ಗುರಿ ನಿರ್ದಿಷ್ಟವಾಗಿದ್ದರೆ ನಮ್ಮ ಸಾಧನೆಗೆ ಯಾವುದೇ ಅಡ್ಡಿ ಬಂದರು ಸಾಧಿಸುವ ಛಲ ನಮ್ಮನ್ನು ಮುಂದೆ ಕರೆದೊಯ್ಯುತ್ತದೆ. ಯಾವುದೇ ವಯಸ್ಸಿನ ಮೀತಿ ಇರುವುದಿಲ್ಲ ಎನ್ನುವುದಕ್ಕೆ ಉತ್ತಮ ಉದಾಹರಣೆ ಎನ್ನುವಂತೆ ಇಲ್ಲೊಬ್ಬ ಬಾಲಕ 9ನೇ ವಯಸ್ಸಿಗೆ ಯೋಗಾ ಟೀಚರ್ ಆಗುವುದರ ಜೊತೆಗೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಬುಕ್‍ನಲ್ಲಿ ದಾಖಲೆ ಬರೆದಿದ್ದಾನೆ.
ರೆಯಾಶ್ ಸುರಾನಿ(Reyansh Surani) 9ನೇ ವರ್ಷದಲ್ಲಿ ಈ ಸಾಧನೆ ಮಾಡಿದ್ದಾನೆ. ರೆಯಾಶ್, ಆನಂದ ಶೇಖರ್ ಯೋಗ ಶಾಲೆಯಲ್ಲಿ 200 ಗಂಟೆಗಳ ಯೋಗ ತರಬೇತಿಯನ್ನು ಪಡೆದು ನಂತರ ಪ್ರಮಾಣಪತ್ರವನ್ನು ಪಡೆದಿದ್ದಾನೆ. ವಲ್ರ್ಡ್ ರೆಕಾರ್ಡ್ ವರದಿಯ ಪ್ರಕಾರ ರೆಯಾಶ್ ತನ್ನ 4ನೇ ವಯಸ್ಸಿಗೇ ಯೋಗದ ತರಬೇತಿ ಪಡೆಯಲು ಆರಂಭಿಸಿದ್ದನು. ಸದ್ಯ ಅತೀ ಕಿರಿಯ ಯೋಗ ಟೀಚರ್ ಬಗ್ಗೆ ಕೇಳಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ತನ್ನ ಯುಟ್ಯೂಬ್‍ನಲ್ಲಿ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ಗಂಡನ ವೀರ್ಯವನ್ನು ಕೇಕ್‍ನಲ್ಲಿ ಮಿಕ್ಸ್ ಮಾಡಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಶಿಕ್ಷಕಿಗೆ 40 ವರ್ಷ ಜೈಲು
ವೀಡಿಯೋದಲ್ಲಿ ಏನಿದೆ?: ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಹಂಚಿಕೊಂಡಿರುವ ವೀಡಿಯೋದಲ್ಲಿ ಬಾಲಕ ಮೊದಲು ತನ್ನ ಪರಿಚಯವನ್ನು ಮಾಡಿಕೊಳ್ಳುತ್ತಾನೆ. ನಂತರ ಯೋಗದ ಬಗೆಗೆ ಆತನಿಗಿರುವ ಆಸಕ್ತಿಯ ಬಗ್ಗೆ ಹೇಳುತ್ತಾನೆ. ಯೋಗವನ್ನು ಮಾಡುವುದನ್ನು ಎಂಜಾಯ್ ಮಾಡುತ್ತೇನೆ. ಯೋಗದಿಂದ ಇಂಟರ್‌ನೇಟ್ ಮತ್ತು ಏರ್ಕೂಲರ್ಗಳಿಲ್ಲದೆಯೂ ಬದುಕಬಹುದು ಎಂದಿದ್ದಾನೆ. ಸದ್ಯ ಈ ವೀಡಿಯೋ ಎಲ್ಲೆಡೆ ಸಖತ್ ವೈರಲ್ ಆಗಿದೆ. ಈತನ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮನೆ, ಮನೆಗೆ ಉಚಿತ ಸಿಲಿಂಡರ್: ರಾಜನಾಥ್ ಸಿಂಗ್ ಆಶ್ವಾಸನೆ