Connect with us

Crime

7 ವರ್ಷದ ಬಾಲಕಿ ಮೇಲೆ 9ರ ಬಾಲಕನಿಂದ ಅತ್ಯಾಚಾರ..!

Published

on

ರಾಂಚಿ: ಜಾರ್ಖಂಡ್‍ನ ಸಿಂಗ್ಬಾಮ್ ಜಿಲ್ಲೆಯಲ್ಲಿ 9 ವರ್ಷದ ಬಾಲಕನೊಬ್ಬ 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಸಿಂಗ್ಬಾಮ್ ಜಿಲ್ಲೆಯ ಬ್ಯಾಗ್ಬೆರಾ ಪ್ರದೇಶದಲ್ಲಿ ಡಿ. 12ರಂದು ಈ ಘಟನೆ ನಡೆದಿದ್ದು, ಅಪ್ರಾಪ್ತ ಬಾಲಕಿಯ ಅಜ್ಜ-ಅಜ್ಜಿ ಪೊಲೀಸರಿಗೆ ಕಳೆದ ಭಾನುವಾರದಂದು ದೂರು ನೀಡಿದ್ದಾರೆ. ಕೆಲವು ದಿನಗಳಿಂದ ಬಾಲಕಿಯ ವರ್ತನೆಯಲ್ಲಿ ವ್ಯತ್ಯಾಸ ಕಂಡು ಅಜ್ಜಿ ವಿಚಾರಿಸಿದಾಗ ಬಾಲಕಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಬಳಿಕ ಅಪ್ರಾಪ್ತ ಬಾಲಕನ ಮೇಲೆ ಬ್ಯಾಗ್ಬೆರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈಗಾಗಲೇ ಆರೋಪಿ ಬಾಲಕನನ್ನು ಜುವೆನೈಲ್ ನ್ಯಾಯಾಂಗ ಮಂಡಳಿ(Juvenile Justice Board) ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಪುಷ್ಪಾ ರಾಣಿ ಟಿರ್ಕಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸದ್ಯ ಅಪ್ರಾಪ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ವರದಿಗಾಗಿ ಕಾಯುತ್ತಿದ್ದೇವೆ. ಈಗಾಗಲೇ ತನಿಖೆ ನಡೆಯುತ್ತಿದ್ದು, ಒಂದು ವೇಳೆ ಆರೋಪ ಸಾಬೀತಾದರೆ ಬಾಲಕನಿಗೆ ಶಿಕ್ಷೆ ವಿಧಿಸಲಾಗುವುದು ಎಂದು ಪೊಲೀಸ್ ಹಿರಿಯ ಅಧಿಕಾರಿ ಆಲೋಕ್ ರಾಜನ್ ತಿಳಿಸಿದ್ದಾರೆ.

ಈ ಹಿಂದೆ ಬೋಪಾಲ್‍ನಲ್ಲಿ ಕೂಡ 8 ವರ್ಷದ ಬಾಲಕಿ ಮೇಲೆ ಆಕೆಯ ತರಗತಿಯಲ್ಲಿ ಓದುತ್ತಿದ್ದ ಬಾಲಕ ಹಾಗೂ ಇನ್ನೋರ್ವ ಸೇರಿ ಆಕೆಯ ಮನೆಯ ಬಳಿಯೇ ಅತ್ಯಾಚಾರ ಮಾಡಿದ್ದ ಪ್ರಕರಣ ದಾಖಲಾಗಿತ್ತು. ಅಲ್ಲದೆ ಇಬ್ಬರು ಆರೋಪಿ ಬಾಲಕರ ವಿರುದ್ಧ ಐಪಿಸಿ ಸೆಕ್ಷನ್ 376 ಹಾಗೂ ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *