲ್ಲಿ ಮೂಡಿ ಬರುತ್ತಿರುವ ಕಣ್ಣಪ್ಪ ಸಿನಿಮಾದ ಶೂಟಿಂಗ್ ನ್ಯೂಜಿಲ್ಯಾಂಡ್ (New Zealand) ನಲ್ಲೇ ಬರೋಬ್ಬರಿ 90 ದಿನಗಳ ಕಾಲ ನಡೆದಿದೆ. ಈ ಮಾಹಿತಿಯನ್ನು ಚಿತ್ರದ ನಿರ್ಮಾಪಕ ಹಾಗೂ ನಟ ಮಂಚು ಮೋಹನ್ ಬಾಬು ಅವರೇ ತಿಳಿಸಿದ್ದಾರೆ. ಅಷ್ಟೊಂದು ದಿನಗಳ ಕಾಲ ನಡೆದ ಶೂಟಿಂಗ್ ಅನುಭವವನ್ನೂ ಅವರು ಹಂಚಿಕೊಂಡಿದ್ದಾರೆ.
Advertisement
ನಾನಾ ಕಾರಣಗಳಿಂದಾಗಿ ಈ ಸಿನಿಮಾ ನಿರೀಕ್ಷೆ ಹೆಚ್ಚಿಸಿದೆ. ಮೋಹನ್ ಬಾಬು, ಮೋಹನ್ ಲಾಲ್, ಶಿವರಾಜಕುಮಾರ್, ಪ್ರಭಾಸ್ ಮುಂತಾದ ಈ ದೇಶದ ಪ್ರತಿಭಾವಂತ ಕಲಾವಿದರ ನಡುವೆ ‘ಕಣ್ಣಪ್ಪ’ (Kannappa) ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವವರು ಟಾಲಿವುಡ್ ನಟ ವಿಷ್ಣು ಮಂಚು (Vishnu Manchu). ಅವರ ಹುಟ್ಟು ಹಬ್ಬದಂದು ಚಿತ್ರತಂಡವು ಅವರ ಮೊದಲ ಪೋಸ್ಟರ್ (First Look) ಬಿಡುಗಡೆ ಮಾಡಿತ್ತು. ಕ್ಯೂರಿಯಾಸಿಟಿಗೂ ಕಾರಣವಾಗಿತ್ತು.
Advertisement
Advertisement
ಮುಕೇಶ್ ಕುಮಾರ್ ಸಿಂಗ್ (Mukesh Kumar Singh) ನಿರ್ದೇಶನದ ‘ಕಣ್ಣಪ್ಪ’ ಚಿತ್ರದ ಶೇ.80ರಷ್ಟು ಚಿತ್ರೀಕರಣ ನಡೆದಿದ್ದು, ಹಾಲಿವುಡ್ ಛಾಯಾಗ್ರಾಹಕ ಶೆಲ್ಡನ್ ಚಾವ್, ಈ ಸುಂದರ ಪರಿಸರವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
Advertisement
‘ಕಣ್ಣಪ್ಪ’ ಚಿತ್ರದ ಕುರಿತು ಮಾತನಾಡುವ ವಿಷ್ಣು ಮಂಚು, ‘ಈ ಚಿತ್ರವು ಬರೀ ಕನಸುಗಳಿಂದಲ್ಲ, ನಮ್ಮೆಲ್ಲರ ರಕ್ತ, ಬೆವರು ಮತ್ತು ಕಣ್ಣೀರಿನಿಂದ ನಿರ್ಮಾಣವಾಗುತ್ತಿದೆ. ಒಬ್ಬ ನಾಸ್ತಿಕ, ಶಿವನ ಅಪ್ರತಿಮ ಭಕ್ತನಾದ ಕಥೆ ಈ ಚಿತ್ರದಲ್ಲಿದೆ’ ಎನ್ನುತ್ತಾರೆ.
ದೃಶ್ಯ ವೈವಿಧ್ಯತೆ, ಆಧುನಿಕ ತಂತ್ರಜ್ಞಾನ ಮತ್ತು ಮೈನವಿರೇಳಿಸುವ ಆ್ಯಕ್ಷನ್ ದೃಶ್ಯಗಳು ಈ ಚಿತ್ರದ ಹೈಲೈಟ್ ಆಗಿದ್ದು, ಸದ್ಯ ನ್ಯೂಜಿಲ್ಯಾಂಡ್‍ನಲ್ಲಿ ಚಿತ್ರೀಕರಣ ಪ್ರಗತಿಯಲ್ಲಿದೆ. ವಿಷ್ಣು ಮಂಚು ತಮ್ಮ ನಟನಾ ಸಾಮರ್ಥ್ಯ ಮತ್ತು ಸಮರ್ಪಣಾ ಭಾವವನ್ನು ಈ ಚಿತ್ರಕ್ಕಾಗಿ ಧಾರೆ ಎರೆದಿದ್ದು, ಪ್ರೇಕ್ಷಕರ ಪಾಲಿಗೆ ಇದೊಂದು ಅದ್ಭುತ ಸಿನಿಮೀಯ ಅನುಭವವಾಗಲಿದೆ.