– ವಿಶ್ವದ ಅತ್ಯಂತ ಕಿರಿಯ ಪದವೀಧರನಾಗುವತ್ತ ಹೆಜ್ಜೆ
ಹೇಗ್: 9 ವರ್ಷದ ಪೋರನೊಬ್ಬ ಎಂಜಿನಿಯರಿಂಗ್ ಪದವಿ ಗಳಿಸುವ ಸಿದ್ಧತೆಯಲ್ಲಿ ತೊಡಗಿದ್ದಾನೆ.
ಹೌದು. ಅರ್ಧ ಬೆಲ್ಜಿಯಂ ಹಾಗೂ ಅರ್ಧ ಡಚ್‍ನವನಾಗಿರುವ ವಿದ್ಯಾರ್ಥಿ ಲಾರೆಂಟ್ ಸೈಮನ್ಸ್ ಅತ್ಯಂತ ಕಿರಿಯ ವಯಸ್ಸಿನಲ್ಲಿ ಪದವಿ ಪೂರೈಸುವ ಸಿದ್ಧತೆ ಮಾಡುತ್ತಿದ್ದಾನೆ.
Advertisement
ಈ ಪುಟ್ಟ ಪ್ರತಿಭೆ, ನೆದರ್ ಲ್ಯಾಂಡ್ ಐಂಡ್‍ಹೋವನ್ ತಂತ್ರಜ್ಞಾನ ವಿಶ್ವವಿದ್ಯಾಲಯ(ಟಿಯುಇ)ದಿಂದ ಡಿಸೆಂಬರ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಪಡೆಯಲಿದ್ದಾನೆ.
Advertisement
ಈತನ ಬಗ್ಗೆ ಸುದ್ದಿಸಂಸ್ಥೆಯೊಂದು ವರದಿ ಮಾಡಿದ್ದು, ಲಾರೆಂಟ್‍ಗೆ ಕನಿಷ್ಠ 145 ಐಕ್ಯೂ(ಬುದ್ಧಿಮತ್ತೆ ಪ್ರಮಾಣ) ಇದೆ. ಈತ ತನ್ನ ಪ್ರೌಢ ಶಾಲಾ ಅಧ್ಯಯನವನ್ನು ಎಂಟನೇ ವಯಸ್ಸಿನಲ್ಲಿ ಕೇವಲ 18 ತಿಂಗಳಲ್ಲಿ ಪೂರೈಸಿದ್ದಾನೆ. ಇದೀಗ ಪ್ರಸಕ್ತ ಸಾಲಿನಲ್ಲಿ ಪದವಿ ಕೋರ್ಸ್‍ಗೆ ಸೇರುವ ಮೂಲಕ ವಿಶ್ವವಿದ್ಯಾಲಯದ ಅತ್ಯಂತ ಕಿರಿಯ ವಿದ್ಯಾರ್ಥಿಯಾಗಿದ್ದಾನೆ.
Advertisement
Advertisement
ಲಾರೆಂಟ್ ತಂದೆ ಅಲೆಕ್ಸಾಂಡರ್ ಸೈಮನ್ಸ್ ಈ ಕುರಿತು ಪ್ರತಿಕ್ರಿಯಿಸಿ, ಲಾರೆಂಟ್ ಒಂಬತ್ತು ವರ್ಷದೊಳಗೆ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‍ನಲ್ಲಿ ಪಿಎಚ್‍ಡಿಗೆ ಸೇರ್ಪಡೆಗೊಳ್ಳುವ ಯೋಜನೆ ರೂಪಿಸಿದ್ದಾನೆ. ಇದರ ಜೊತೆಗೆ ವೈದ್ಯಕೀಯದಲ್ಲಿ ಪದವಿ ಪಡೆಯಲು ಸಹ ಉತ್ಸುಕನಾಗಿದ್ದಾನೆ ಎಂದು ವಿವರಿಸಿದರು.
ಪ್ರಪಂಚದಾದ್ಯಂತ ಅನೇಕ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಲಾರೆಂಟ್ ತಮ್ಮ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆಯುವಂತೆ ಬಯಸುತ್ತಿವೆ. ಲಾರೆಂಟ್ ಮುಂದೆ ಅನೇಕ ಆಯ್ಕೆಗಳಿದ್ದರೂ ಸಹ ಅವನ ಪೋಷಕರು ಸಮತೋಲನದಿಂದಿರಲು ಬಯಸಿದ್ದಾರೆ. ಅವನು ತುಂಬಾ ಗಂಭೀರವಾಗಿರುವಂತೆ ನಾವು ಬಯಸುವುದಿಲ್ಲ. ಅವನು ಇಷ್ಟಪಡುವುದನ್ನು ಮಾಡುತ್ತಾನೆ. ತುಂಟತನ ಹಾಗೂ ಆತನ ಪ್ರತಿಭೆ ಎರಡನ್ನೂ ನಾವು ಸಮತೋಲನದಿಂದ ನೋಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಟಿಯುಇ ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ನಿರ್ದೇಶಕ ಸ್ಜೊರ್ಡ್ ಹಲ್ಶೋಫ್ ಈ ಕುರಿತು ಮಾತನಾಡಿ, ಈವರೆಗೆ ನಾವು ಕಂಡ ವಿದ್ಯಾರ್ಥಿಗಳ ಪೈಕಿ ಲಾರೆಂಟ್ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದಾನೆ. ಅವನು ಹೈಪರ್ ಇಂಟಲಿಜೆಂಟ್ ಮಾತ್ರವಲ್ಲದೆ ತುಂಬಾ ಸಹಾನುಭೂತಿಯ ಹುಡುಗನೂ ಆಗಿದ್ದಾನೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಲಾರೆಂಟ್ ತಾಯಿ ಲಿಡಿಯಾ ಮಾತನಾಡಿ, ಇವನು ವಿಶೇಷ ಹುಡುಗ ಎಂದು ಅವನ ಅಜ್ಜ-ಅಜ್ಜಿ ಮೊದಲು ಗುರುತಿಸಿದ್ದರು. ಲಾರೆಂಟ್‍ನಲ್ಲಿ ವಿಶೇಷವಾದದ್ದನ್ನು ಅವರು ಮೊದಲು ಗುರುತಿಸಿದ್ದರು ಎಂದು ತಿಳಿಸಿದರು.
ಲಾರೆಂಟ್ ಕಿರಿಯ ವಯಸ್ಸಿನಲ್ಲಿ ಪದವಿ ಪೂರೈಸಿ ಸಾಧನೆ ಮಾಡಿದಲ್ಲಿ, ಮುಂದಿನ ತಿಂಗಳು ಪದವಿ ಪಡೆದ ನಂತರ ಮೈಕಲ್ ಕಿರ್ನಿಯಿಂದ ವಿಶ್ವದ ಕಿರಿಯ ಪದವೀಧರ ಎಂಬ ಬಿರುದನ್ನು ಪಡೆರಯಲಿದ್ದಾನೆ. ಈ ಹಿಂದೆ ಮೈಕಲ್ ಹತ್ತನೇ ವಯಸ್ಸಿನಲ್ಲಿ ಅಲಬಾನಾ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದ. ಇದೀಗ ಲಾರೆಂಟ್ 9ನೇ ವಯಸ್ಸಿಗೆ ಪದವಿ ಪೂರೈಸಲು ಸಿದ್ಧತೆ ನಡೆಸಿದ್ದಾನೆ. ಪದವಿ ಪೂರೈಸಿದಲ್ಲಿ ಮೈಕಲ್‍ನನ್ನು ಹಿಂದಿಕ್ಕಿ ಅತ್ಯಂತ ಕಿರಿಯ ವಯಸ್ಸಿನ ಪದವಿಧರನಾಗಲಿದ್ದಾನೆ.