ಅಂಕಾರಾ: 9 ವರ್ಷ ವಯಸ್ಸಿನ ಬಾಲಕನೊಬ್ಬ, ತಾನು ಕೂಡಿಟ್ಟಿದ್ದ ಹಣವನ್ನು ಟರ್ಕಿ ಭೂಕಂಪದಿಂದ (Turkey Earthquake) ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರ ನೆರವಿಗಾಗಿ ನೀಡಿ ಗಮನ ಸೆಳೆದಿದ್ದಾನೆ. ಕಳೆದ ವರ್ಷ ಈ ಬಾಲಕನು ಸಹ ಭೂಕಂಪಕ್ಕೆ ಸಿಲುಕಿ ಬದುಕುಳಿದಿದ್ದ.
ಕಳೆದ ವರ್ಷ ನವೆಂಬರ್‌ನಲ್ಲಿ ವಾಯುವ್ಯ ಡಜ್ ಪ್ರಾಂತ್ಯದಲ್ಲಿ 5.9 ತೀವ್ರತೆಯ ಭೂಕಂಪ ಸಂಭವಿಸಿದ್ದ ಸಂದರ್ಭದಲ್ಲಿ ಬಾಲಕನನ್ನು ರಕ್ಷಿಸಲಾಗಿತ್ತು. ಟರ್ಕಿಯ ವಿಪತ್ತು ಮತ್ತು ತುರ್ತು ನಿರ್ವಹಣಾ ಪ್ರೆಸಿಡೆನ್ಸಿ (ಎಎಫ್‌ಎಡಿ) ಸ್ಥಾಪಿಸಿದ್ದ ಟೆಂಟ್‌ನಲ್ಲಿ ಬಾಲಕನ ಆರೈಕೆ ಮಾಡಲಾಗಿತ್ತು. ಇದನ್ನೂ ಓದಿ: PublicTV Explainer: ಟರ್ಕಿಯಲ್ಲೇ ಹೆಚ್ಚು ಭೂಕಂಪ ಯಾಕೆ? – ಇಲ್ಲಿದೆ ವೈಜ್ಞಾನಿಕ ಕಾರಣ..
Advertisement
9-year-old Alparslan Efe Demir has donated his entire piggy bank savings to help people affected by #TurkeyEarthquake
“It is okay if I do not buy chocolate here. Children there should not be cold or hungry…,” he said in a letter.https://t.co/czScHoZsaz pic.twitter.com/a4h43a2IlK
— Anupam Bordoloi (@asomputra) February 7, 2023
Advertisement
ಭೂಕಂಪದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸಹಾಯ ಮಾಡುವ ಇಂಗಿತವನ್ನು ಬಾಲಕ ತನ್ನ ತಾಯಿಯೊಂದಿಗೆ ವ್ಯಕ್ತಪಡಿಸಿದ್ದ. ತಾನು ಕೂಡಿಟ್ಟಿದ್ದ ಹಣವನ್ನು ಸಂತ್ರಸ್ತರಿಗಾಗಿ ನೀಡಿದ್ದಾನೆ. “ಡಜ್‌ನಲ್ಲಿ ಭೂಕಂಪವಾದಾಗ ನಾನು ತುಂಬಾ ಹೆದರುತ್ತಿದ್ದೆ. ನಮ್ಮ ಅನೇಕ ನಗರಗಳಲ್ಲಿ ಉಂಟಾಗುವ ಭೂಕಂಪನದ ಬಗ್ಗೆ ಕೇಳಿದಾಗ ನನಗೆ ಅದೇ ಭಯವಿತ್ತು. ಅದಕ್ಕೆ ಹಿರಿಯರು ಕೊಡುವ ಪಾಕೆಟ್ ಮನಿಯನ್ನು ಅಲ್ಲಿನ ಮಕ್ಕಳಿಗೆ ಕಳುಹಿಸಲು ನಿರ್ಧರಿಸಿದೆ” ಎಂದು ಬಾಲಕ ತಿಳಿಸಿದ್ದಾನೆ.
Advertisement
Advertisement
“ನಾನು ಚಾಕೊಲೇಟ್ ಖರೀದಿಸದಿದ್ದರೂ ಪರವಾಗಿಲ್ಲ. ಅಲ್ಲಿನ ಮಕ್ಕಳು ಚಳಿ ಮತ್ತು ಹಸಿವಿನಿಂದ ಇರಬಾರದು. ಅಲ್ಲಿನ ಮಕ್ಕಳಿಗೆ ನನ್ನ ಬಟ್ಟೆ, ಆಟಿಕೆಗಳನ್ನು ಕಳುಹಿಸುತ್ತೇನೆ” ಎಂದು ಬಾಲಕ ಹೇಳಿದ್ದಾನೆ. ಇದನ್ನೂ ಓದಿ: ಟರ್ಕಿ ಭೂಕಂಪ- ಎಂಟು ವರ್ಷದ ಬಾಲಕಿಯನ್ನು ರಕ್ಷಿಸಿದ NDRF
ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿರುವ ವಿನಾಶಕಾರಿ ಭೂಕಂಪದಿಂದ ಈವರೆಗೆ 28,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಕರ್ತರು ಕೊರೆವ ಚಳಿಯ ನಡುವೆಯೂ, ಅವಶೇಷಗಳಡಿ ಸಿಲುಕಿರುವ ಸಂತ್ರಸ್ತರ ರಕ್ಷಣೆ ಕಾರ್ಯ ನಡೆಸುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k