-ನದಿ, ಬೆಟ್ಟ ದಾಟಿ ಬಂದ ಶ್ವಾನ
ವಾಷಿಂಗ್ಟನ್: ನಾಯಿಯೊಂದು ಸುಮಾರು 90 ಕಿ.ಮೀ. ಕ್ರಮಿಸಿ ತನ್ನ ಹಳೆಯ ಮನೆಯನ್ನು ಸೇರಿರುವ ಘಟನೆ ಅಮೆರಿಕಾದ ಕಾನ್ಸಾಸ್ ನಲ್ಲಿ ನಡೆದಿದೆ.
ಹೆಣ್ಣು ಶ್ವಾನ ಕ್ಲಿಯೋ ತನ್ನ ಹಳೆಯ ಮನೆಯ ಸೇರಿದೆ. ಕ್ಲಿಯೋ ಒಡೆಯ ತಮ್ಮ ಶ್ವಾನ ಕಳೆದುಕೊಂಡಿದ್ದರ ಬಗ್ಗೆ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಮೈಕಲ್ ಮತ್ತು ಬ್ರಿಟನಿ ಬೆಳಗ್ಗೆ ಬಾಗಿಲು ತೆಗೆದಾಗ ಮನೆಯ ಮುಂದೆ ಸುಂದರ ನಾಯಿ ಕುಳಿತಿರೋದನ್ನು ನೋಡಿದ್ದಾರೆ. ಯಾರ ನಾಯಿ ಇಲ್ಲಿಗೆ ಏಕೆ ಬಂತು ಎಂದು ಕಾಡಿದೆ. ನಾಯಿ ಬಳಿ ಬಂದ ಮೈಕಲ್, ಅದರ ಕೊರಳಲ್ಲಿ ಇರೋ ಮೈಕ್ರೋ ಚಿಪ್ ಕಾರ್ಡ್ ನೋಡಿದ್ದಾರೆ. ಮೈಕ್ರೋ ಚಿಪ್ ಕಾರ್ಡ್ ಮೂಲಕ ಶ್ವಾನದ ಮಾಲೀಕರನ್ನು ಪತ್ತೆ ಹಚ್ಚಿ ವಿಷಯ ತಿಳಿಸಿದ್ದಾರೆ.
Advertisement
Advertisement
ನಾಯಿ ಈ ಮೊದಲು ತಮ್ಮ ಮನೆಯಲ್ಲಿ ವಾಸವಾಗಿದ್ದ ಕುಟುಂಬದ ಜೊತೆ ವಾಸವಾಗಿತ್ತು ಎಂಬ ವಿಷಯ ತಿಳಿದಿದೆ. ಇತ್ತ ನಾಯಿ ಮಾಲೀಕ ಡ್ರ್ಯೂ ಜೊಕಿಗೆ ನಿಮ್ಮ ಕ್ಲಿಯೋ ನಮ್ಮ ಮನೆಯಲ್ಲಿದೆ ಎಂದು ತಿಳಿಸಿದ್ದಾರೆ. ವಿಷಯ ತಿಳಿದ ಕೂಡಲೇ ಡ್ರ್ಯೂ ತಾಯಿ ಹಳೆಯ ಮನೆಗೆ ತೆರಳಿ ಕ್ಲಿಯೋನನ್ನ ಕರೆದುಕೊಂಡು ಬಂದಿದ್ದಾರೆ. ನಾಯಿ ತನ್ನ ಮಾರ್ಗದಲ್ಲಿ ನದಿ ಮತ್ತು ಬೆಟ್ಟವನ್ನು ದಾಟಿದೆ.
Advertisement