ಕೀವ್: ರಷ್ಯಾ ಆಕ್ರಮಣದಿಂದಾಗಿ ಮೃತಪಟ್ಟ ತನ್ನ ತಾಯಿಗೆ 9 ವರ್ಷ ವಯಸ್ಸಿನ ಮಗಳು ಬರೆದಿರುವ ಪತ್ರ ಮನಕಲಕುವಂತಿದೆ.
ಉಕ್ರೇನ್‌ನ ಬೊರೊಡ್ಯಾಂಕದ ಗಾಲಿಯಾ ಎಂಬ ಹುಡುಗಿ, ರಷ್ಯಾ ಆಕ್ರಮಣದಿಂದಾಗಿ ಮೃತಪಟ್ಟ ತನ್ನ ತಾಯಿಗೆ ಭಾವುಕವಾಗಿ ಪತ್ರ ಬರೆದಿದ್ದಾಳೆ. ಪತ್ರದ ಹಸ್ತಾಕ್ಷರದ ಫೋಟೋವನ್ನು ಉಕ್ರೇನ್ ಸಚಿವ ಆಂಟನ್ ಗೆರಾಶ್ಚೆಂಕೊ ಅವರು ಟ್ವೀಟ್ ಮಾಡಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಭಾರತದೊಂದಿಗೆ ಶಾಂತಿಯುತ, ಸಹಕಾರಿ ಬಾಂಧವ್ಯ ಬಯಸುತ್ತೇವೆ: ಮೋದಿಗೆ ಪಾಕ್ ಪ್ರಧಾನಿ ಪ್ರತಿಕ್ರಿಯೆ
Advertisement
Advertisement
ಪತ್ರದಲ್ಲೇನಿದೆ?
ಅಮ್ಮ! ವಿಶ್ವದಲ್ಲೇ ನೀನು ನನ್ನ ಶ್ರೇಷ್ಠ ಅಮ್ಮ. ನಿನ್ನನ್ನು ನಾನೆಂದಿಗೂ ಮರೆಯುವುದಿಲ್ಲ. ನೀನು ಸ್ವರ್ಗಸ್ಥಳಾಗಿ ಸಂತೋಷದಿಂದಿರಬೇಕು ಎಂದು ನಾನು ಬಯಸುತ್ತೇನೆ. ನಾನು ಕೂಡ ಒಳ್ಳೆಯ ವ್ಯಕ್ತಿಯಾಗಿ ಸ್ವರ್ಗಕ್ಕೆ ಬರುವಂತಹ ಕೆಲಸವನ್ನು ಮಾಡಲು ಪ್ರಯತ್ನಿಸುತ್ತೇನೆ. ನಿಮ್ಮನ್ನು ಸ್ವರ್ಗದಲ್ಲಿ ಭೇಟಿಯಾಗುತ್ತೇನೆ! ಗಾಲಿಯಾ.. ಎಂದು ಭಾವನಾತ್ಮಕವಾಗಿ ಪತ್ರ ಬರೆದಿದ್ದಾಳೆ.
Advertisement
Here's the letter from 9-old girl to her mom who died in #Borodianka.
"Mom!
You're the best mom in the whole world. I'll never forget you. I wish you'll get in Heaven and be happy there. I'll do my best to be a good person and get in Heaven too. See you in Heaven!
Galia xx". pic.twitter.com/07l7vfQxM4
— Anton Gerashchenko (@Gerashchenko_en) April 8, 2022
Advertisement
ಪತ್ರವು ಉಕ್ರೇನ್ ಭಾಷೆಯಲ್ಲಿದೆ. ಸಚಿವ ಆಂಟನ್ ಗೆರಾಶ್ಚೆಂಕೊ ಅವರು ಅದನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: 3 ವಾರದಿಂದ ಮನೆಯಲ್ಲೇ ಬಂಧಿ- ಆಹಾರಕ್ಕಾಗಿ ಶಾಂಘೈ ನಿವಾಸಿಗಳ ಆಕ್ರಂದನ
ಹುಡುಗಿಯ ಪತ್ರಕ್ಕೆ ಅನೇಕರು ಕಂಬನಿ ಮಿಡಿದಿದ್ದಾರೆ. ಒಳ್ಳೆಯ ಭವಿಷ್ಯ ನಿನ್ನದಾಗಲಿ ಎಂದು ಹಾರೈಸಿದ್ದಾರೆ.