ಲಂಡನ್: ವ್ಯಕ್ತಿಯೋರ್ವ ಲಂಡನ್ ಬೀದಿಯಲ್ಲಿ ಕೇವಲ 90 ಪೈಸೆಗೆ ಹಳೆಯ ನಜ್ಜುಗುಜ್ಜಾಗಿದ್ದ ತೆಳು ಹಾಗೂ ಉದ್ದವಾದ ಚಮಚವನ್ನು ಖರೀದಿಸಿ ನಂತರ ಅದನ್ನು ಆನ್‍ಲೈನ್‍ನಲ್ಲಿ 2 ಲಕ್ಷ ರೂ.ಗೆ ಮಾರಾಟ ಮಾಡಿದ್ದಾನೆ.
Advertisement
ಹೌದು. ಲಾರೆನ್ಸ್ ‘ಐಕಿಯಾ ಸ್ಟೈಲ್ ಕಟ್ಲರಿ’ ರೀತಿಯ ಚಮಚವನ್ನು ಬೀದಿಯಲ್ಲಿ ಕಂಡು, ಅದು ಮಧ್ಯಕಾಲೀನ ಚಮಚ ಎಂದು ಭಾವಿಸಿ ನಂತರ 90 ಪೈಸೆ ಕೊಟ್ಟು ಚಮಚವನ್ನು ಖರೀದಿಸಿದ್ದಾರೆ. ನಂತರ ಲಾರೆನ್ಸ್ ಬೆಳ್ಳಿ ತಜ್ಞರ ಬಳಿ 5 ಇಂಚಿನ ಚಮಚವನ್ನು ತೆಗೆದುಕೊಂಡು ಹೋಗಿ ಪರೀಕ್ಷಿಸಿದಾಗ ಅದು 13ನೇ ಶತಮಾನದ ಅಂತ್ಯದ ಬೆಳ್ಳಿ ಚಮಚವೆಂದು ತಿಳಿದುಬಂದಿದ್ದು, ಅದರ ಬೆಲೆ ಸುಮಾರು 51,712ರೂ ಎಂಬ ವಿಚಾರ ಬಹಿರಂಗವಾಗಿದೆ. ಇದನ್ನೂ ಓದಿ:ಮೀನು, ಮಟನ್‍ಗಿಂತ ಜಾಸ್ತಿ ಗೋಮಾಂಸವನ್ನೇ ತಿನ್ನಿ: ಬಿಜೆಪಿ ಸಚಿವ ಶುಲ್ಲೈ
Advertisement
ಆ ಚಮಚವನ್ನು ಲಾರೆನ್ಸ್ ಆನ್‍ಲೈನ್‍ನಲ್ಲಿ ಹರಾಜಿಗೆ ಹಾಕಿದ್ದಾರೆ. ಈ ವೇಳೆ ಹಾರಜು ಪ್ರಕ್ರಿಯೆಯಲ್ಲಿ ಚಮಚ 1,97,000 ರೂಪಾಯಿಗೆ ಭಾರೀ ಮೊತ್ತದಲ್ಲಿ ಮಾರಾಟವಾಗಿದೆ. ತೆರಿಗೆ, ಹೆಚ್ಚುವರಿ ಶುಲ್ಕ ಸೇರಿದಂತೆ ಈ ಪುರಾತನ ಚಮಚದ ಒಟ್ಟು ಮೌಲ್ಯ 2 ಲಕ್ಷ ಗಡಿ ದಾಟಿದೆ. ಇದನ್ನೂ ಓದಿ:ಕಂದಹಾರ್ ಏರ್ ಪೋರ್ಟ್ ಮೇಲೆ ರಾಕೆಟ್ ದಾಳಿ – ವಿಮಾನ ಹಾರಾಟ ರದ್ದು
Advertisement